ಅವರು ಹೃದಯಘಾತದಿಂದ ಕುಗ್ಗಿ ಜೀವನ ಕೊನೆಗಳಿಸಲು ನಿರ್ಧರಿಸಿದರು..!

Date:

ನನ್ನ ಕಥೆ :
ಜೀವನದಲ್ಲಿ ಮನುಷ್ಯನಿಗೆ ಬೇಕಾದ್ದಿಷ್ಟೆ” ತಲೆಮೇಲೊಂದು ಸೂರು,ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ” ಅಂತಾರೆ.ಆದ್ರೆ ನಾನು ಅಂದ್ಕೊಳ್ಳೋದೇನಂದ್ರೆ ಎಲ್ಲಾಕ್ಕೂ ಮಿಗಿಲಾಗಿ ನಳನಳಿಸುವ ಆರೋಗ್ಯಪೂರ್ಣ ತನು- ಮನ ಮನುಷ್ಯನಿಗೆ ಬೇಕೇ ಬೇಕು.ಅದಿಲ್ಲದಿದ್ದ ಮನುಷ್ಯ ಏನಿದ್ರೂ ಇಲ್ಲದಿದ್ದಂಗೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಇದನ್ನು ಸುಳ್ಳು ಮಾಡಿ ತೋರ್ಸಿದ್ದಾನೆ.ತಾನು ದೈಹಿಕವಾಗಿ ಅಶಕ್ತನಾಗಿದ್ರೂ ತನ್ನಿಂದ ಏನೆಲ್ಲಾ ಮಾಡಲು ಸಾಧ್ಯ ಅನ್ನೋದಿಕ್ಕೆ ಮಾದರಿಯಾಗಿದ್ದಾನೆ.ಬನ್ನಿ ಅವನ ಜೀವನದ ಬಗೆಗಿನ ಒಂದು ಕಥೆ ಅವನದ್ದೇ ಆದ ಮಾತಿನಲ್ಲಿ…
ನಾನೊಬ್ಬ ಕುತ್ತಿಗೆ ಬೆನ್ನುಮೂಳೆಯ(ಸರ್ವಿಕಲ್ ಸ್ಪೈನ್) ತೊಂದರೆಯನ್ನು ಅನುಭವಿಸುತ್ತಿರುವ ರೋಗಿ.ಆದರೂ ನಾನು 80 ಸಾವಿರದಿಂದ 1 ಲಕ್ಷದ ವರೆಗೆ ದುಡಿಯುತ್ತೇನೆ.ನನ್ನ ಕೈ ಕಾಲುಗಳಿಗೆ ಬಲವಿಲ್ಲ.ಹಾಸಿಗೆಯಿಂದ ಏಳಲಾಗುತ್ತಿಲ್ಲ,ಕೇವಲ ತಲೆಯನ್ನು ಮತ್ತು ನನ್ನ ತೋಳುಗಳೆರಡನ್ನು ಮಾತ್ರವೇ ಸ್ವಲ್ಪ ಮಟ್ಟಿಗೆ ಮೇಲೆತ್ತ ಬಲ್ಲೆ,ನನಗೆ 18 ವಯಸ್ಸಿರುವಾಗ ಆದ ಅಪಘಾತದಲ್ಲಿ ನನ್ನ ಕುತ್ತಿಗೆಯ ಮೂಳೆಗೆ ಪೆಟ್ಟಾಗಿ,ನಾನು ಅಂಗವಿಕಲನಾದೆ.ಅಮನ್ ದೀಪ್ ಹಾಸ್ಪಿಟಲ್ ಗೆ ನನ್ನನ್ನು ಸೇರಿಸಿ, ಶಸ್ತ್ರ ಚಿಕಿತ್ಸೆ ಮಾಡಲಾಯಿತಾದರೂ,ನನ್ನ ಶರೀರ ಮೊದಲಿನಂತಾಗಲೇ ಇಲ್ಲ,ನನ್ನ ಮೂತ್ರಕೋಶಕ್ಕೆ ಪೈಪ್ ನ್ನು ಅಳವಡಿಸಲಾಗಿತ್ತು.ನನಗೆ ಕುಳಿತು ಕೊಳ್ಳಲಾಗಲೀ, ಕೈಬೆರಳುಗಳನ್ನು ಅಲುಗಾಡಿಸಲಾಗಲೀ ಆಗುತ್ತಿಲ್ಲ.ಆದ್ರೂ ಪ್ರಯಾಸದಿಂದ ಹೇಗೋ ಕಂಪ್ಯೂಟರ್ ಮೌಸ್ ಹಿಡಿದು ಸ್ಕ್ರೀನ್ ಮೇಲೆ ಟೈಪ್ ಮಾಡುತ್ತೇನೆ.
ಇನ್ನೂ ಹೇಳಬೇಕೆಂದರೆ ನಾನೊಂದು ಸಂಪೂರ್ಣ ಭಯಾನಕ ಪರಿಸ್ಥಿತಿಯಲ್ಲಿದ್ದೇನೆ ಆದ್ರೆ “ನೋಡಿ ನಾನೆಂಥ ಕೆಟ್ಟ ಪರಿಸ್ಥಿತಿಯಲ್ಲಿದ್ದೇನೆ” ಎಂದು ತಿಳಿಸಿ ನಿಮ್ಮ ಅನುಕಂಪ ಗಳಿಸಲು ನನ್ನ ಈ ಕಥೆಯನ್ನು ನಾನು ಬರೆಯುತ್ತಿಲ್ಲ.
2012 ರಲ್ಲಿ ನನ್ನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು,ಇನ್ನೂ ಒಂದು ವರುಷವಾದರೂ ಗುಣ ಮುಖನಾಗದಿದ್ದದ್ದನ್ನು ನೋಡಿದ ಮೇಲಂತೂ ನಾನು ತೀವ್ರವಾದ ಖಿನ್ನತೆಗೊಳಗಾದೆ.ಆಗ ನನ್ನ ಕಣ್ಣಿಗೆ ಸಿಕ್ಕಿದ್ದು ನನ್ನ ಮೊಬೈಲ್. ಮೊದಲೇ ಫ಼ೇಸ್ ಬುಕ್ ಬಳಸಿ ಅಂತರ್ಜಾಲದ ಬಗ್ಗೆ ಮಾಹಿತಿಯಿದ್ದ ನನಗೆ ನನ್ನ ಈ ನಿರ್ಧಾರ ಕಷ್ಟ ವೆನಿಸಲಿಲ್ಲ.ಮೊಬೈಲ್ ಹಿಡಿಯಲು ಮೊದಲಿಗೆ ಸ್ವಲ್ಪ ಕಷ್ಟ ಪಟ್ಟೆನಾದ್ರೂ ಹೇಗೋ ಹಿಡಿಯಲಾರಂಭಿಸಿದೆ.ಹಾಗೂ 2013 ರಕ್ಕಾಗುವಾಗ ಕಂಪ್ಯುಟರ್ ಮೌಸ್ ಹಿಡಿಯುವಷ್ಟರ ಮಟ್ಟಿಗೆ ಸುಧಾರಿಸಿದೆ.ನಾನು ಬ್ಲಾಗ್ ಬರೆಯಲಾರಂಭಿಸಿದೆ,ಇದು ನಾನಂದು ಕೊಂಡಷ್ಟು ಈಸಿಯಾಗಿರಲಿಲ್ಲ.2013-2014 ನನ್ನ ಪಾಲಿನ ಕೆಟ್ಟ ವರುಷವಾಗಿತ್ತು.ನಾನು ಮಾನಸಿಕನಾಗಿ ಯಾವುದಕ್ಕೂ ಸಿದ್ದವಾಗಿಲ್ಲವೆನಿಸಿತು.ಮತ್ತೆ ನಾನು ನನ್ನ ತಾಳ್ಮೆ ಕಳಕೊಳ್ಳುತ್ತಿದ್ದೆನೆ ಅನ್ಸೊಕೆ ಶುರುವಾಯ್ತು. ನಾನು ಕಿರುಚಾಡಿದೆ,ಜೋರಾಗಿ ಅತ್ತೆ,ಹುಚ್ಚನಂತಾದೆ,ನಾವು ಆರ್ಥಿಕವಾಗಿಯೂ ಸಮರ್ಥರಿರಲಿಲ್ಲ.ಒಂದು ದಿನ ನನ್ನ ಸ್ನೇಹಿತನಿಗೆ ಕರೆ ಮಾಡಿ ನನಗೊಂದಿಷ್ಟು ವಿಷ ಕೊಡುವೆಯಾ ಎಂದೆ?ಯಾಕಂದ್ರೆ ನನಗೆ ಆಗ ಸಾವಿನ ಹೊರತಾಗಿ ಬೇರೆ ಯಾವ ದಾರಿಯೂ ಕಾಣಲಿಲ್ಲ.ಅಲ್ಲೂ ನನಗೆ ನಿರಾಸೆ,ನನ್ನ ಪ್ರಶ್ನೆಗೆ ಉತ್ತರ ಕೊಡದಾದ ನನ್ನ ಸ್ನೇಹಿತ,ಪಾಪ! ಅವನು ತಾನೇ ಏನು ಮಾಡ್ಯಾನು ಅಲ್ವೇ?
