ರಾತ್ರಿ ಈ ಥರ ಅನಿಸಿದ್ರೆ ಅದು ಒಮಿಕ್ರಾನ್ ಲಕ್ಷಣ

Date:

ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜತೆಗೆ ದಿನೇದಿನೆ ಮತ್ತಷ್ಟು ದೇಶಗಳಿಗೆ ಪ್ರವೇಶಿಸುತ್ತ ತನ್ನ ಕಬಂಧ ಬಾಹುಗಳನ್ನು ಆವರಿಸಿಕೊಳ್ಳುತ್ತಿರುವ ರೂಪಾಂತರಿ ವೈರಸ್ ಒಮಿಕ್ರಾನ್ ದಿನದಿಂದ ದಿನಕ್ಕೂ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಲೇ ಇದೆ.

ಹೊಸ ರೂಪಾಂತರಿ ವೈರಸ್ ಒಮಿಕ್ರಾನ್​ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅದು ತೀವ್ರವಾಗಿ ಹರಡಬಲ್ಲುದಾದ್ದರಿಂದ ವೇಗವಾಗಿ ವ್ಯಾಪಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಈ ಹಿಂದೆ ಕಾಣಿಸಿಕೊಂಡಿರುವ ಡೆಲ್ಟಾ ವೇರಿಯಂಟ್​ಗಿಂತಲೂ ಒಮಿಕ್ರಾನ್​ ಹರಡುವಿಕೆ ಮೂರು ಪಟ್ಟು ಅಧಿಕ.


ಈ ಮಧ್ಯೆ ಒಮಿಕ್ರಾನ್​ನ ಪ್ರಮುಖ ರೋಗಲಕ್ಷಣ ಏನು ಎಂಬ ಬಗ್ಗೆ ದಕ್ಷಿಣ ಆಫ್ರಿಕದ ವೈದ್ಯಕೀಯ ಪರಿಣತರು ಮತ್ತಷ್ಟು ಮಾಹಿತಿ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕದಲ್ಲಿನ ಒಮಿಕ್ರಾನ್​ ಅಸ್ತಿತ್ವವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರಾದ ಡಾ.ಆಯಂಜೆಲಿಕ್​ ಕೊಯೆಟ್ಜೆ ಅದರ ಪ್ರಮುಖ ರೋಗಲಕ್ಷಣಗಳನ್ನು ತಿಳಿಸಿದ್ದಾರೆ.

ಒಮಿಕ್ರಾನ್ ತೀರಾ ವಿಶಿಷ್ಟವಾದ ರೋಗಲಕ್ಷಣಗಳನ್ನು ಹೊಂದಿದ್ದು, ಅದು​ ಫ್ಲೂ ಥರದ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ಸೋಂಕಿನಿಂದಾಗಿ ವಾಸನಾ ಶಕ್ತಿ ಕೂಡ ಕಳೆದುಹೋಗಿರುವುದಿಲ್ಲ. ಉಳಿದಂತೆ ಸಣ್ಣಜ್ವರ, ಸುಸ್ತು, ಗಂಟಲು ಕೆರೆತವೂ ಇರಬಹುದು. ಆದರೆ ಒಮಿಕ್ರಾನ್​​ಗೆ ಸಂಬಂಧಿಸಿದಂತೆ ಎಲ್ಲಕ್ಕಿಂತಲೂ ಮುಖ್ಯವಾದ ರೋಗಲಕ್ಷಣವೆಂದರೆ ರಾತ್ರಿಯ ಹೊತ್ತಿನಲ್ಲಿ ವಿಪರೀತ ಮೈಕೈನೋವು ಬಂದು ಬೆವರುವುದು. ಇದರ ಜೊತೆಗೆ ಉಸಿರಾಟದ ಸಮಸ್ಯೆ, ಎದೆನೋವು, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿತ ಕಂಡುಬಂದರೆ ತಕ್ಷಣ ಮುಂಜಾಗ್ರತೆ ವಹಿಸಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...