ಬೆಂಗಳೂರು : ವರಿಷ್ಠರ ಆದೇಶ ಮೇರೆಗೆ ಸಿದ್ದು ಭೇಟಿ ಮಾಡಿದ್ದೇವೆ ಎಂದು ಜೆಡಿಎಸ್ ಮುಖಂಡ ಶರವಣ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಾಮಪತ್ರ ವಾಪಸ್ಗೆ ಅಂತಿಮ ದಿನ ವೈಯುಕ್ತಿಕವಾಗಿ ಏನೇ ಇರಲಿ. ಜಾತ್ಯಾತೀತವಾಗಿ ನಾವು ಜೊತೆಯಾಗಿರಬೇಕೆಂದಿದ್ದೇವೆ. ಇನ್ನೂ ಎರಡು ದಿನ ಇದೆ. ಹಾಗಾಗಿ ನೊಡೋಣ ಎಂದು ಹೇಳಿದ್ದಾರೆ. ಯಾರು ಯಾರಿಗೂ ದಾರಿ ತಪ್ಪಿಸಲ್ಲ. ದೇವೇಗೌಡರು, ಸಿದ್ರಾಮಣ್ಣ ರಾಜಕಾರಣಿಗಳೇ. ನಮ್ಮವರಿಷ್ಠರು ಮಾತನಾಡ್ತಾರೆ. ನಮ್ಮ ಪಕ್ಷದವರು ಯಾರೂ ಭೇಟಿ ಮಾಡಿರಲಿಲ್ಲ. ಹಾಗಾಗಿ ಇಂದು ಭೇಟಿ ಮಾಡಿದ್ದೇವೆ. ಟೀಕೆ ಸಂಧಾನ ಅಲ್ಲವೇ ಅಲ್ಲ. ಪರಿಸ್ಥಿತಿಯಲ್ಲಿ ಜೊತೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು. ಕಾಂಗ್ರೆಸ್ಗೆ ಸಪೋರ್ಟ್ ಮಾಡಬಹುದಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಕಿತ್ತಾಟದಿಂದ ಅವರಿಗೆ ಅನುಕೂಲವಾಗಲಿದೆ. ನಮ್ಮದು 13 ಸದಸ್ಯರಿರೋದು. ಅವರಿಗೆ 24 ಸದಸ್ಯರು ಮಾತ್ರ ಇದ್ದಾರೆ. ಹಾಗಾಗಿ, ನಮಗೆ ