ಪುನೀತ್ ಸಾವು; 4ಕ್ಕೇರಿದ ಅಭಿಮಾನಿಗಳ ಸಾವು

Date:

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಅವರ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಮತ್ತೊಬ್ಬ ಅಭಿಮಾನಿ ಮೃತಪಟ್ಟಿದ್ದಾರೆ.

ಜ್ಞಾನಮುರ್ತಿ ತಿಮ್ಮಣ್ಣ, ಮೃತ ದುರ್ದೈವಿ. ಕೊಪ್ಪಳದ ಚಿಕ್ಕ ಬಗನಾಳ ಗ್ರಾಮದ ಜ್ಞಾನಮೂರ್ತಿ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು. ನಿನ್ನೆ ನೆಚ್ಚಿನ ನಟನ ಅಗಲಿಕೆಯ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದರು. ಅದೇ ದುಃಖದಲ್ಲೇ ಮಲಗಿದ್ದ ಅಭಿಮಾನಿ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ದುಖಃ ಭರಿಸುವಂತಹ ಶಕ್ತಿ ನೀಡಲಿ ಎಂದು ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಪುನೀತ್ ಸಾವಿನ ಸುದ್ದಿ ಬಹಿರಂಗ ವಾದಾಗಿನಿಂದ ಇಂದು ಬೆಳಿಗ್ಗೆವರೆಗೂ 3ಮಂದಿ ಅಪ್ಪು ಅಭಿಮಾನಿಗಳು ಸಾವಿಗೀಡಾಗಿದ್ದರು. ಇದೀಗ ಜ್ಞಾನಮೂರ್ತಿ ತಮ್ಮಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದು ಪುನೀತ್ ಸಾವಿನ ಸುದ್ದಿ ಕೇಳಿ ಸಾವಿಗೀಡಾಗಿರುವ ಪುನೀತ್ ಅಭಿಮಾನಿಗಳ ಸಂಖ್ಯೆ ನಾಲ್ಕಕ್ಕೇರಿದೆ.

 

 

Share post:

Subscribe

spot_imgspot_img

Popular

More like this
Related

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್...

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ! ಬೆಂಗಳೂರು:  ಸಿಲಿಕಾನ್ ಸಿಟಿ...

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ!

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ! ಬೆಂಗಳೂರು: ಕೋಟಿ...

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...