ಹಲೋ ನಾನು ಸೋಶಿಯಲ್ ವರ್ಕರ್, ಸಾಮಾಜಿಕ ಕಾರ್ಯಕರ್ತ ರೀ.. ಎಂದು ಬ್ಯಾಂಕಿಗೆ ಹೋದ್ರೆ? ಬನ್ನಿ, ಬನ್ನಿ ಅಂತ ಕರೆದು ಕೂರಿಸಿ ತಕ್ಷಣ ಲೋನ್ ಸ್ಯಾಕ್ಷನ್ ಮಾಡ್ತಾರಾ? ಇಲ್ಲ, ಯಾವ ಬ್ಯಾಂಕ್ ಕೂಡ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡ ಮಟ್ಟಗೆ ವ್ಯಕ್ತಿಗೆ ಸಾಲ ನೀಡಲ್ಲ. ಆದ್ರೆ ಸೋಶಿಯಲ್ ನೆಟ್‍ವರ್ಕ್ ಆ್ಯಕ್ಟಿವ್ ಯೂಸರ್ ಅಂದ್ರೆ ಕರೆದು ಸಾಲ ಕೊಡ್ತಾರೆ..!
ಸುಳ್ಳಲ್ಲ, ನೀವು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಫೇಮಸ್ ಅಂತ ತೋರಿಸಿಕೊಟ್ರೆ ಸಾಲ ಸಿಗುತ್ತೆ..! ಈಗ ಈ ಸೋಶಿಯಲ್ ನೆಟ್‍ವರ್ಕ್‍ಗಳು ನೀವು ಎಷ್ಟು ಜನ ಫ್ರೆಂಡ್ಸ್‍ನ ಹೊಂದಿದ್ದೀರಾ? ನಿಮ್ಮ ಫೋಟೋ, ಸ್ಟೇಟಸ್‍ಗೆ ಎಷ್ಟು ಲೈಕ್ ಬರುತ್ತೆ ಎನ್ನುವ ಕುತೂಹಲಕ್ಕೆ, ನಿಮ್ಮ ಜನಪ್ರಿಯುತೆ ಸೀಮಿತವಾಗಿಲ್ಲ..! ಲೋನ್‍ಗೆ ಒಂಥರಾ ಶೂರಿಟಿ ಕೂಡ ಹೌದು..! ಇದು ನಿಮಗೆ ಎಷ್ಟು ಸಾಲ ನೀಡಬಹುದೆಂದು ಕೂಡ ದೃಡಪಡಿಸುತ್ತೆ..!
ಈಗತಾನೆ ಉದ್ಯೋಗ ಹಿಡಿದವರು, ಹೊಸ ಬ್ಯುಸ್‍ನೆಸ್ ಮಾಡುವ ಯೋಚನೆಯಲ್ಲಿರೋರು, ಸುಲಭದಲ್ಲಿ ಲೊನ್ ಪಡೆಯಬಹುದು..! ಸಾಮಾಜಿಕ ಜಾಲತಾಣಗಳಲ್ಲಿ ಭಾಗವಹಿಸುವಿಕೆಯ ಆಧಾರದ ಮೇಲೆ ವಿಶ್ವಾಸರ್ಹತೆ ಹೊಂದಿ ಲೋನ್ ಪಾಸ್ ಮಾಡುವ ಕಾಲ ಬಂದಿರೋದು ನಿಜಕ್ಕೂ ಆಶ್ಚರ್ಯವೆನಿಸಿದರೂ ಸತ್ಯ..!
ಲೋನ್‍ಗಾಗಿ ಎದುರು ನೋಡ್ತಾ ಇರೋರು ನಿಮ್ಮ ಫೇಸ್‍ಬುಕ್‍ನಲ್ಲಿ ಒಳ್ಳೆಯ ಗೆಳೆಯರನ್ನು ಹೆಚ್ಚಿಸಿಕೊಳ್ಳಿ..! ಲಿಂಕಡ್‍ಇನ್ ಕಾಂಟೆಕ್ಟ್ ಹೆಚ್ಚು ಹೆಚ್ಚು ಬೆಳೆಸಿಕೊಳ್ಳಿ..! ಬ್ಯಾಂಕ್‍ಗಳು, ಹಣ ಕಾಸು ಸಂಸ್ಥೆಗಳು ನಿಮಗೆ ಸಾಲಕೊಟ್ಟರೆ ಮರುಪಾವತಿ ಆಗುತ್ತದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ನಿಮ್ಮ ಸಾಮಾಜಿಕ ಮೌಲ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೀಗೆ ಅಳೆಯುತ್ತವೆ..!
ಕ್ರೆಡಿಟ್‍ಮಂತ್ರಿ ಎಂಬ ಸಂಸ್ಥೆ ವ್ಯಕ್ತಿಯೊಬ್ಬನ ಸೋಶಿಯಲ್ ನೆಟ್‍ವರ್ಕ್ ಸಂಪರ್ಕಗಳನ್ನು ಪತ್ತೆಮಾಡುವ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದೆ. ಇದರ ಸಹಸ್ಥಾಪಕ ರಂಜಿತ್ ಪೂಂಜಾ “ಮೊದಲ ಸಲ ಸಾಲ ತೆಗೆದುಕೊಳ್ಳುವವರಿಗೆ ಈ ಮಾದರಿ ಸಹಕಾರಿ ಆಗುತ್ತೆ. ಅವರ ಹಿಂದಿನ ಸ್ಯಾಲರಿ, ಬ್ಯಾಂಕ್ ವ್ಯವಹಾರಗಳು ಲೆಕ್ಕಕ್ಕೆ ಬರಲ್ಲ. ನಂಬಿಕಾರ್ಹತೆ ಸಾಮಾಜಿಕ ಜಾಳತಾಣಗಳನ್ನೇ ಅವಲಂಭಿಸಿವೆ ಎಂದು ಹೇಳುತ್ತಾರೆ.
ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈಗೂ ಬರಲಿದೆಯಂತೆ. ಸದ್ಯಕ್ಕೆ ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಲಿ ಸ್ಯಾಲರಿ ಎಂ ಹೆಸರಿನ ಹಣಕಾಸು ಸಂಸ್ಥೆ90ದಿನದಲ್ಲಿ 1000 ಅರ್ಜಿಗಳನ್ನು ಸಾಮಾಜಿಕಜಾಲತಾಣದ ಸಂಪರ್ಕ ನಂಬಿಕೆ ಮೇರೆ ಬರೊಬ್ಬರಿ 1.4 ಕೋಟಿ ಸಾಲ ನೀಡಿದೆ..!ಈ ಸಂಸ್ಥೆಯ ಸಿಇಒ ಅಕ್ಷಯ್ ಮೆಹ್ರೋತ್ರಾ ಈ ಬಗ್ಗೆ , ಫೇಸ್‍ಬುಕ್, ಲಿಂಕಡಿನ್, ಗೂಗಲ್ ಪ್ಲಸ್ ಡಾಟಾಗಳನ್ನು ಪರಿಶೀಲಿಸಿ, ವ್ಯಕ್ತಿ ಎಂಥವರೆಂದು ತಿಳಿದು ಸಾಲ ಕೊಡುವುದೋ ಬೇಡವೋ ಎಂದು ನಿರ್ಧರಿಸುವುದಾಗಿ ಹೇಳಿದ್ದಾರೆ…!
ನೀವ್, ನಾವು ಯಾಕ್ ಟ್ರೈ ಮಾಡ್ಬರ್ದು?
- ರಘು ಭಟ್
POPULAR STORIES :
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?