ಸಾಲಕ್ಕೆ ಹೆದರಿ ಕಾಡಿಗೆ ಸೇರಿದ್ದ ಆ ಮನುಷ್ಯನಿಗೆ 14 ವರ್ಷಗಳ ನಂತರ ಜಿಲ್ಲಾಡಳಿತ ಮುಕ್ತಿ ನೀಡಿ ನಾಡಿಗೆ ವಾಪಾಸ್ಸಾಗುವ ಅವಕಾಶ ಕಲ್ಪಿಸೋ ಮುಖಾಂತರ ಮಾನವೀಯತೆ ಮೆರೆದಿದೆ. ತೇಟ್ ಕಾಡು ಮನುಷ್ಯನಂತೆ ಕಾಣ್ತಿರೋ ಈ ವ್ಯಕ್ತಿ 14 ವರ್ಷದ ಹಿಂದೆ ನಮ್ಮ ನಿಮ್ಮಂತೆ ಜೀವನ ಸಾಗಿಸ್ತಿದ್ದರು. ಹೌದು ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ನಿವಾಸಿ ಚಂದ್ರಶೇಖರ ಗೌಡ. ಕಳೆದ 14 ವರ್ಷಗಳಿಂದ ಕಾಡಿನಲ್ಲೇ ವಾಸ ಮಾಡ್ತಿರೋ ಇವರಿಗೆ ಮಂಗಳೂರು ಜಿಲ್ಲಾಡಳಿತ ಸುರು ಕಲ್ಪಿಸಿಕೊಡಲು ಮುಂದಾಗಿದ್ದು, ಅಜ್ಞಾತವಾಸ ಕೊನೆಯಾಗುವ ದಿನಗಳು ಸನ್ನಿಹತವಾಗಿವೆ…….
ಅಂದಹಾಗೆ ಕಳೆದ 14 ವರ್ಷಗಳಿಂದ ಕಾಡಿನಲ್ಲೇ ಇರುವ ಚಂದ್ರಶೇಖರ್ ಹಿಗೇ ಅಜ್ಞಾತ ವಾಸ ಮಾಡ್ತಿರೋದಕ್ಕೂ ಒಂದು ಬಲವಾದ ಕಾರಣವಿದೆ.ಇವರಿಗೆ ಈ ಹಿಂದ ಎರಡೂವರೆ ಎಕರೆ ಕೃಷಿ ಭೂಮಿ ಇತ್ತು, ಕೃಷಿ ಮಾಡಲೆಂದು ಸುಳ್ಯದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‍ನಿಂದ 1998ರಲ್ಲಿ 39 ಸಾವಿರ ರೂಪಾಯಿಯನ್ನು ಸಾಲ ಪಡೆದಿದ್ದರು. ಆದ್ರೆ ಸರಿಯಾದ ಸಮಯಕ್ಕೆ ಸಾಲ ಕಟ್ಟದ ಹಿನ್ನೆಲೆ ಇವರ ಮನೆ ಹಾಗೂ ಎರಡೂವರೆ ಎಕರೆ ಕೃಷಿ ಭೂಮಿಯನ್ನು ಬ್ಯಾಂಕಿನವರು ಹರಾಜು ಹಾಕಿದ್ದರು. ಇದರಿಂದ ನೊಂದ ಚಂದ್ರಶೇಖರ್ ಗೌಡ ತನ್ನ ಕಾರಿನೊಂದಿಗೆ ಸುಳ್ಯದ ಅರಂತೋಡು ಗ್ರಾಮದ ಬೆದ್ರಪುಣೆಯ ದಟ್ಟ ಅರಣ್ಯದಲ್ಲಿ ವಾಸವಾಗಿದ್ದರು. ಕಾಡಿನ ವಾಸ ಕುರಿತು ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿದ್ದಂತೆ ಮಂಗಳೂರು ಜಿಲ್ಲಾಡಳಿತ ಚಂದ್ರಶೇಖರ್‌ಗೆ ಸುರು ಕಲ್ಪಿಸುವ ಭರವಸೆ ನೀಡಿದೆ.
ಇನ್ನೂ ಚಂದ್ರಶೇಖರ್ ಅವ್ಯವಸ್ಥೆ ಕುರಿತು ಮಾಧ್ಯಮಗಳಲ್ಲಿ ಸಮಗ್ರ ವರದಿ ಪ್ರಸಾರವಾಗುತ್ತಿದ್ದಂತೆ ಮಂಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ವತಃ ಅಧಿಕಾರಿಗಳ ತಂಡದೊಂದಿಗೆ ಕಾಡಿಗೆ ತೆರಳಿ ಭೇಟಿ ನೀಡಿದ್ದಾರೆ. ಚಂದ್ರಶೇಖರ್ ಗೌಡರ ಯೋಗಕ್ಷೇಮ ವಿಚಾರಿಸಿ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ. ಅಂತಯೇ ಇದೀಗ ಅಕ್ರಮ ಸಕ್ರಮದಡಿ ಚಂದ್ರಶೇಖರ್ ಅವರು ಮೊದಲಿದ್ದ ಮನೆ ಸಮೀಪವೇ ಒಂದು ಎಕರೆ ಕೃಷಿ ಭೂಮಿಯನ್ನು ನೀಡಲಾಗಿದ್ದು, ಅದರಲ್ಲಿ ಕೃಷಿ ಹಾಗೂ ವಸತಿ ಸೌಲಭ್ಯಕ್ಕೂ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ
ಕಾಡಿನಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಬುಟ್ಟಿ ತಯಾರಿಸಿ ಮಾರಾಟ ಮಾಡ್ತಿ ಅದರಲ್ಲೇ ಜೀವನ ಸಾಗಿಸ್ತಾ ಇದ್ದಾರೆ. ಇದೀಗ ಜಿಲ್ಲಾಧಿಕಾರಿ ಮಾನವೀಯ ದೃಷ್ಟಿಯಿಂದ ಕಾಡಿನೊಳಗೆ ಹೋಗಿ ಅಜ್ಞಾತ ವಾಸ ಮಾಡುತ್ತಿದ್ದ ಚಂದ್ರಶೇಖರ್ ಅವರಿಗೆ ಹೊಸ ಜೀವನವನ್ನು ಕೊಟ್ಟಿರೋದು ಶ್ಲಾಘನೀಯ
- ಶ್ರೀ
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!