ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??

Date:

ಜೀವನದಲ್ಲಿ ಸಮಸ್ಯೆಗಳೆದುರಾದಾಗ ಎಲ್ಲವನ್ನೂ ಬಿಟ್ಟು ನಿಟ್ಟುಸಿರಿನೊಂದಿಗೆ ತಲೆಯ ಮೇಲೆ ಕೈ ಹೊತ್ತು ಕುಳಿತವರೆಷ್ಟೋ, ಅಥವಾ ತಲೆ ಎತ್ತಿ ಸವಾಲನ್ನು ಸ್ವೀಕರಿಸುತ್ತಾ, ತಮ್ಮ ಕನಸುಗಳನ್ನು ನನಸಾಗಿಸುವತ್ತ ಪರಿಶ್ರಮ ಪಡುವರೆಷ್ಟೋ???ಜೀವನದಲ್ಲಿನ ಗುರಿ ಹಾಗೂ ಅದರ ಹಿಂದಿರೋ ಪರಿಶ್ರಮದ ಬಗ್ಗೆ ಎಲ್ಲಾರಿಗೂ ಗೊತ್ತು, ಆದ್ರೆ ಅದನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸ್ಕೊಳ್ಳೋವ್ರು ಮಾತ್ರ ತುಂಬಾ ಕಡಿಮೆ ಅನ್ನ್ ಬೋದು. 18 ವರ್ಷದ ಪೀಯುಶ್ ಗೋಯಲ್ ಅಂತಹ ವಿಶೇಷ ವ್ಯಕ್ತಿಗಳಲ್ಲಿ ಒಬ್ಬ.
ರಾಜಸ್ಥಾನದ ಕೋಟಾದಲ್ಲಿ ವಾಸವಾಗಿರೋ ಈತ JEE ಪರೀಕ್ಷೆಯಲ್ಲಿ 453 ನೇ ರೇಂಕ್ ನೊಂದಿಗೆ ಪಾಸಾಗಿದ್ದಲ್ಲದೆ, ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ IIT ಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾನೆ.
ಅಯ್ಯೊ ಇದ್ರಲ್ಲೇನಿದೆಯಪ್ಪಾ ಅಂತಾ ಒಂದು ವಿಶೇಷ ಅಂತ ನೀವು ಅಂದ್ಕೊಂಡಿರ್ಬೋದು?
ಹೌದು! ಪೀಯೂಶ್ ನ ಈ ಸಾಧನೆಯ ಹಿಂದೆ ಇರೋ ಒಂದು ಸ್ಫೂರ್ತಿ ಏನಪ್ಪಾ ಅಂದ್ರೆ ಅವನ ಈ ಪರೀಕ್ಷಾ ತಯಾರಿಯು ಒಂದು ಜೈಲಿನ ಕೋಣೆಯಿಂದ ನಡೆದಿದ್ದು. ಗೊತ್ತಾಯ್ತೇನು? ಕೇವಲ ಒಂದು ಜೈಲ್ ರೂಮ್ ನಿಂದ!
ಪೀಯೂಶ್ ಕಳೆದೆರಡು ವರುಷಗಳಿಂದ ರಾಜಸ್ಥಾನದ ಕೋಟಾದ ಜೈಲಿ ನಿಂದ ಪರೀಕ್ಷೆಯ ತಯಾರಿ ನಡೆಸುತ್ತಿದ್ದ. ಅವನ ತಂದೆ ಫೂಲ್ ಚಂದ್, ಒಂದು ಕೊಲೆ ಕೇಸ್ನಲ್ಲಿ 14 ವರುಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ, ಹಾಗೂ ಶಿಕ್ಷೆಯಿನ್ನೇನು ಮುಗ್ಯೋ ಹಂತದಲ್ಲಿತ್ತು. ಪೀಯೂಶ್ ಅವನ ಜೊತೆ ಒಂದು ಓಪನ್ ಜೈಲ್ ನಲ್ಲಿ ವಾಸ ಮಾಡುತ್ತಿದ್ದ,ಅಂದರೆ ಇದೊಂದು ತರನಾದ ಜೈಲಿನ ನಿಯಮಕ್ಕೊಳಪಟ್ಟ ಸೌಲಭ್ಯವಾಗಿದ್ದು(correctional facility)ಇಲ್ಲಿ ಅಪರಾಧಿಯು ಜೈಲು ಕಟ್ಟಡದಿಂದ ಹೊರಹೋಗಲು ಅನುಮತಿ ಯಿದ್ದರೂ ಸಂಜೆಯಾಗುತ್ತಿದ್ದಂತೆ ಮತ್ತೆ ಜೈಲನ್ನು ಸೇರಬೇಕಿತ್ತು.
ಪೀಯೂಶ್ ಮನೆ ಬಾಡಿಗೆ ಹೊಂದಿಸಲಾಗಲೀ ಅಥವಾ ಹಾಸ್ಟೆಲ್ ಫೀಸ್ ನ್ನು ಕಟ್ಟೋಕಾಗಲೀ ಆರ್ಥಿಕವಾಗಿ ದುರ್ಬಲನಾದ್ದರಿಂದ ಅವನಿಗೆ ಈ ಸೌಲಭ್ಯ ನೀಡಲಾಗಿತ್ತು. ಜೈಲಿನಲ್ಲಿ ರಾತ್ರಿ 11 ಗಂಟೆಯಿಂದ ಲೈಟ್ ಇರುತ್ತಿರಲಿಲ್ಲ. ಪೀಯೂಶ್ 8×8 ರೂಮ್ ನಲ್ಲಿ ಕಷ್ಟ ಪಟ್ಟೂ ಓದಿ ಮುಂದೆ ಬಂದಿದ್ದಾನೆ. ಪೀಯೂಶ್ನ ತಂದೆ ಒಂದು ಅಂಗಡಿಯಲ್ಲಿ ಕೆಲಸಕ್ಕಿದ್ದಾಗ ಬಂದ ಹಣದಿಂದ ಪೀಯೂಶ್ ನ ವಿಧ್ಯಾಭ್ಯಾಸಕ್ಕೆ ನೆರವಾಯಿತು.
ಜೈಲು ಅಧಿಕಾರಿಗಳು ತುಂಬಾ ಸಹಾಯ ಮಾಡುತ್ತಿದ್ದು, ಡ್ಯೂಟಿಯಲ್ಲಿದ್ದ ಗಾರ್ಡ್ ಗಳು ಯಾವಾಗಲೂ ಪೀಯೂಶ್ ನಲ್ಲಿ ಧೈರ್ಯ ತುಂಬುತ್ತಿದ್ದರು ಅನ್ನುತ್ತಾರೆ ಪೀಯೂಶ್ ನ ತಂದೆ.
ಪೀಯೂಶ್ ಹೇಳೋ ಪ್ರಕಾರ ಜೈಲ್ ಆಗಲೀ ಅಲ್ಲಿನ ವಾತಾವರಣವಾಗಲೀ ನಾವು ಅಂದು ಕೊಂಡಷ್ಟು ಕೆಟ್ಟ ದ್ದಾಗಿಲ್ಲ,ಇಲ್ಲಿಯ ಹಾಗೂ ಇಲ್ಲಿನವರ ಉದಾರ ಮನೋಭಾವನೆಯೆ ಇಂದು ನನಗೆ ನನ್ನ ತಂದೆಯ ಕನಸನ್ನು ನನಸಾಗಿಸುವಲ್ಲಿ ಸಹಕಾರಿಯಾಯಿತು ಅನ್ನುತ್ತಾನೆ ಪೀಯೂಶ್.
ಪೀಯೂಶ್ ನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ.

  • ಸ್ವರ್ಣಲತ ಭಟ್

POPULAR  STORIES :

ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!

ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?

ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...