ಕೇವಲ ಒಂದೇ ಮಾಹಿತಿಯಡಿಯಲ್ಲಿ ಸಾವಿರಾರು ವೀಡಿಯೋಗಳ ಸಮೂಹವನ್ನೇ ನಿಮ್ಮ ಮುಂದಿಡುವ ಪ್ರಾಪಂಚಿಕ ವೀಡಿಯೋ-ಶೇರಿಂಗ್ ಸೈಟ್ ಈ ಯೂಟ್ಯೂಬ್. ಫ಼ೆಬ್ರುವರಿಯ 2005 ರಲ್ಲಿ ಪೇಪಾಲ್ ಸಂಸ್ಥೆಯ ಮೂರು ಮಾಜಿ ನೌಕರರಿಂದ ಯೂಟ್ಯೂಬ್ ನ ಅನ್ವೇಷಣೆ ಮಾಡಲಾಗಿತ್ತು.ನವಂಬರ 2006 ರಲ್ಲಿ ಪ್ರಸಿದ್ದ ಗೂಗ್ಲ್ ಸಂಸ್ಥೆಯು ಇದನ್ನು $ 1.65 billion u.s ಡಾಲರ್ ಗೆ ಖರೀದಿಸಿತು. ಯೂಟ್ಯೂಬ್,ಬಳಕೆದಾರನಿಗೆ ವೀಡಿಯೋಗಳನ್ನು ವೀಕ್ಷಿಸಲು,ಶೇರ್ ಮಾಡಲು,ರೇಟಿಂಗ್ ಹಾಗೂ ಕಮೆಂಟ್ ಮಾಡಲು ಅನುಮತಿಯನ್ನು ನೀಡುವುದಲ್ಲದೆ,ಕಡಿಮೆ ವೇಗದ ಇಂಟರ್ನೆಟ್ ಬಳಕೆದಾರರಿಗೆ ಆಫ್ ಲೈನ್ ನಲ್ಲೂ ವೀಡಿಯೋಗಳನ್ನು ವೀಕ್ಶಿಸಲು ಅವಕಾಶ ನೀಡುತ್ತದೆ.ಆದ್ರೂ ಕೆಲವೊಂದು ಇಂಟರ್ನೆಟ್ ವೆಬ್ ಸೈಟ್ ವಿಷಯಕ್ಕೆ ಬಂದಾಗ ಅದ್ರಲ್ಲೂ ಪ್ರಸಿದ್ದ ವೆಬ್ ಸೈಟ್ಗಳಿಗೆ ಸಂಬಂಧಿಸಿದಂತೆ ನಾವು ತಿಳೀದೇ ಇರೋ ಅನೇಕ ವಿಷಯಗಳು ಅದ್ರಲ್ಲಡಗಿರುತ್ತವೆ,ನಿಮಗಂತಹವುಗಳನ್ನು ತಿಳಿಯೋ ಕುತೂಹಲವಿಲ್ಲವೆ? ಹಾಗಾದ್ರೆ ಸರಿ! ಬನ್ನಿ ಹೊರಡೋಣ ಆ ಟ್ರಿಕ್ಕಿ ವಿಷ್ಯಗಳ್ಯಾವುವು ಅಂತ ನೋಡೋಣವೇನು?
1.ಯೂಟ್ಯೂಬ್ ವೀಡಿಯೋಗಳನ್ನು ನೀವು ಲೂಪ್‍ನಲ್ಲೂ ಪ್ಲೇ ಮಾಡಬಹುದು
ಇದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ…ನಿಮ್ಮ ಮೌಸ್/ ಟಚ್ ಪ್ಯಾಡ್ ನ ಬಲಬದಿಯ ಬಟನ್ ಒತ್ತಿ ಲೂಪ್ ನ್ನು ಆಯ್ಕೆ ಮಾಡಿಕೊಳ್ಳಿ;ವೀಡಿಯೋ ಮತ್ತೆ ರಿಪೀಟ್ ಆಗುತ್ತದೆ.
