ದುಡ್ಡು ಅಂದ್ರೆ ಬಾಯ್ ಬಾಯ್ ಬಿಡೋರೇ ಹೆಚ್ಚು..! ನೂರು ರೂಪಾಯಿ ನೋಟೊಂದು ದಾರಿಯಲ್ಲಿ ಸಿಕ್ರೆ ಕೊಳಚೆಗೆ ಸೊಳ್ಳೆ ಮುತ್ತಿದಂಗೆ, ಸ್ವೀಟಿಗೆ ನೊಣ ಮುತ್ತಿದಂಗೆ ಆ ನೋಟಿಗಾಗಿ ಸಾಯೋ ಮಂದಿಯೇ ಇದ್ದಾರೆ..! ಹಣಕ್ಕಾಗಿ ತಂದೆ, ತಾಯಿ ಅಜ್ಜ, ಅಜ್ಜಿ, ಫ್ರೆಂಡ್ಸ್ ಅನ್ನೇ ಕೊಲೆಮಾಡಿದ ದುಡ್ಡಿನ ಪಿಶಾಚಿಗಳ ಬಗ್ಗೆಯೂ ಕೇಳಿದ್ದೀರಿ ಅಥವಾ ಅಂತಹವರನ್ನು ನೀವೇ ಕಣ್ಣಾರೆ ನೋಡಿಯೂ ಇದ್ದೀರಿ..! ಅಂತದ್ರಲ್ಲಿ ಯಾರಿಗೂ ಸಿಗದೇ ನಮಗೇ ಎಲ್ಲಾದ್ರೂ ಯಾರದ್ದೋ ಪರ್ಸೋ, ಚೈನೋ ಇನ್ನೇನೋ ಸಿಕ್ಕಿದ್ರೆ..? ಯಾರಿದ್ದೂ ಅಂತ ಗೊತ್ತಿದ್ರೂ ಅವರಿಗೆ ಕೊಡದ ಮಂದಿಯೇ ಜಾಸ್ತಿ..! ಇಂಥಹಾ ಕಾಲದಲ್ಲಿಯೂ ನಾವು ತುಂಬಾ ಪ್ರಮಾಣಿಕರನ್ನು ಕೂಡ ನೋಡಲು ಸಾಧ್ಯವಿದೆ..! ಅಂಥವರಲ್ಲಿ ಒಬ್ಬರಾದ ಮುಂಬೈನ ಹಾನೆಸ್ಟ್ ಕಂಡೆಕ್ಟರ್ ತೋರಿದ ಪ್ರಮಾಣಿಕತೆ ಎಂಥಹದ್ದು ಅನ್ನೋದನ್ನು ನೀವೇ ನೋಡಿ..!
ಪ್ರಾಚಿ ಚೌಹಾನ್ ಎಂಬುವವರ ತಂದೆ ಘಾಟ್ಕೋಪರ್ ನಿಂದ ವಿಕ್ರೋಲಿಗೆ ಹೋಗಿದ್ರು..! ಬಸ್ ಇಳಿಯುವಾಗ ಪರ್ಸ್ ಬಸ್ ನ ಮೆಟ್ಟಿಲಿನ ಮೇಲೆ ಬೀಳುತ್ತೇ..! ಅದನ್ನು ಗಮನಿಸದೇ ಹಾಗೇ ಇಳಿದು ಬರ್ತಾರೆ..! ಆ ಪರ್ಸಲ್ಲಿ 7000ರೂಪಾಯಿಗಳು, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೀನಿಯರ್ ಸಿಟಿಜನ್ ಗುರುತು ಚೀಟಿ ಕೂಡ ಇರುತ್ತೆ..! ಅದು ಅದೃಷ್ಟವಶಾತ್ ಕಂಡೆಕ್ಟರ್ ಗ್ವಾಯಕ್ವಾಡ್ ಗೆ ಸಿಗುತ್ತೆ..! ಅವರು ಫೋನ್ ಮಾಡಿ ನಿಮ್ಮ ಪರ್ಸ್ , ಎಟಿಎಂ ಕಾರ್ಡ್ ಐಡಿ ಕಾರ್ಡ್ ಎಲ್ಲವೂ ನನ್ನ ಬಳಿ ಇದೆ..! ಯಾವಾಗ ಬರಲಿಕ್ಕೆ ಆಗುತ್ತಾ ಆಗ ಬಂದು ತೆಗೆದುಕೊಳ್ಳಿ ಅಂತ ಫೋನ್ ಮಾಡಿ ಹೇಳ್ತಾರೆ..! ನಂತರ ಆ ವ್ಯಕ್ತಿ ಎಲ್ಲಿ ಅವುಗಳನ್ನು ಕಳೆದುಕೊಂಡ ಸ್ಥಳಕ್ಕೇ ಹೋಗಿ ಆ ಪ್ರಾಮಾಣಿಕ ಕಂಡೆಕ್ಟರ್ ಗೆ ಧನ್ಯವಾದ ಸಮರ್ಪಿಸಿ, ಪರ್ಸ್ ಹಿಂಪಡೆದುಕೊಂಡು ಬರ್ತಾರೆ..! ಅಷ್ಟೇ ಅಲ್ಲ ಆ ಪ್ರಾಮಾಣಿಕ ಕಂಡೆಕ್ಟರ್ ನ ಫೋಟೋ ತೆಗದು ಆತನ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಆತನನ್ನು ಕೊಂಡಾಡುದ್ರು..!
ಸ್ಟೋರಿ ಚಿಕ್ಕದೇ ಆದರೇ ಕಂಡೆಕ್ಟರ್ ಗ್ವಾಯಕ್ವಾಡ್ ರಂಥ ಪ್ರಾಮಾಣಿಕ ಜನರು ತುಂಬಾನೇ ಅಪರೂಪ..! ಇಂಥವರನ್ನೂ ನಾಲ್ಕಾರು ಜನಕ್ಕೆ ಪರಿಚಯಿಸದೇ ಇದ್ರೇ..ನಾವು ದಂಡ..! ಸೋ ಚಿಕ್ಕ ಸ್ಟೋರಿಯನ್ನು ಚೊಕ್ಕದಾಗಿ ನಿಮ್ಮ ಮುಂದೆ ತಂದಿದ್ದೇವೆ..! ನೀವು ಎಷ್ಟು ಜನರಿಗೆ ತಲುಪಿಸುತ್ತೀರೋ..? ಅದು ನಿಮಗೆ ಬಿಟ್ಟಿದ್ದು..!
- ಶಶಿಧರ ಡಿ ಎಸ್ ದೋಣಿಹಕ್ಲು