ಏಕ್ಸಿಸ್ ಬ್ಯಾಂಕ್ ತನ್ನ ಅಮೂಲ್ಯ ಸಹಕಾರ -ಸಹಭಾಗಿತ್ವದಿಂದ ದೇಶದಲ್ಲಷ್ಟೇ ಅಲ್ಲ ಹೊರದೇಶದೊಳಿರುವ ಪ್ರತ್ಯೊಬ್ಬ ವ್ಯಕ್ತಿಯನ್ನು ತಲಪುವ ಪ್ರಯತ್ನ ನಡೆಸುತ್ತಿರೋ ಬ್ಯಾಂಕ್.ಈ ನಿಟ್ಟಿನಲ್ಲಿ ಈ ಬ್ಯಾಂಕಿನ ಹೊಸ ಪ್ರಯೋಗವೇ “Thought Factory” ,ಇದನ್ನು ಮೊತ್ತಮೊದಲ ಬಾರಿಗೆ ಬೆಂಗಳೂರಲ್ಲಿ ಪರಿಚಯಿಸುತ್ತಿದೆ.ಈ ಮೂಲಕ ಬ್ಯಾಂಕಿಂಗ್ ಸೆಕ್ಟರ್ನಲ್ಲಿರೋ ಅನೇಕ ಸಮಸ್ಯೆಗಳನ್ನು ಭೇದಿಸಿ,ನಿರಂತರವಾಗಿ ಅವುಗಳಿಗೆ ನವೀನ ಶೈಲಿಯ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತಿದೆ.
“Thought Factory” ಒಂದು ನಿರ್ದಿಷ್ಟ ವೇಗದ ಮಿತಿಯ ಆಧುನಿಕ-ವ್ಯಾವಹರಿಕ ಶೈಲಿಯ ತಂತ್ರಜ್ನಾನದ ಸೌಲಭ್ಯವಾಗಿದ್ದು,ಇಲ್ಲಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಎಲ್ಲ ಸೇವೆಗಳೂ ಏಕಕಾಲದಲ್ಲಿ ಲಭ್ಯವಾಗುವುದು.ಇದರ ಮುಖ್ಯ ಕಾರ್ಯಗಳು ಬೆಂಗಳೂರಲ್ಲಿ ನಡೆಯಲಿದ್ದು,ಡಿಜಿಟಲ್ ತಂತ್ರಜ್ನಾನದ ಮೂಲಕ ಬ್ಯಾಂಕಿಂಗ್ ನ ಸಂಪೂರ್ಣ ಬದಲಾವಣೆಯನ್ನು ಸಾಕಾರ ಗೊಳಿಸೋ ಪ್ರಯತ್ನ ನಡೆಸುತ್ತಿದೆ.ಇದಕ್ಕಾಗಿ ದೇಶದ ಹಲವು ಕಡೆಗಳಿಂದ ಹೊಸ ಪ್ರತಿಭೆಗಳನ್ನು ಹುಡುಕಿ,ಅವರನ್ನು ಇದರಲ್ಲಿ ಪೂರ್ಣ ರೂಪದಲ್ಲಿ ತೊಡಗಿಸಿಕೊಳ್ಳಲಾಗುವುದು.ಈ ಒಂದು ಪ್ರಯೋಗವನ್ನು ಸಧ್ಯಕ್ಕೆ 3 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.ಕ್ರೆಡಿಟ್ಸ್,ಡಿಪಾಸಿಟ್ಸ್,ವೆಲ್ತ್ ಮ್ಯಾನೇಜ್ಮೆಂಟ್,ಮೊಬೈಲ್ ಪೇಮೆಂಟ್ಸ್ ಹಾಗೂ ಸೆಕ್ಯೂರಿಟಿಗಳಿಗೆ ಸಂಬಂಧಿಸಿದ ಸೇವೆಗಳಲ್ಲಿ ನಿತ್ಯ ಉಂಟಾಗುವ ತೊಂದರೆಯನ್ನು ನಿವಾರಿಸಲು ತನ್ನ ಈ ಆಧುನಿಕ ತಂತ್ರಜ್ನಾನಗಳಾದ,ಬ್ಲೋಕ್ ಚೈನ್,ಆರ್ಟಿಫಿಶಲ್ ಇನ್ಟೆಲಿಜೆನ್ಸ್,ಮೊಬಿಲಿಟಿ ಇವೇ ಮೊದಲಾದವುಗಳನ್ನು ಪರಿಚಯಿಸುವತ್ತ ಮುನ್ನುಗ್ಗುತ್ತಿದೆ.
ಈ ನವೀನ ತಂತ್ರಜ್ನಾನದ ಮೂಲಕ ವ್ಯವಹಾರಸ್ಥರ ಜೀವನದಲ್ಲಿ ಬ್ಯಾಂಕಿಂಗ್ ಹಾಗೂ ಇನ್ನಿತರ ವ್ಯವಹಾರಗಳಲ್ಲೂ ಹೆಚ್ಚಿನ ಬದಲಾವಣೆಯನ್ನುಂಟು ಮಾಡೋ ಪ್ರಯತ್ನ ಇದಾಗಿದೆ.ಆಕ್ಸಿಸ್ ಬ್ಯಾಂಕ್ ಈ ತರದ ಹೊಸ ಪ್ರಯೋಗ ಮಾಡಿದ ಬ್ಯಾಂಕ್ಗಳಲ್ಲೇ ಮೊತ್ತ ಮೊದಲನೇಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಮ್ಮ ದೇಶದಲ್ಲೇ ಪ್ರೈವೇಟ್ ಬ್ಯಾಂಕಿಂಗ್ ಸೆಕ್ಟರ್ನಲ್ಲೇ ಏಕ್ಸಿಸ್ ಬ್ಯಾಂಕ್ 3 ನೇ ಸ್ಥಾನ ಪಡೆದಿರೋ ಬ್ಯಾಂಕ್,ಇದರ ಜೊತೆಯಲ್ಲೇ 2904 ಶಾಖೆಗಳನ್ನು,12,743 A.T.M ನ್ನು ಹೊಂದಿದೆ ಹಾಗೂ ಇದರ ವ್ಯವಹಾರವನ್ನು 1855 ಸಿಟಿಗಳಲ್ಲೂ,ಹಳ್ಳಿಗಳಲ್ಲೂ ವಿಸ್ತರಿಸಿದ್ದು,ಸಿಂಗಾಪುರ್,ಹೋಂಗ್ ಕಾಂಗ್,ದುಬೈ,ಕೊಲಂಬೊ ಸೇರಿದಂತೆ 9 ವಿದೇಶೀಯ ಶಾಖೆಗಳನ್ನೂ ಹೊಂದಿದೆ.
- ಸ್ವರ್ಣಲತ ಭಟ್
POPULAR STORIES :
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?
ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?
ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!
ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?