ಅಕ್ಟೋಬರ್ 29 ಪ್ರತಿಯೊಬ್ಬ ಕನ್ನಡಿಗನಿಗೂ ಇದು ಮರೆಯಲಾಗದಂತಹ ಕರಾಳ ದಿನ. ಕನ್ನಡ ಚಲನಚಿತ್ರರಂಗದ ಅತ್ಯದ್ಭುತ ಪ್ರತಿಭೆ, ಭಾರತ ಚಿತ್ರರಂಗ ಕಂಡ ಮಹಾನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕೋಟ್ಯಂತರ ಅಭಿಮಾನಿಗಳು ಮತ್ತು ಕುಟುಂಬದವರು ಹಾಗೂ ಸ್ನೇಹಿತರನ್ನು ಅಗಲಿ ಇಹ ಲೋಕಕ್ಕೆ ಪಯಣ ಬೆಳೆಸಿದ ದಿನ.
ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಎಂತಹದ್ದು, ವ್ಯಸನಗಳೆಂದರೆ ಆ ವ್ಯಕ್ತಿ 3ಮೈಲಿ ದೂರ ಓಡುತ್ತಿದ್ದರು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ. ಹೌದು ಪುನೀತ್ ರಾಜ್ ಕುಮಾರ್ ಅವರಿಗೆ ಮದ್ಯಪಾನ ಎಂದರೆ ಆಗುತ್ತಿರಲಿಲ್ಲ, ಹೀಗಾಗಿಯೇ ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಮದ್ಯಪಾನ ಮಾಡಬೇಕಾದಂತಹ ದೃಶ್ಯಗಳು ಬಂದಾಗ ಅಂತಹ ದೃಶ್ಯಗಳಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದರಂತೆ.
ಓರ್ವ ನಟನಾಗಿ ತಾನೇ ತೆರೆಯ ಮೇಲೆ ಬಾಟಲಿ ಹಿಡಿದುಕೊಂಡು ಚಿತ್ರ ಮಾಡಿದರೆ ಅದನ್ನು ವೀಕ್ಷಿಸುವ ತಮ್ಮ ಅಭಿಮಾನಿಗಳು ಅದನ್ನೇ ಅಳವಡಿಸಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಪುನೀತ್ ಈ ರೀತಿಯ ದೃಶ್ಯಗಳಲ್ಲಿ ನಟಿಸುತ್ತಿರಲಿಲ್ಲ. ಈ ಕಾರಣದಿಂದಾಗಿಯೇ ಬೆಂಗಳೂರು ನಗರದಾದ್ಯಂತ 2 ದಿನಗಳ ಕಾಲ ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ಈ ನಿರ್ಧಾರದ ಕುರಿತು ಇದೀಗ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ದುರ್ವರ್ತನೆ ತೋರಿದ್ದಾಳೆ.
ಓರ್ವ ಪ್ರಮುಖ ನಟ ನಿಧನಹೊಂದಿದ ಎಂದಮಾತ್ರಕ್ಕೆ ಭಾನುವಾರದವರೆಗೂ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದು ಯಾವ ರೀತಿಯ ನಿಯಮ ಎಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ ಮಹಿಳೆ ಪಿಯು ಬ್ಯಾನರ್ಜಿ ಎಂಬಾಕೆ ಟ್ವೀಟ್ ಮಾಡಿದ್ದಾಳೆ.
ಕರ್ನಾಟಕ ಓರ್ವ ಮಹಾನ್ ಪ್ರತಿಭಾವಂತ ನಟನನ್ನು ಕಳೆದುಕೊಂಡು ದುಃಖದಲ್ಲಿರುವಾಗ ತನ್ನ ನಾಡಿನಲ್ಲಿ ಕೆಲಸ ಸಿಗದೇ ಬೆಂಗಳೂರಿನಲ್ಲಿ ದುಡಿದು ತಿನ್ನಲು ಬಂದ ಈಕೆ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ವ್ಯಂಗ್ಯವಾಡುತ್ತಿದ್ದಾಳೆ. ಈಕೆಯ ದುರ್ವರ್ತನೆಯನ್ನು ಸಹಿಸದ ಹಲವಾರು ಮಂದಿ ಈಕೆಯ ಟ್ವೀಟ್ ಗೆ ತಕ್ಕನಾದ ಉತ್ತರಗಳನ್ನು ನೀಡುತ್ತಾ ಮನಬಂದಂತೆ ಉಗಿಯುತ್ತಿದ್ದಾರೆ. ಅಷ್ಟೇ ಅಲ್ಲದೆ ಈಕೆಯ ಇನ್ ಸ್ಟಾಗ್ರಾಂ ಖಾತೆಯನ್ನು ಹುಡುಕಿದ ಹಲವಾರು ಕನ್ನಡಾಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಓರ್ವ ಮಹಾನ್ ನಟ ನಿಧನ ಹೊಂದಿದಾಗ ಆ ವಿಷಯವನ್ನು ಇಟ್ಟುಕೊಂಡು ವಿವಾದ ಸೃಷ್ಟಿಸಿದ ಈ ಅವಿವೇಕಿ ಮಹಿಳೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಾರಾ ಅಥವಾ ಇದನ್ನು ಇಲ್ಲಿಯೇ ಬಿಟ್ಟು ಬಿಡುತ್ತಾರಾ ಎಂಬುದು ಇದೀಗ ಪ್ರಶ್ನೆಯನ್ನು ಮೂಡಿಸಿದೆ.