ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮಯಾಂಕ್ ಅಗರ್ವಾಲ್ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅನುಯಾಯಿಗಳ ಜೊತೆ ಪ್ರಶ್ನೋತ್ತರ ಆಟವನ್ನು ಆಡಿದ್ದಾರೆ. ತಮ್ಮ ಅನುಯಾಯಿಗಳು ಕೇಳಿದ ಭಿನ್ನ ವಿಭಿನ್ನ ರೀತಿಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ ಮಯಾಂಕ್ ಅಗರ್ವಾಲ್ ತಮ್ಮ ನೆಚ್ಚಿನ ಕನ್ನಡ ನಟರು ಯಾರು ಎಂಬುದನ್ನು ಕೂಡ ಬಿಚ್ಚಿಟ್ಟಿದ್ದಾರೆ.
ಹೀಗೆ ಇನ್ಸ್ಟಾಗ್ರಾಂ ಪ್ರಶ್ನೋತ್ತರದಲ್ಲಿ ಅನುಯಾಯಿಯೊಬ್ಬರು ನಿಮಗೆ ಇಷ್ಟವಾಗುವ ಕನ್ನಡ ನಟ ಯಾರು ಎಂಬ ಪ್ರಶ್ನೆಯನ್ನು ಮಯಾಂಕ್ ಅಗರ್ವಾಲ್ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿರುವ ಮಯಾಂಕ್ ಅಗರ್ವಾಲ್ ಕಿಚ್ಚ ಸುದೀಪ್ ಮತ್ತು ಯಶ್ ಎಂದು ಬರೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಅವರು ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವುದರ ಮೂಲಕ ಕಿಚ್ಚ ಸುದೀಪ್ ಮತ್ತು ಯಶ್ ತಮ್ಮ ನೆಚ್ಚಿನ ನಟರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ ಕಿಚ್ಚ ಸುದೀಪ್ ಮತ್ತು ಯಶ್ ಅಭಿಮಾನಿಗಳು ಖ್ಯಾತ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ನಮ್ಮ ನೆಚ್ಚಿನ ಹೀರೋನ ಅಭಿಮಾನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ಖುಷಿ ಪಡುತ್ತಿದ್ದಾರೆ.
Mayank Agarwal about @TheNameIsYash & @KicchaSudeep ❤️????#YashBoss #KGFChapter2 pic.twitter.com/gT961KJCXP
— Yash Boss Force ™ (@YashBossForce) December 14, 2021
ಹಾಗೂ ಮತ್ತೋರ್ವ ಅನುಯಾಯಿ ರಜಿನಿಕಾಂತ್ ಅವರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದು, ಈ ಪ್ರಶ್ನೆಗೆ ಉತ್ತರಿಸಿರುವ ಮಯಾಂಕ್ ಅಗರ್ವಾಲ್ ತಲೈವಾ ಎಂದು ಬರೆದುಕೊಂಡಿದ್ದಾರೆ.