ಕೇಂದ್ರದಲ್ಲಿ ರಾಜ್ಯದ ಬಗ್ಗೆ ಧ್ವನಿ ಎತ್ತದ ಕರ್ನಾಟಕ ಲೋಕಸಭಾ ಸದಸ್ಯರ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ 24 ಕರ್ನಾಟಕದ ಸಂಸದರ ಭಾವಚಿತ್ರಗಳನ್ನಿಟ್ಟು ಹರಾಜು ಪ್ರಕ್ರಿಯೆ ನಡೆಸಿ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್1ರೂಪಾಯಿಗೆ ಹರಾಜಾಗಿದ್ದು, ಉಳಿದ ಸಂಸದರನ್ನ ಯಾರು ಖರೀಸದೇ ಇದ್ದರಿಂದ ಅವರಿಗೆ ಒಂದು ರೂಪಾಯಿಯ ಬೆಲೆ ಇಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.