2013 ರಲ್ಲಿ ನನಗೆ ಹಾರ್ಟ್ ಅಟ್ಯಾಕ್ ಆಯ್ತು.ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು,ಆದ್ರೂ ನಾನು ಸಾಯಲಿಲ್ಲ.
ಡಿಸೆಂಬರ್ 2013 ರಲ್ಲಿ ನಾನು ತೀವ್ರವಾಗಿ ಅಸ್ವಸ್ಥನಾದೆ,ಮೂತ್ರಕೋಶಕ್ಕೆ ಅಳವಡಿಸಲಾದ ಯೂರಿನ್ ಪೈಪ್ನಲ್ಲಿ ಕೀವು ಉಂಟಾಯಿತು,ಮತ್ತೆ ಆಸ್ಪತ್ರೆಗೆ ಪಯಣ,ನಾನು ಕಳೆದ ಆ 40 ವಿಷಮ ದಿನಗಳು ನನ್ನ ಪಾಲಿಗೆ ತೀರ ಭಯಾನಕವಾದ ದಿನಗಳು.ಕೇವಲ ಒಂದೆರಡು ತುಂಡು ಬ್ರೆಡ್ ನಲ್ಲೆ ನನ್ನ ದಿನ ಕಳೆಯುತ್ತಿತು.ಆಮೇಲೆ ನನ್ನ ತಂದೆಯ ಬಳಿ ಸಹಾಯಕ್ಕಾಗಿ ಕೈಚಾಚಿದೆ,ದಯವಿಟ್ಟು ನನಗೆ ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸಿ ಎಂದೆ ಆದ್ರೆ ನನ್ನ ಮಾತುಗಳು ನನ್ನ ತಂದೆಯ ಕಿವಿಯನ್ನು ತಲಪಲೇ ಇಲ್ಲವೇನೋ?
ಅಷ್ಟಕ್ಕೇ ಸುಮ್ಮನಾಗದೆ ನಾನೇ ಏನಾದ್ರೂ ಮಾಡಬೇಕೆಂದು ಕೊಂಡೆ.ಯಾರದ್ದೋ ಸಹಾಯದಿಂದ ಒಬ್ಬ ರಾಜಕಾರಣಿಯ ಫೋನ್ ನಂಬರ್ ಪಡಕೊಂಡೆ(ಅವರ ಹೆಸರನ್ನು ಹೇಳಲಿಚ್ಚಿಸುವುದಿಲ್ಲ)ಅದು ಅವರ ಕಚೇರಿ ನಂಬರ್. ಅವರು ಅನೇಕ ಜನರಿಗೆ ಸಹಾಯ ಮಾಡಿದ್ದಾರೆಂದು ಕೇಳ್ಪಟ್ಟಿದ್ದೆ,ನನಗೂ ಇವರಿಂದ ಸಹಾಯ ಆಗಬಹುದೇನೋ ಅಂದು ಕೊಂಡ ನಾನು ಅವರಿಗೆ ಫೋನ್ ಮಾಡಿ ಸಹಾಯ ಯಾಚಿಸಿದೆ.ಆದ್ರೆ ಅವ್ರು ಇಲೆಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆಂದೂ,ಫ್ರೀ ಆದ ತಕ್ಷಣ ಅವರೇ ಕರೆ ಮಾಡುತ್ತಾರೆಂದು ಹೇಳಿದರು.ಆಮೇಲೆ ಏನು?ನನಗವರಿಂದ ಯಾವ ಕರೆಯೂ ಬರಲಿಲ್ಲ.ನಾವು ಫೋನ್ ಮಾಡಿದ್ರೆ ಅವ್ರ್ಯಾರು ಫೊನ್ ಎತ್ತುತ್ತಿರಲಿಲ್ಲ.
