ನಾನು-ಅವಳು ಜೊತೆಯಲ್ಲೇ ಇರದೆ ಆ ಮಗು ನನ್ನದೇಗೆ ಆಗುತ್ತೆ : ನಟಿ, ಸಂಸದೆ ನುಸ್ರತ್ ಗಂಡ

Date:

ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು ಗರ್ಭಿಣಿ ಎಂದು ಹೇಳಲಾಗುತ್ತಿದೆ, ಇದೇನು ಹೊಸ ವಿಷಯ ಅಲ್ಲ. ಆದರೆ ನುಸ್ರತ್ ಜಹಾನ್ ಗರ್ಭದಲ್ಲಿರುವ ಮಗು ನನ್ನದಲ್ಲ ಎಂದು ಪತಿ ನಿಖಿಲ್ ಜೈನ್ ಹೇಳಿದ್ದು ಶಾಕಿಂಗ್ ಆಗಿದೆ, ಹಾಗಾದರೆ ನುಸ್ರತ್, ನಿಖಿಲ್ ಒಂದಾಗಿಲ್ಲವೇ?
ಗರ್ಭಿಣಿಯಾಗಿರುವ ಕುರಿತು ಸುಸ್ರತ್ ಜಹಾನ್ ಯಾವ ಹೇಳಿಕೆಯನ್ನೂ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದಾದ ಮೇಲೆ ಒಂದರಂತೆ ನುಸ್ರತ್ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಹಳೆಯ ಫೋಟೋಶೂಟ್ ವಿಡಿಯೋ ಹಂಚಿಕೊಂಡು “ಗಟ್ಟಿಯಾಗಿರಿ, ನಿರ್ಭೀತಿಯಿಂದಿರಿ, ಸುಂದರವಾಗಿರಿ” ಎಂದು ಕ್ಯಾಪ್ಶನ್ ನೀಡಿದ್ದರು.
ನಿಖಿಲ್ ಜೈನ್ ಅವರು ನಮ್ಮ ಮದುವೆ ಮುರಿದು ಬಿದ್ದಿದೆ ಎಂದು ಹೇಳಿದ್ದಾರೆ. “ಕಳೆದ ಆರು ತಿಂಗಳಿನಿಂದ ನಾವಿಬ್ಬರೂ ಒಟ್ಟಾಗಿಲ್ಲ ಎಂದು ಕೂಡ ನಿಖಿಲ್ ಹೇಳಿದ್ದಾರೆ. ಹೀಗಾಗಿ ಅದು ನನ್ನ ಮಗು ಅಲ್ಲ” ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ಅವರಿಬ್ಬರು ಜೊತೆಗಿರುವ ಫೋಟೋಗಳನ್ನು ನಿಖಿಲ್, ನುಸ್ರತ್ ಡಿಲಿಟ್ ಮಾಡಿದ್ದಾರೆ.


ಈ ಹಿಂದಿನಿಂದಲೂ ಕೂಡ ನುಸ್ರತ್, ನಿಖಿಲ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ವದಂತಿಗಳು ಕೇಳಿ ಬರುತ್ತಿದ್ದವು. ಆದರೆ ಈ ಬಗ್ಗೆ ನುಸ್ರತ್ ಮಾತನಾಡಿರಲಿಲ್ಲ. ಇನ್ನು ಸಹನಟ ಯಶ್ ದಾಸ್‌ಗುಪ್ತ ಜೊತೆಗೆ ನುಸ್ರತ್ ಕ್ಲೋಸ್ ಆಗಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಹೊಸ ವರ್ಷದ ಆಚರಣೆಗಾಗಿ ನುಸ್ರತ್, ಯಶ್ ರಾಜಸ್ಥಾನಕ್ಕೆ ಟ್ರಿಪ್ ಹೋಗಿದ್ದರು ಎನ್ನಲಾಗಿದೆ.
“ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಜನರು ಯಾವಾಗಲೂ ನನ್ನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ, ಹೀಗಾಗಿ ನಾನು ಈ ಬಾರಿ ಕಾಮೆಂಟ್ ಮಾಡೋದಿಲ್ಲ. ಕೆಟ್ಟದ್ದಾಗಲೀ, ಒಳ್ಳೆಯದಾಗಲೀ, ಗಲೀಜಾಗಲಿ ಅದು ನನ್ನ ವೈಯಕ್ತಿಕ ಜೀವನ. ಯಾರ ಬಳಿಯೂ ನಾನು ಶೇರ್ ಮಾಡಿಕೊಳ್ಳೋದಿಲ್ಲ” ಅಂತ ನುಸ್ರತ್ ಹೇಳಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...