ಮುಖ್ಯಾಂಶಗಳು
ಡಾ.ಯಶವಂತ ಮಿಶ್ರಾಗೆ ತಪ್ಪಾದ ಹಲ್ಲು ಕಿತ್ತ ಕಾರಣಕ್ಕೆ 53,000 ರೂ ದಂಡ ವಿಧಿಸಲಾಗಿದೆ.
ಕೋಲಾರ ರಸ್ತೆಯ ಶಾಲಿಮಾರ್ ನಿವಾಸಿ ನಮೃತಾ(31) ಗೆ ಮೇಲ್ದವಡೆಯಲ್ಲಿ ನೋವುಂಟಾಗಿತ್ತು.
ಈಕೆಯನ್ನು ಪರೀಕ್ಷಿಸಿದ ಡಾ.ಮಿಶ್ರಾ, ಮೇಲ್ದವಡೆಯ 8ನೇ ಹಲ್ಲನ್ನು ಕೀಳುವಂತೆ ಸಲಹೆ ನೀಡಿದ್ದರು
ವಿಲಕ್ಷಣ ವೈದ್ಯಕೀಯ ನಿರ್ಲಕ್ಷಕ್ಕಾಗಿ, ಭೋಪಾಲ್ ಮೂಲದ ದಂತವೈದ್ಯ ಡಾ. ಯಶವಂತ ಮಿಶ್ರಾ ಅವರಿಗೆ , ಶಸ್ತ್ರ ಚಿಕಿತ್ಸೆ ವೇಳೆ ತಪ್ಪಾದ ಹಲ್ಲು ಕಿತ್ತ ಕಾರಣಕ್ಕಾಗಿ 53,000ರೂ ದಂಡ ವಿಧಿಸಲಾಗಿದೆ. ಈ ಬಗ್ಗೆ ಜಿಲ್ಲಾ ಗ್ರಾಹಕ ವೇದಿಕೆಯು ರೋಗಿಗೆ ಪರಿಹಾರವಾಗಿ 53,000 ರೂ ನೀಡುವಂತೆ ಆದೇಶಿಸಿದೆ.
ಕೋಲಾರ ರಸ್ತೆಯ ಶಾಲಿಮಾರ್ ನಿವಾಸಿ ನಮೃತಾ ಗಾಂಧಿ (31) ಗೆ, ನವೆಂಬರ್ 22,2012ರಲ್ಲಿ ಮೇಲ್ದವಡೆಯಲ್ಲಿ ನೋವುಂಟಾಗಿತ್ತು. ಆಕೆ ಶಿವಂ ಆಸ್ಪತ್ರೆಯ ದಂತವೈದ್ಯ ಡಾ.ಯಶವಂತ್ ಮಿಶ್ರಾರನ್ನು ಸಂಪರ್ಕಿಸಿದ್ದರು. 200 ರೂ.ಗಳನ್ನು ಶುಲ್ಕವಾಗಿ ನೀಡಿದ್ದರು. ಇವರನ್ನು ಪರೀಕ್ಷಿಸಿದ ಡಾ.ಮಿಶ್ರಾ, ನೋವು ಕಡಿಮೆಯಾಗಲು ಮೇಲ್ದವಡೆಯ 8ನೇ ಹಲ್ಲನ್ನು ಕೀಳಿಸುವಂತೆ ಸಲಹೆ ನೀಡಿದ್ದರು.
ತನ್ನ ಹಲ್ಲನ್ನು ಉಳಿಸಿಕೊಳ್ಳಲು ಮತ್ತು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಆಕೆ ಮತ್ತೋರ್ವ ವೈದ್ಯರಾದ ಡಾ. ಸತೇಂದ್ರ ಗುಪ್ತಾರನ್ನು ಅವರ ಆಸ್ಪತ್ರೆಯಲ್ಲಿ ನವೆಂಬರ್ 23ರಂದು ಸಂಪರ್ಕಿಸಿದರು.
ಡಾ.ಮಿಶ್ರಾ ಬಳಿ ತೆರಳಿದ ಆಕೆ, ತನ್ನ ಹಲ್ಲನ್ನು ಕೀಳಿಸಿ, ಅವರ ಶುಲ್ಕವಾದ 7500ರೂ.ಗಳನ್ನು ನವೆಂಬರ್ 25 ರಂದು ಪಾವತಿಸಿದ್ದಳು.
ಆದರೆ, ಆಕೆಯ ಪರಿಸ್ಥಿಯಲ್ಲಿ ಯಾವುದೇ ಸುಧರಣೆಯಾಗದ್ದರಿಂದ, ಮತ್ತೋರ್ವ ದಂತವೈದ್ಯರಾದ ಡಾ. ಅಖಿಲೇಶ್ ಜೈನ್ ಅವರನ್ನು ನವೆಂಬರ್ 29ರಂದು ಸಂಪರ್ಕಿಸಿದಳು. ಈಕೆಯನ್ನು ಪರೀಕ್ಷಿಸಿದ ವೈದ್ಯರು, ಮೇಲ್ದವಡೆಯ 8ನೇ ಹಲ್ಲಿನಿಂದಾಗಿ ತೊಂದರೆ ಆಗಿದೆ. 7ನೇ ಹಲ್ಲನ್ನು ಕೀಳಲಾಗಿದೆ ಎಂದರು. ಇದು ಆಕೆಗೆ ಆಘಾತಕಾರಿಯಾಗಿತ್ತು. ಈ ಕಾರಣಕ್ಕಾಗಿ ಆಕೆ 7ನೇ ಹಲ್ಲನ್ನು ಅಳವಡಿಸಿಕೊಳ್ಳಲು 25,000ರೂ.ಗಳನ್ನು ವ್ಯಯಿಸಬೇಕಾಯಿತು.
