ಗ್ರಾಹಕರಿಗೆ ಈ ವಾರದಿಂದ ಮತ್ತೆ ಬೆಲೆ ಏರಿಕೆ ಬಿಸಿ

Date:

ನವಿಲುಕೋಸು 100 ರು, ಕ್ಯಾಪ್ಸಿಕಂ 80 ರು, ಬೀನ್ಸ್‌ 90, ಮೂಲಂಗಿ, ಕ್ಯಾರೆಂಟ್‌ 70 ರಿಂದ 80 ರು, ಹೀರೆಕಾಯಿ, ಬದನೆ ಕಾಯಿ ಕೆಜಿ 80 ರು, ಸೊರೆಕಾಯಿ, ಹಾಗಲಕಾಯಿ ಕೆಜಿ 80 ರು, ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಟೊಮೇಟೋ (Tomato) ದರ ಕೇಳುವ ಸ್ಥಿತಿಯಲ್ಲಿ ಇಲ್ಲ.

ಕೆಜಿ 1ಟೊಮೇಟೋ 100, 120 ರು, ಮಹಾ ಮಳೆಯಿಂದಾಗಿ ಕೇವಲ 15 ದಿನಗಳಲ್ಲಿ 3 ಪಟ್ಟು ಬೆಲೆ ಹೆಚ್ಚಿಸಿಕೊಂಡಿರುವ ಜಿಲ್ಲೆಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆ ಪರಿ ಇದು.

ಜಿಲ್ಲೆಯಲ್ಲಿ ಮಳೆಗೆ ಅಪಾರ ಪ್ರಮಾಣದ ತರಕಾರಿ ಕೊಚ್ಚಿ ಹಾನಿಯಾದ ಪರಿಣಾಮ ಈಗ ತರಕಾರಿ (Vegetable ) ಬೆಳೆಯುವ ರೈತರೇ ತರಕಾರಿ ಖರೀದಿಸುವ ದುಸ್ಥಿತಿಗೆ ಬಂದಿದ್ದಾರೆ. ತೀವ್ರ ಮಳೆಯಿಂದ ಜಿಲ್ಲೆಯ ಕೃಷಿ ಬೆಳೆಗಳು (Price) ನೆಲಕಚ್ಚಿದ್ದು ಒಂದಡೆಯಾದರೆ ತೋಟಗಾರಿಕಾ ಬೆಳೆಗಳು ಹೇರಳ ಪ್ರಮಾಣದಲ್ಲಿ ಮಣ್ಣು ಪಾಲಾಗಿದ್ದರಿಂದ ಜಿಲ್ಲಾದ್ಯಂತ ಅಗತ್ಯ ತರಕಾರಿ ಬೆಳೆಗಳಿಗೆ ಭಾರೀ ಬೇಡಿಕೆ ಕಂಡು ಬಂದು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ದುಬಾರಿ ದುನಿಯಾ ಜನರನ್ನು ಕಂಗಾಲಾಗುವಂತೆ ಮಾಡಿದೆ. ತಿಂಗಳು, ನಾಲ್ಕೈದು ದಿನಗಳ ಹಿಂದೆ ಮಾರಾಟವಾದ ಬೆಲೆ (Price) ಇಂದು ಇಲ್ಲವಾಗಿದ್ದು ದಿನದಿಂದ ದಿನಕ್ಕೆ ತರಕಾರಿ ಬೆಲೆ ಹೆಚ್ಚಳ ಆಗುತ್ತಿರುವುದು ಗ್ರಾಹಕರ ನಿದ್ದೆಗೆಡಿಸಿದೆ.