2.ವೀಡಿಯೊವನ್ನು ಫುಲ್‍ಸ್ಕ್ರೀನ್ ಮೋಡ್ ನಲ್ಲಿ ನೋಡಬಹುದು
ವೀಡಿಯೋವನ್ನು ದೊಡ್ದ ಪರದೆಯಲ್ಲಿ ನೋಡುವುದು ಒಂದು ಒಳ್ಳೆಯ ಆಯ್ಕೆ ಆದ್ರೆ ನಿಮ್ಗೆ ಇದ್ರಲ್ಲಿ ಬೇಕಾದ ಆಯ್ಕೆ ಇರಲಾರದು ಅದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೆ
ಬದಲಾಯಿಸಿ “watch?v= ” with “v/” ಅಂತ ಯೂಟ್ಯೂಬ್ URL ನಲ್ಲಿ ಬದಲಾಯಿಸಿದಲ್ಲಿ ನಿಮಗೆ ಫುಲ್ಲ್ ಸ್ಕ್ರೀನ್ ಸೌಲಭ್ಯ ಲಭ್ಯ
ಇದನ್ನು“watch?v= ” with “v/”ಈ ರೀತಿಯಾಗಿ ಬದಲಾಯಿಸಿದಾಗ
3.ನಂತರಕ್ಕೆ ಸೇವ್ ಮಾಡುವುದು
ನಿಮಗೆ ಕೆಲವೊಂದು ವೀಡಿಯೋಗಳು ತುಂಬ ಕುತೂಹಲಕಾರಿಯಾಗಿ ತೋರಿಬರುತ್ತದೆಂದು ಕೊಳ್ಳೋಣ,ಆದ್ರೆ ವೀಕ್ಷಿಸಲು ನಿಮಗೆ ಸಮಯದ ಅಭಾವವಿರುತ್ತದೆ.ಇದಕ್ಕಾಗಿ ಯೂಟ್ಯೂಬ್ ಅದನ್ನು ಸೇವ್ ಮಾಡುವ ಆಯ್ಕೆ ಯನ್ನು ನಿಮಗೆ ನೀಡುತ್ತದೆ.ನೀವು “ADD TO” ಕ್ಲಿಕ್ ಮಾಡಿ ”watch later” ಆಯ್ಕೆಯನ್ನು ಆಯ್ದುಕೊಳ್ಳಿ.
4.ಯೂಟ್ಯೂಬನ್ನು ಕೇವಲ ಕೀಬೋರ್ಡ್ನಿಂದಲೇ ಉಪಯೋಗಿಸಿ
ಕೇವಲ ಮೌಸ್ ನ್ನೇ ಉಪಯೋಗಿಸಿ ಬೋರ್ ಹೊಡೆದಿರಬಹುದು,ಅದಕ್ಕಾಗಿ ನಿಮಗೊಂದು ಸುಲಭ ಬದಲಾವಣೆ.ಯೂಟ್ಯೂಬ್ ನಿಮಗೆ ಕೇವಲ ಕೀ ಬೋರ್ಡ್ನ ಆಯ್ಕೆಯನ್ನು ನೀಡುತ್ತದೆ.ನೀವು ಮಾಡಬೇಕಾಗಿರುವುದು ಇಷ್ಟೆ.
ಈURL ಗೆ ಹೋಗಿ : “www.youtube.com/leanback”. ಅಂತ ಟೈಪ್ ಮಾಡಿ.
5.ಈಗ ನಿಮ್ಮ ಯೂಟ್ಯೂಬ್ ಅಕೌಂಟ್ ನ್ನು ಪ್ರೈವೇಟ್ ಆಗಿ ಕಾಯ್ದುಕೊಳ್ಳಬಹುದು
ನಿಮಗೆ ನಿಮ್ಮ ಪ್ಲೇಲಿಸ್ಟ್,ಸಬ್ ಸ್ಕ್ರೈಬ್ ಹಾಗೂ ಲೈಕ್ ಮಾಡಿರೋ ವೀಡಿಯೋ ಬಗ್ಗೆ ಯಾರಿಗೂ ಮಾಹಿತಿ ತಿಳಿಯಬಾರದು ಅಂದಲ್ಲಿ
“www.youtube.com/account_privacy” ಇಲ್ಲಿಗೆ ಹೋದಲ್ಲಿ ನಿಮ್ಮ ಪ್ರೈವೆಸಿ ಕಾಪಾಡಬಹುದು.
