ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಭೀಕರ ದುರಂತ 36 ಮಂದಿಯ ಸಾವು 142 ಕ್ಕೂ ಹೆಚ್ಚು ಗಾಯಾಳುಗಳು

Date:

ಟರ್ಕಿಯ ಅತೀ ದೊಡ್ಡ ಪಟ್ಟಣವಾದ ಇಸ್ತಾಂಬುಲ್ ನ ಅತಾತುರ್ಕ್ ಏರ್ ಪೋರ್ಟ್ ಮಂಗಳವಾರ ರಾತ್ರಿ 10.00 ಗಂಟೆಗೆ ದುರಂತಕ್ಕೆ ಎಡೆ ಮಾಡಿ ಕೊಟ್ಟಿತು.ತ್ರಿವಳಿ ಸುಸೈಡ್ ಬಾಂಬ್ ಹಾಗೂ ಗನ್ ನಿಂದಲೂ ದಾಳಿ ನಡೆದು 2 ಪೋಲಿಸ್ ಅಧಿಕಾರಿಗಳೂ ಸೇರಿದಂತೆ ಸುಮಾರು 36 ಮಂದಿ ಸಾವನ್ನಪ್ಪಿದ್ದು ಮತ್ತು 142 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಂತಹ ಭೀಕರ ಕೃತ್ಯವನ್ನೆಸಗಿದವರು ISIS ದಳಕ್ಕೆ ಸೇರಿದವರೆಂದು ಹೇಳಲಾಗುತ್ತಿದೆ. ಇಸ್ತಾಂಬುಲ್ ಒಂದು ಸುಂದರ ಪ್ರವಾಸೀ ತಾಣವಾಗಿದ್ದು ಇಲ್ಲಿಗೆ ಬಂದು ಹೋಗುವ ವಿದೇಶಿ ಪ್ರಯಾಣಿಕರನ್ನು ಭಯಬೀತಗೊಳಿಸಲೂ ಈ ಅಮಾನವೀಯ ಕೃತ್ಯ ನಡೆಸಲಾಗಿದೆ ಎಂದೂ ಅನುಮಾನಿಸಲಾಗಿದೆ.
ಪ್ರಧಾನ ಮಂತ್ರಿಗಳು,ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಅನೇಕ ಗಣ್ಯರು ಇದೊಂದು ಅಮಾನವೀಯ ಕೃತ್ಯವೆಂದು ಹೇಳಿದ್ದಾರಲ್ಲದೆ ಘಟನೆಯಲ್ಲಿ ಸಂಭವಿಸಿದ ಸಾವು ನೊವುಗಳಿಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.ಈ ಭೀಭತ್ಸ ಘಟನೆ ಸಂಭವಿಸುವುದಕ್ಕಿಂತ ಮೊದಲು ಕೆಲವೇ ಕೆಲವು ಗಂಟೆಗಳ ಅಂತರದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಇಬ್ಬರು ಮಕ್ಕಳೊಂದಿಗೆ ಇಸ್ತಾಂಬುಲ್ನಿಂದ ಹೊರಟಿದ್ದರು,ಕನೆಕ್ಟಿಂಗ್ ಫ್ಲೈಟ್ನ್ ನ್ನು ಅವರು ಮಿಸ್ಸ್ ಮಾಡಿದ್ದಕ್ಕಾಗಿ ಅವರಿಗೆ ಗಂಟೆಗಟ್ಟಲೆ ಆ ಏರ್ಪೋರ್ಟ್ನಲ್ಲೇ ಬಾಕಿ ಉಳಿಯಬೇಕಾಯ್ತೆಂದೂ,ಅಲ್ಲಿನ ಸಿಬ್ಬಂಧಿ ಗಳ ಸಹಾಯದಿಂದ ಬ್ಯುಸಿನೆಸ್ಸ್ ಕ್ಲಾಸ್ ಟಿಕೆಟ್ ಲಭ್ಯವಾದದ್ದಕ್ಕೆ ಅವರು ಅಲ್ಲಿಂದ ಹೊರಡುವಂತಾಯಿತೆಂದು ಅವರು ಹೇಳಿರುತ್ತಾರೆ.ಅಲ್ಲಿಯ ಸಿಬ್ಬಂದಿಗಳನ್ನು ಪ್ರಶಂಸಿಸುತ್ತಾ ಘಟನೆಯ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಹಾಗೂ ಯೂರೋಪ ಖಂಡಗಳನ್ನು ಒಂದಕ್ಕೊಂದು ಬೆಸೆಯುವ ಪ್ರಪಂಚದ ಅತೀ ದೊಡ್ದ ಪಟ್ಟಣವೇ ಇಸ್ತಾಂಬುಲ್.ಇಲ್ಲಿರುವ ಅತಾತುರ್ಕ್ ಏರ್ ಪೋರ್ಟ್ ಪ್ರಪಂಚದಲ್ಲೇ 11 ನೇ ಸ್ಥಾನ ಹಾಗೂ ಯೂರೋಪ್ ನಲ್ಲೇ 3 ನೇ ಸ್ಥಾನದಲ್ಲಿರುವ 61 ಮಿಲಿಯನ್ ಯಾತ್ರಿಕರನ್ನ ಸಂಭಾಳಿಸುವ ಅತೀ ಬ್ಯುಸಿಯಾಗಿರುವ ಏರ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

  • ಸ್ವರ್ಣಲತ ಭಟ್

POPULAR  STORIES :

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow

ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?

ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?

ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!

ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...