ಅವರೆ ಬಂದರೆ ಕರಕಾರಿ ಬೆಲೆ ಇಳಿಕೆ

ಸಾಮಾನ್ಯವಾಗಿ ಇಷ್ಟೊತ್ತಿಗಾಗಲೇ ಜಿಲ್ಲೆಯ ಮಾರುಕಟ್ಟೆಗೆ (Market) ಅವರೆ ಪ್ರವೇಶ ಆಗುತ್ತಿತ್ತು. ಆದರೆ ಮಳೆಯಿಂದ ಅವರೆ ಸಾಕಷ್ಟುಬೆಳೆ ನಾಶ ಆಗಿರುವುದು ಒಂದಡೆಯಾದರೆ ಮಳೆ ತೀವ್ರತೆಯಿಂದ ತೇವಾಂಶ ಹೆಚ್ಚಳವಾಗಿ ಅವರೆ ಫಸಲು ಇನ್ನಷ್ಟುವಿಳಂಬ ಆಗಿದೆ. ಸಹಜವಾಗಿ ಅವರೆ ಸುಗ್ಗಿಯಲ್ಲಿ ತರಕಾರಿ ಬೆಲೆ ಕುಸಿಯುತ್ತಿತ್ತು. ಆದರೆ ಅವರೆ ಆಗಮನ ವಿಳಂಬ ಆಗಿರುವ ಕಾರಣಕ್ಕೆ ಮಳೆಯಿಂದ ಅಪಾರ ಪ್ರಮಾಣದ ಕೃಷಿ ಬೆಳೆಗಳು ನೆಲ ಕಚ್ಚಿರುವ ಪರಿಣಾಮ ತರಕಾರಿ ಸದ್ಯಕ್ಕೂ ಗ್ರಾಹಕರ ಕೈ ಕಚ್ಚುತ್ತಿದ್ದು ಮಾರುಕಟ್ಟೆಯತ್ತ ಹೆಜ್ಜೆ ಹಾಕಲು ಗ್ರಾಹಕರ ಬೆಲೆ ಏರಿಕೆ ಬಿಸಿಗೆ ಹಿಂದೇಟು ಹಾಕುವಂತಾಗಿದೆ.

ಹೋಟೆಲ್‌ಗಳಲ್ಲಿ ದರ ಸಮರ

ಅತ್ತ ಮಾರುಕಟ್ಟೆಯಲ್ಲಿ ತರಕಾರಿ ಗಗನಮುಖಿ ಆಗುತ್ತಿದ್ದಂತೆ ಇತ್ತ ಹೋಟೆಲ್‌ ಮಾಲೀಕರು ಬೆಲೆ ಏರಿಕೆ ಬಿಸಿಯಿಂದ ಪಾರಾಗಲು ಹೋಟೆಲ್‌ನಲ್ಲಿ ಸಿದ್ದಪಡಿಸುವ ತರಹೇವಾರಿ ಊಟ, ತಿಂಡಿಗಳ ಮೇಲೆ ಬೆಲೆ ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಮಾಲೀಕರನ್ನ ಪ್ರಶ್ನಿಸಿದರೆ ಅಡುಗೆ ಎಣ್ಣೆ, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ದುಪ್ಪಟ್ಟು ಆಗಿರುವುದನ್ನು ಪ್ರಸ್ತಾಪಿಸಿ ಗ್ರಾಹಕರ ಬಾಯಿ ಮುಚ್ಚಿಸಲಾಗುತ್ತಿದೆ. ಹೋಟೆಲ್‌ಗಳ ಊಟ, ತಿಂಡಿಯನ್ನೆ ನಂಬಿರುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ತರಕಾರಿ ಬೆಲೆ ಇಳಿಯಲ್ಲ :

ನಿರಂತರ ಮಳೆಯಿಂದಾಗಿ (Rain) ಬೆಳೆಗಳು ನೆಲಕಚ್ಚಿದ್ದು, ಎಲ್ಲ ತರಕಾರಿಗಳು (Vegitables) ಬೆಲೆ ಗಗನಕ್ಕೇರಿವೆ. ಈ ಏರಿಕೆ ಮತ್ತಷ್ಟುಕಾಲ ಮುಂದುವರೆಯುವ ಲಕ್ಷಣಗಳಿವೆ. ಕ್ಯಾಪ್ಸಿಕಂ, ಕ್ಯಾರೆಟ್‌, ನುಗ್ಗೇಕಾಯಿ, ಟೊಮೆಟೋ ಮತ್ತಿತರ ಅಗತ್ಯ ತರಕಾರಿಗಳ ಬೆಲೆ ಕಡಿಮೆ ಆಗಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗಬಹುದು.

ತರಕಾರಿಗಳ ಪೂರೈಕೆಯೂ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ ನಗರಕ್ಕೆ ತರಕಾರಿ ಪೂರೈಕೆಯಾಗುವ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆ ಮಳೆಯಿಂದಾಗಿ ಹಾಳಾಗಿರುವುದು ಮುಖ್ಯ ಕಾರಣ.ಮಳೆ ಕಡಿಮೆ ಆಗಿದ್ದರಿಂದ ಮುಂದಿನ 3-4 ವಾರಗಳಲ್ಲಿ ಬೀನ್ಸ್‌, ಬಿಟ್‌ರೂಟ್‌, ಮೂಲಂಗಿ ಹಾಗೂ ಸೊಪ್ಪುಗಳ ಪೂರೈಕೆ ಹೆಚ್ಚಾಗಿ ದರ ಕಡಿಮೆಯಾಗಬಹುದು. ರೈತರು ಬೆಳೆ ಬೆಳೆದು ಗ್ರಾಹಕರಿಗೆ ಒದಗಿಸಬೇಕಾದ ಅನಿವಾರ್ಯತೆ ಇದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...