6.ಕೀಬೋರ್ಡ್ ಶಾರ್ಟ್ ಕಟ್ಸ್
‘k’ – ವೀಡಿಯೋ ಪ್ಲೇ/ಪಾಸ್ ಮಾಡಲು
‘i’ – ವೀಡಿಯೊ ವನ್ನು 10 sec ಗೆ ಫ಼ಾಸ್ಟ್ ಆಗಿ ಮುಂದಕ್ಕೆ ಓಡಿಸಲು
‘j’ – ವೀಡಿಯೊ ವನ್ನು 10 sec ಗೆ ಹಿಂದಕ್ಕೆ ಓಡಿಸಲು
‘0’- ವೀಡಿಯೋ ಆರಂಭಿಸಲು
1 to 9 ವೀಡಿಯೊದ ಪರ್ಸ್ಂಟೇಜ್ನ್ ಹೆಚ್ಚಿಸಲು i.e hit ‘5’ ನಿಂದ ಸೀದಾ ವೀಡಿಯೋ ದ 50%ನತ್ತ ತಲಪಬಹುದು.
‘m’ – ವೀಡಿಯೋ ವನ್ನು ಮ್ಯೂಟ್ ಮಾಡಲು
7.ವಿಡಿಯೋ ಪ್ಲೇ ಸ್ಪೀಡ್
8.ಪ್ಲೇ ಬ್ಯಾಕ್ ಕ್ವಾಲಿಟಿಯನ್ನು ನಿರ್ಧರಿಸಲು
ಬೇರೆ ಬೇರೆ ವೀಡಿಯೋಗಳಿಗೆ ಬೇರೆ ಬೇರೆ ಕ್ವಾಲಿಟಿಯನ್ನು ಆಯ್ಕೆ ಮಾಡಿ ನೀವು ಬೇಸತ್ತಿರಬಹುದು ಅದಕ್ಕಾಗಿ ಯೂ ಟ್ಯೂಬ್ ನಿಮಗೆ ನಿಮ್ಮ ಆಯ್ಕೆಯನ್ನು ನಿರ್ಧರಿಸಲು ಅವಕಾಶ ಕೊಡುತ್ತಿದೆ.“www.youtube.com/account_playback” ಅಂತ ಪ್ಲೇಬ್ಯಾಕ್ ಕ್ವಾಲಿಟಿಯನ್ನು ಆಯ್ಕೆ ಮಾಡಿಕೊಳ್ಳಬಹುದು
ನಿಮ್ಮ ಇಂಟರ್ನೆಟ್ ಸ್ಪೀಡ್ ನ್ನು ಆಧರಿಸಿ ನಿಮ್ಮ ಆಯ್ಕೆಗೆ ಅವಕಾಶ ನೀಡಲಾಗುವುದು
ಅದಲ್ಲದೆ ನೀವು ಅನ್ನೋಟೇಷನ್ ಹಾಗೂ ಕೇಪ್ಷನ್ ಸೆಟ್ಟಿಂಗ್ಸ್ ಗಳನ್ನೂ ಆಯ್ಕೆ ಮಾಡಬಹುದು.
9.ಆಟೋ ಪ್ಲೇ ಆಯ್ಕೆಯನ್ನು ಬದಲಾಯಿಸಬಹುದು.
ಬಲಬದಿಯ ಮೂಲೆಯಲ್ಲಿರೋ ಆಟೋ ಪ್ಲೇ ಆಯ್ಕೆಯನ್ನು ಆಯ್ದುಕೊಂಡಲ್ಲಿ ನಿಮಗೆ ಇದು ಲಭ್ಯ.
10.ನಿರ್ಧರಿತ ಸಮಯದಿಂದ ವೀಡಿಯೋ ವೀಕ್ಷಿಸಬಹುದು
ವೀಡಿಯೋ URL ನ ಕೊನೆಗೆ “#t=specifictime” ಅಂತ ಸೇರಿಸಿದಲ್ಲಿ ನೀವು ವೀಡಿಯೋವನ್ನು ನಿಮಗೆ ಬೇಕಾದ ಸಮಯಕ್ಕೆ ಸರಿಯಾಗಿ ನೋಡಬಹುದು.ಉದಾಹರಣೆಗೆ #t=39s” or “#t=1m56s”.ಅದಲ್ಲದೆ “Get video URL at current time” option.ಅಂತಲೂ ಆಯ್ಕೆ ಮಾಡಿ ಈ ಮೇಲಿನ ಸೌಲಭ್ಯ ಪಡೆಯಬಹುದು
11.ಯೂಟ್ಯೂಬ್ ವೀಡಿಯೋಗಳನ್ನು G.I.F ಗಳಾಗಿ ಪರಿವರ್ತಿಸಬಹುದು.
