ನಟಿ ಮಲೈಕಾ ಅರೋರ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದಿಂದ, ತಮ್ಮ ಗ್ಲಾಮರಸ್ ಮೈಮಾಟದಿಂದ ಸುದ್ದಿಯಾದವರು.
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗೆ ವಿವಾಹವಾಗಿದ್ದ ಮಲೈಕಾ ಅರೋರಾಗೆ ಒಬ್ಬ 9 ವರ್ಷದ ಮಗನಿದ್ದಾನೆ. ಆದರೆ 2016ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರ ದೂರಾಗಿದ್ದು ವಿಚ್ಛೇಧನ ಪಡೆದಿದ್ದಾರೆ. ವಿಚ್ಛೇಧನದ ಬಳಿಕ ಮಲೈಕಾ ಅರೋರ ಯುವ ನಟ ಅರ್ಜುನ್ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಮಲೈಕಾ ಅರೋರಾಗೆ ಈಗ 47 ವರ್ಷ ವಯಸ್ಸಾದರೆ ಅರ್ಜುನ್ ಕಪೂರ್‌ಗೆ 36 ವರ್ಷ. ಇವರಿಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿಯೇ ಈ ಇಬ್ಬರ ಸಂಬಂಧ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಗೆ ಗುರಿಯಾಗಿದೆ.
ಬಹಿರಂಗವಾಗಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮಲೈಕಾ ಅರೋರಾ ವ್ಯಕ್ತಿತ್ವವೂ ಸಹ ಬಹಳ ಬೋಲ್ಡ್. ಇದೀಗ ಸೂಪರ್ ಮಾಡೆಲ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಮಲೈಕಾ, ಸಹ ಜಡ್ಜ್ ಮಿಲಿಂದ್ ಸುಮನ್ ಜೊತೆಗೆ ಮಾತನಾಡುತ್ತಾ, ಯಾವ ರೀತಿಯ ಪುರುಷರು ತಮಗೆ ಇಷ್ಟವಾಗುತ್ತಾರೆ, ಯಾವ ರೀತಿಯ ಪುರುಷರು ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ಯಾವ ರೀತಿಯ ಪುರುಷರು ನಿಮ್ಮನ್ನು ಉದ್ದೀಪನಗೊಳಿಸುತ್ತಾರೆ ಎಂಬ ಮಿಲಿಂದ್ ಸುಮನ್‌ನ ಪ್ರಶ್ನೆಗೆ ಉತ್ತರಿಸಿರುವ ಮಲೈಕಾ ಅರೊರಾ, ”ರಫ್ ಆಗಿರುವ ಪುರುಷರು, ಗಂಭೀರವಾಗಿ ಫ್ಲರ್ಟ್ ಮಾಡುವ ಪುರುಷರು ಹಾಗೂ ಬಹಳ ಚೆನ್ನಾಗಿ ಕಿಸ್ ಮಾಡುವ ಪುರುಷರು ನನಗೆ ಇಷ್ಟವಾಗುತ್ತಾರೆ” ಎಂದಿದ್ದಾರೆ ಮಲೈಕಾ. ”ಬೇರೊಬ್ಬರ ಬಗ್ಗೆ ಗಾಸಿಪ್ ಮಾಡುವ ಪುರುಷರು ನನಗೆ ಇಷ್ಟವಾಗುವುದಿಲ್ಲ” ಎಂದಿದ್ದಾರೆ ಮಲೈಕಾ.
ಯಾರು ನಿಮ್ಮನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಲೈಕಾ, ‘ಅರ್ಜುನ್ ಕಪೂರ್ ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆತನಿಗೆ ನನ್ನ ಒಳಗು, ಹೊರಗುಗಳೆಲ್ಲವೂ ಗೊತ್ತು. ನನ್ನ ಮನಸ್ಸನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದಾನೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ, ನನ್ನೊಂದಿಗೆ ಚೆನ್ನಾಗಿ ಹುಡುಗಾಟವೂ ಆಡುತ್ತಾನೆ” ಎಂದಿದ್ದಾರೆ ಮಲೈಕಾ.