ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ರಾಷ್ಟ್ರಗಳ ಸ್ಥಾನವನ್ನು ಇಂಡೋನೇಷ್ಯಾ ಹೊಂದಿದೆ. ಅಂದ ಹಾಗೇ ಇಂಡೋನೇಷ್ಯಾದ ಮೊದಲ ಅಧ್ಯಕ್ಷ, ಸುಕರ್ನೊ ಅವರ ಮಗಳು ಮಂಗಳವಾರ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.
ಬಾಲಿಯ ಬುಲೆಲೆಂಗ್ ರೀಜೆನ್ಸಿಯಲ್ಲಿರುವ ಸುಕರ್ನೊ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ನಡೆದ ಸಮಾರಂಭದಲ್ಲಿ ಸುಕ್ಮಾವತಿ ಸುಕರ್ಣಪುತ್ರಿ,( 69) ‘ಸುಧಿ ವಡಾನಿ’ ಎಂಬ ಆಚರಣೆಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎನ್ನಲಾಗಿದೆ.
ಬಾಲಿಯಲ್ಲಿ ಅನುಸರಿಸುವ ಮುಖ್ಯ ಧರ್ಮವೆಂದರೆ ಹಿಂದೂ ಧರ್ಮ, ಆದಾಗ್ಯೂ, ಇದು ಭಾರತದಲ್ಲಿ ಆಚರಣೆಯಲ್ಲಿರುವ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಸುಕ್ಮಾವತಿಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸುಕ್ಮಾವತಿಯ ವಕೀಲರು, 69 ವರ್ಷದ ಸುಕ್ಮಾವತಿ ಸುಕರ್ಣಪುತ್ರಿ ಹಿಂದೂ ಧರ್ಮಶಾಸ್ತ್ರದ ಎಲ್ಲಾ ಆಚರಣೆಗಳು ಮತ್ತು ಸಿದ್ಧಾಂತಗಳ ಬಗ್ಗೆ ವ್ಯಾಪಕ ಜ್ಞಾನವನ್ನು ಹೊಂದಿದ್ದಾರೆ ಎಂದು ಹೇಳಿದರು.