ಆಕೆ ಡಾ.ಮಿಶ್ರಾ ಬಳಿ ನೀವು ತಪ್ಪಾದ ಹಲ್ಲು ಕಿತ್ತಿದ್ದೀರಿ ಎಂದು ದೂರಿದಾಗ, ಅವರು ನಮೃತಾರ ಬಳಿ ಅನುಚಿತವಾಗಿ ವರ್ತಿಸಿದರು. ಡಾ.ಮಿಶ್ರಾರವರ ನಿರ್ಲಕ್ಷಕ್ಕಾಗಿ, ನಮೃತಾ 8.5 ಲಕ್ಷ ಪರಿಹಾರಕ್ಕಾಗಿ ಡಿಸೆಂಬರ್ 24,2012ರಂದು ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿದಳು.
ಮತ್ತೊಂದೆಡೆ, ಡಾ.ಮಿಶ್ರಾ ತಾನು ಯವುದೇ ನಿರ್ಲಕ್ಷ ತೋರಿಲ್ಲ ಎಂದು ವಾದಿಸಿದರಲ್ಲದೇ, ತಾನು ಆಕೆಗೆ 8ನೇ ಹಲ್ಲನ್ನು ಕೀಳಿಸುವಂತೆ ಸಲಹೆಯನ್ನಷ್ಟೇ ನೀಡಿದ್ದು, ಜತೆಗೆ ಆಕೆಯಿಂದ ಅವತ್ತು ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದರು. ನಂತರದ ಎರಡು ದಿನಗಳಲಿ ನಮೃತಾ ತನ್ನ 7ನೇ ಹಲ್ಲು ಅರ್ಧ ಮುರಿದಿದೆ ಎಂದರು. ಅದನ್ನು ಪರೀಕ್ಷಿಸಿ, 7ನೇ ಹಲ್ಲಿನಲ್ಲಿ ಬಿರುಕುಂಟಾಗಿರುವುದನ್ನು ಕಂಡುಬಂತು. ಆದ ಕಾರಣಕ್ಕೆ ಆ ಹಲ್ಲನ್ನು ಕೀಳಿಸುವಂತೆ ಸಲಹೆ ನೀಡಿದ್ದೆ. ಜತೆಗೆ 6ನೇ ಹಲ್ಲಿನಿಂದ ಸಪೋರ್ಟ್ ತೆಗೆದುಕೊಂಡು 7ನೇ ಹಲ್ಲಿಗೆ ಇಂಪ್ಲಾಂಟ್ ಮಾಡಲು ಅಂದಾಜು 7500 ರೂ ಆಗಬಹುದು ಎಂದಿದ್ದೆ ಎಂದು ಡಾ. ಮಿಶ್ರಾ ವಾದಿಸಿದರು.
ನಮೃತಾರವರನ್ನು ಪರೀಕ್ಷಿಸುವ ಸಮಯದಲ್ಲೇ, ಮತ್ತೋರ್ವ ರೋಗಿಯಾದ ರಜನಿಕಾಂತ ಜೋಶಿ ಅವರ 8ನೇಯ ಹಲ್ಲನ್ನು ಕೀಳಲಾಗಿತ್ತು. ಆ ಗಡಿಬಿಡಿಯಲ್ಲಿ ಇಬ್ಬರಿಗೂ ಔಷಧ ಚೀಟಿಯನ್ನು ನೀಡಲು ಸಾಧ್ಯವಾಗಲಿಲ್ಲ. ಅವರಿಬ್ಬರೂ ತನ್ನ ಮನೆಯ ಸಮೀಪವೇ ಇರುತ್ತಿದ್ದರಿಂದ, ಆನಂತರದಲ್ಲಿ ನೀಡಿದೆ. ಈ ಪ್ರಕ್ರಿಯೆಯಲ್ಲಿ ಹಲ್ಲಿನ ಸಂಖ್ಯೆ ಅದಲು-ಬದಲಾಗಿದೆ ಎಂದು ಹೇಳಿದರು. ಆದರೆ ನಮೃತಾರವರ ಚೀಟಿಯಲ್ಲಿ 8ನೇ ಸಂಖ್ಯೆಯ ಹಲ್ಲನ್ನು ಕೀಳಲಾಗಿದೆ ಎಂದೇ ಮುದ್ರಿತವಾಗಿತ್ತು. ಜೋಶಿ ಅವರ ಚೀಟಿಯಲ್ಲಿ 7ನೇ ಸಂಖ್ಯೆಯ ಹಲ್ಲನ್ನು ಕೀಳಲಾಗಿದೆ ಎಂದೇ ಮುದ್ರಿತವಾಗಿತ್ತು.
- ಆಶಾ ಹೆಗಡೆ
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?