ಕೊರೊನಾ ಎಫೆಕ್ಟ್: ಮತ್ತೆ ಶುರು ಆನ್‌ಲೈನ್‌ ಕ್ಲಾಸ್‌ಗಳು!

0
39

ಕೋವಿಡ್‌-19 ಪ್ರಕರಣ ಗಳು ಹೆಚ್ಚುತ್ತಿರುವುದರಿಂದ ನಗರದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಮತ್ತೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ.

ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗಳು ಪೋಷಕರಿಗೆ ನೋಟಿಸ್‌ ಜಾರಿ ಗೊಳಿಸಿದ್ದು, ಡಿ.

1ರಿಂದ ಆಫ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿವೆ.

ಆಫ್‌ಲೈನ್‌ ತರಗತಿಗಳನ್ನು ರದ್ದುಪಡಿಸುವಂತೆ ಹಲವು ಪೋಷಕರು ಸಹ ಒತ್ತಾಯಿಸಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.

‘ಆಫ್‌ಲೈನ್‌ ತರಗತಿಗಳನ್ನು ರದ್ದುಪಡಿಸುವಂತೆ ಹಲವು ಪೋಷಕರು ಮನವಿ ಮಾಡುತ್ತಿದ್ದಾರೆ. ಸದ್ಯ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದೇವೆ. ಹೀಗಾಗಿ, ಆಫ್‌ಲೈನ್‌ ತರಗತಿಗಳನ್ನು ರದ್ದುಪಡಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಆಫ್‌ಲೈನ್‌ಗೆ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆಯಾದರೆ ಆನ್‌ಲೈನ್‌ ಮೂಲಕ ಮಾತ್ರ ತರಗತಿಗಳನ್ನು ನಡೆಸಲಾಗುವುದು’ ಎಂದು ಬೆಂಗಳೂರು ಉತ್ತರದಲ್ಲಿನ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

‘ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ. ಹೀಗಾಗಿ, ನಾವು ಇನ್ನೂ ಭೌತಿಕ ತರಗತಿಗಳನ್ನು ಆರಂಭಿಸಿಲ್ಲ. ಜನವರಿ ಮೊದಲ ವಾರದಲ್ಲಿ ಶಾಲೆ ತೆರೆಯಲು ಉದ್ದೇಶಿಸಿದ್ದೇವೆ’ ಎಂದು ದೆಹಲಿ ಪಬ್ಲಿಕ್‌ ಸ್ಕೂಲ್‌ ಪೂರ್ವದ ಪ್ರಾಂಶುಪಾಲರಾದ ಮನಿಲಾ ಕರ್ವಾಲ್ಹೊ ತಿಳಿಸಿದ್ದಾರೆ.

‘ಹವಾಮಾನ ವೈಪರೀತ್ಯ ಸಮಸ್ಯೆ ಯಾಗಿದೆ. ಹೊಸ ತಳಿ ಪತ್ತೆ ಮತ್ತು ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವು ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಹಲವು ಪೋಷಕರು ಆನ್‌ಲೈನ್‌ ತರಗತಿಗಳನ್ನು ನಡೆಸುವಂತೆ ಮನವಿ ಮಾಡುತ್ತಿದ್ದಾರೆ’ ಎಂದು ನಾಗರಬಾವಿಯ ಆಕ್ಸ್‌ಫರ್ಡ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಪ್ರಾಂಶುಪಾಲ ಸುಪ್ರೀತ್‌ ಬಿ.ಆರ್‌. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here