G.I.F ಗಳೆಂದರೆ ಇದರಲ್ಲಿ ನೀವು ಆನಿಮೇಟೆಡ್ ಹಾಗೂ ಸ್ಟೇಟಿಕ್ ಚಿತ್ರಗಳೆರಡನ್ನೂ ನೋಡೋ ಸೌಲಭ್ಯ.ಇದಕ್ಕಾಗಿ ನೀವು ಯೂಟ್ಯೂಬ್ URL ನ ಮುಂದೆ‘gif’ ಅಂದು ಟೈಪ್ ಮಾಡಿ.ಇದು G.I.F ಮೇಕರ್ ನತ್ತ ನಿಮ್ಮನ್ನು ಕೊಂಡೊಯ್ಯುತ್ತದೆ. ಉದಾಹರಣೆಗೆ “https://www.youtube.com/watch?v=xqmGA-uiHU4” ಅಂತ ಟೈಪ್ ಮಾಡಿದಲ್ಲಿ ‘gif’ it becomes “https://www.gifyoutube.com/watch?v=xqmGA-uiHU4”ಎಂದಾಗುತ್ತದೆ.
12.ಕಲಾವಿದರ ಸರ್ಚ್ ಆಯ್ಕೆಯಿಂದ ನಿಮಗೆ ಅದೇ ಕಲಾವಿದನ ವಿವಿಧ ಬಗೆಯ ವೀಡಿಯೋಗಳು ದೊರೆಯಬಹುದು
13.ನಿಮ್ಮಯೂಟ್ಯೂಬ್ ವೀಡಿಯೋಗಳಿಗೆ ಬೇಕಾದ ಮ್ಯೂಸಿಕ್ ಲಿರಿಕ್ಸ್ ಗಳನ್ನು ಬೇರೆ ಮ್ಯೂಸಿಕ್ ವೀಡಿಯೋಗಳಿಂದ ಪಡೆಯಬಹುದು
14.ಯೂಟ್ಯೂಬ್ ನಿಂದ ನಿಮಗೆ ಬೇಕಾದ ವೀಡಿಯೋಗಳನ್ನು ಡೌನ್ ಲೋಡ್ ಮಾಡಬಹುದು.
ಇದೊಂದು ಮುಖ್ಯವಾದ ಟಿಪ್ಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.ಅನೇಕ ಬಾರಿ ನಾನು ತಿಳಿದಂಗೆ, ಹಲವರಿಗೆ ಯೂಟ್ಯೂಬ್ ನಿಂದ ವೀಡಿಯೋ ಡೌನ್ ಲೋಡ್ ಮಾಡಲು ಗೊತ್ತಿರುವುದಿಲ್ಲ.ಇದಕ್ಕೆ ಕೆಲವರು ಹರ ಸಾಹಸ ಪಡುತ್ತಾರೆ.ಆ ಕಾರಣಕ್ಕಾಗಿ ಯಾವುದೇ ವೀಡಿಯೋ ಡೌನ್ ಲೋಡ್ ಮಾಡಲು “Youtube” ಬದಲಾಗಿ “ssyoutube” ಎಂದು ವೀಡಿಯೋದ URL ನಲ್ಲಿ ಟೈಪ್ ಮಾಡಿ. ಉದಾಹರಣೆಗಾಗಿ: ವೀಡಿಯೋದ URL “https://www.youtube.com/watch?v=1j02gw87ln0” ಎಂದಿದ್ದಾಗ,ನೀವು ಆ ವೀಡಿಯೋ ಡೌನ್ ಲೋಡ್ ಮಾಡಲು “youtube” ಬದಲಾಗಿ “ssyoutube” ಅಂತ ಹಾಕಬೇಕು.ಆಗ ನಿಮ್ಮನ್ನು ಅದು ಈ ಪೇಜ್ ಗೆ ತಲಪಿಸುತ್ತದೆ“https://www.ssyoutube.com/watch?v=1j02gw87ln0”.
15.‘Use the force Luke‘ ಅಂತ ಸರ್ಚ್ ಬಾರ್ ನಲ್ಲಿ ಟೈಪ್ ಮಾಡಿ ಜಾದೂನೋಡಿ.
ಸ್ನೇಹಿತರೆ! ನಮ್ಗೆ ತಿಳಿದಿದ್ದನ್ನು ನಿಮ್ಮೊಂದಿಗೆ ಶೇರ್ ಮಾಡಿದ್ದೇವೆ.ನಿಮಗೆ ಉಪಯೋಗ ಆದ್ರೆ ಸಂತೋಷ.ನೀವು ಶೇರ್ ಮಾಡಿ.
- ಸ್ವರ್ಣಲತ ಭಟ್
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?