ಮಕ್ಕಳಿಗೆ ಲಸಿಕೆ ಯಾವಾಗ ಸಿಗಬಹುದು?

Date:

ಮುಂದಿನ ಕೊರೊನಾ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿಸಲು ಕಾಯುತ್ತಿದ್ದಾರೆ.
ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಚರ್ಚೆ ನಡೆಯುತ್ತಿದ್ದು, ಈ ನಡುವೆ ಮಕ್ಕಳಿಗೆ ದೇಶದಲ್ಲಿ ಕೊರೊನಾ ಲಸಿಕೆಗಳು ಯಾವಾಗ ಲಭ್ಯವಾಗಲಿವೆ? ಯಾವ ಯಾವ ಲಸಿಕೆಗಳು ಅಭಿವೃದ್ಧಿಗೊಳ್ಳಲಿವೆ ಎಂಬುದು ಪೋಷಕರ ಪ್ರಶ್ನೆಯಾಗಿದೆ.


ಕೇಂದ್ರದ ಯೋಜನೆಯಂತೆ ಆದರೆ, ಭಾರತದಲ್ಲಿ ಮಕ್ಕಳಿಗೆಂದೇ ಇನ್ನು ಕೆಲವೇ ತಿಂಗಳುಗಳಲ್ಲಿ ನಾಲ್ಕು ಲಸಿಕೆಗಳು ಸಿದ್ಧಗೊಳ್ಳಲಿವೆ. ಅವು ಯಾವುವು? ಮುಂದಿದೆ ಉತ್ತರ…

ಝೈಡಸ್ ಲಸಿಕೆ: ಝೈಡಸ್ ಕಂಪನಿ ಮಕ್ಕಳಿಗೆಂದೇ ಲಸಿಕೆ ಅಭಿವೃದ್ಧಿಪಡಿಸಿದ್ದು, ಇದರ ಪ್ರಯೋಗ ಪೂರ್ಣಗೊಳ್ಳುವ ಹಂತದಲ್ಲಿದೆ. ಅನುಮೋದನೆ ದೊರೆತರೆ, ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ 12-18 ವಯೋಮಾನದ ಮಕ್ಕಳಿಗೆ ಈ ಲಸಿಕೆ ಲಭ್ಯವಾಗಲಿದೆ.
ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೂಗಿನ ಲಸಿಕೆ BBV154 ಮೊದಲ ಹಂತದ ಪ್ರಯೋಗ ಸಂಪೂರ್ಣವಾಗಿದೆ. ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ ನೀಡುವುದು ಸುಲಭ ಎಂಬ ಆಲೋಚನೆ ಈ ಲಸಿಕೆ ಅಭಿವೃದ್ಧಿ ಹಿಂದಿದೆ.


ಕೋವ್ಯಾಕ್ಸಿನ್: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದ್ದು, 2-18 ವಯೋಮಾನದ ಮಕ್ಕಳ ಮೇಲೆ ಪ್ರಯೋಗ ಆರಂಭವಾಗಿದೆ. ಸೆಪ್ಟೆಂಬರ್ ವೇಳೆಗೆ ಈ ಪ್ರಯೋಗದ ಫಲಿತಾಂಶ ದೊರೆಯಲಿದ್ದು, ಅನುಮೋದನೆ ನಂತರ ಮಕ್ಕಳಿಗೆ ಲಸಿಕೆ ದೊರೆಯಬಹುದಾಗಿದೆ.

ನೋವಾವ್ಯಾಕ್ಸ್: ಸೆರಂ ಇನ್‌ಸ್ಟಿಟ್ಯೂಟ್‌, ನೋವಾವ್ಯಾಕ್ಸ್‌ನ “ಕೋವಾವ್ಯಾಕ್ಸ್‌” ಲಸಿಕೆಯ ಪ್ರಯೋಗವನ್ನು ಜುಲೈನಲ್ಲಿ ಆರಂಭಿಸುವ ಯೋಜನೆ ಹೊಂದಿದೆ. ಭಾರತದಲ್ಲಿ ಮಕ್ಕಳಿಗೆ ನೀಡಲು ಯೋಜಿಸಿರುವ ನಾಲ್ಕನೇ ಲಸಿಕೆ ಇದಾಗಿದೆ. ಈ ಮುನ್ನ ಫೈಜರ್ ಲಸಿಕೆಗೆ ಅನುಮತಿ ದೊರೆತರೆ ಅದನ್ನೂ ನೀಡುವ ಸಾಧ್ಯತೆಯಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...