ತೀರಾ ನಿರಾಸೆಯಾಯ್ತು.ಕ್ರಮೇಣ ನನ್ನೊಳಗೆ ಹೋರಾಟ ಆರಂಭಿಸಿದೆ.ನನ್ನನ್ನು ಸೋಲಿಸಿದ ನನ್ನ ಈ ಬದುಕಿಗೆ ಒಂದು ಸವಾಲಾಗಬೇಕೆಂದು ನಿರ್ಧರಿಸಿದೆ.ಮತ್ತೊಮ್ಮೆ ಹೋರಾಡಲು ಸಿದ್ದನಾದೆ,ಮತ್ತೆ ಬ್ಲಾಗ್ ಉಪಯೋಗಿಸಲು ಆರಂಭಿಸಿದೆ,ಈಗ ನನ್ನ ಮಾನಸಿಕ ಸ್ಥೈರ್ಯ ನನ್ಗೆ ಸಾಥ್ ಕೊಟ್ಟಿತು.ಸಾಕಷ್ಟು ವೀವರ್ಸ್ ಸಿಗೋ ಸೋಷಲ್ ಮೀಡಿಯಾ ಬಗ್ಗೆ ನನಗೆ ಅನುಭವವಾಯ್ತು.ಗೂಗಲ್ ಸೆನ್ಸ್ ನಿಂದ ಹಣ ಗಳಿಸಲಾರಂಭಿಸಿದೆ.ಆಗಸ್ಟ್ 2015 ರಲ್ಲಿ ನನ್ನ ಮೊದಲ ದುಡಿಮೆ ನನ್ನ ಕೈ ಸೇರಿತು.ಆಗ ನನಗಾದ ಅನುಭವವನ್ನು ವರ್ಣಿಸಲು ಅಸಾಧ್ಯ.ನಾನು ದೊರೆತ ಹಣಕ್ಕಾಗಿ ಸಂತೊಷ ಪಡಲಿಲ್ಲ.ಎಷ್ಟೋ ವರ್ಷಗಳಿಂದ ನಿಷ್ಪ್ರಯೋಜಕನಾದ ನಾನು,”ಹೌದು ನಾನೇನೋ ಮಾಡಿದೆ,ನಾನು ನಿಷ್ಪ್ರಯೋಜಕನಲ್ಲ ಎಂಬುದನ್ನು ತೋರಿಸಿಕೊಟ್ಟೆ.”ನನಗಿಷ್ಟು ಸಾಕು.ನಿನ್ನ ದೇಹವನ್ನು ಯಾವಾಗ ನಿನಗೆ ನಿಯಂತ್ರಿಸಲು ಅಸಾಧ್ಯವಾಗುವುದೋ ಆಗ ನಿನ್ನ ಸಹನಾ ಶಕ್ತಿ ಹೊರಟುಹೋಗುತ್ತದೆ,ನಿನ್ನ ಮೆದುಳಿಗೆ ಒತ್ತಡವುಂಟಾಗಿ ದಿನದಿಂದ ದಿನಕ್ಕೆ ನೀವು ಕುಗ್ಗುತ್ತಾ ಹೋಗುತ್ತೀಯ.ಇದೇ ನನ್ನ ವಿಷ್ಯದಲ್ಲಿ ನದೆದದ್ದು.ನಾನು ತೀರ ಅಂತರ್ಮುಖಿಯಾಗಿದ್ದೆ,ಯಾವ ವಿಷಯವನ್ನೂ ನನ್ನ ಸ್ನೇಹಿತರೊಂದಿಗಾಗಲೀ, ಕುಟುಂಬದವರೊಂದಿಗಾಗಲೀ ಹಂಚಿಕೊಳ್ಳಲಿಲ್ಲ,ಸಾವಿರಾರು ಪ್ರಶ್ನೆಗಳು ನಿತ್ಯ ನನ್ನನ್ನು ಬಾಧಿಸುತ್ತಿತ್ತು.ನನಗ್ಯಾಕೆ ಹೀಗಾಯ್ತು?ನಾನೇ ಯಾಕೆ?
ಆದ್ರೆ ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೆ ಉಳಿಯಿತು.ಆದ್ರೆ ಎಲ್ಲಾದಕ್ಕೂ ನಾನು ನೀಡಿದ ಪರಿಹಾರವೆಂದರೆ ಇನ್ನು ಮುಂದೆ ಯಾವುದರ ಬಗ್ಗೆನೂ ತಲೆ ಕೆಡಿಸಿಕೊಳ್ಳದೆ ನನ್ನನ್ನು ನಾನೇ ಬ್ಯುಸಿಯಾಗಿಡುವುದು.ಇದೇ ನನ್ನ ಜೀವನದ ಆರಂಭವೆಂದು ಕೊಂಡೆ,ಇಲ್ಲಿಂದ ಮುಂದೆ ಎಲ್ಲಿ ತಲಪುತ್ತೇನೋ ನನಗೆ ಗೊತ್ತಿಲ್ಲ,ಆದ್ರೆ ಸಾಧ್ಯವಾದಲ್ಲಿ ನನಗೊಂದು ಒಳ್ಳೆಯ ಟ್ರೀಟ್ಮೆಂಟ್ ಪಡೆಯಲು ಪ್ರಯತ್ನಿಸುತ್ತೇನೆ.ನಾನು ಎಷ್ಟರ ಮಟ್ಟಿಗೆ ನಡೆಯಲು ಶಕ್ತನಾಗುತ್ತೇನೋ ನನಗದು ಗೊತ್ತಿಲ್ಲ ಆದ್ರೆ ಕಡೆ ಪಕ್ಷ ನಾನು ವೀಲ್ ಚೇರ್ ನಲ್ಲಿ ಕುಳಿತುಕೊಳ್ಳುವಂತಾದ್ರೆ ಸಾಕು,ಕಳೆದ 5 ವರ್ಷಗಳಿಂದ ಈ ರೂಂನಲ್ಲೇ ನಾನು ನರಳುತ್ತಿದ್ದೇನೆ.ನನ್ನ ಶ್ರಮ ಫಲಕಾರಿಯಾಗುತ್ತೋ ಅಥವಾ ನನ್ನ ಸಾವಿನೊಂದಿಗೆ ಕೊನೆಗೊಳ್ಳುವುದೋ ನಾನರಿಯೆ.
ಇದು ನನಗೆ ಸಿಕ್ಕಿರೋ ಕೆಲಸ ಹಾಗೂ”Do it if u can”ಎಂದು ಯಾರೋ ನನ್ನನ್ನು ಅಣಕಿಸುತ್ತಿರುವಂತೆ ಅನ್ನಿಸುತ್ತದೆ
ಆದ್ರೆ ನಾನು ನನ್ನ ಕೆಲಸವನ್ನು ಮಾಡಿ ತೋರಿಸುತ್ತೇನೆಂದು ನನಗೆ ಖಂಡಿತ ವಿಶ್ವಾಸವಿದೆ.
ನಿಜವಾಗಲೂ ಎಷ್ಟೋ ಜನರ ಬಾಳಿಗೆ ದಾರಿತೋರಿಸಿದ ಆ ಗೂಗಲ್ ಸಂಸ್ಥೆಗೆ ನಮ್ಮ ಧನ್ಯವಾದಗಳು.
ನೋಡಿದಿರಾ!ನಮ್ಮ- ನಿಮ್ಮ ಆತ್ಮಸ್ಥೈರ್ಯ ಕ್ಕೆ ಮಿಗಿಲಾದದ್ದು ಜೀವನದಲ್ಲಿ ಬೇರೆ ಯಾವುದೂ ಇಲ್ಲ,ಎಂಬುದನ್ನು ಈ ವ್ಯಕ್ತಿ ತೋರಿಸಿ ಕೊಟ್ಟಿದ್ದಾರೆ.ಈ ಮೂಲಕ ನಾವು ಹೇಳೋದೇನಂದ್ರೆ,ಜೀವನದಲ್ಲಿ ನಿಮಗೆ ಏನೇ ಕಷ್ಟ- ನಷ್ಟ,ನೋವುಗಳು ಬರಬಹುದು,ಅದ್ಯಾವುದಕ್ಕೂ ನೀವು ಕುಗ್ಗಬೇಡಿ,ಜಗ್ಗ ಬೇಡಿ,ಮುಂದಕ್ಕೆ ನುಗ್ಗಿ ಹೋರಾಡಿ.ನಿಮ್ಮ ಆತ್ಮ ಬಲದೊಂದಿಗೆ ನಿಮ್ಮ ಜಯ ನಿಶ್ಚಿತ.

  • ಸ್ವರ್ಣಲತ ಭಟ್

POPULAR  STORIES :

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

ಮನಸನ್ನು ಬದಲಾಯಿಸುವ ಬಣ್ಣಗಳು..!

ಅಮೀರ್ ಖಾನ್‍ಗೆ ಸಾವಿನ ಭಯ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...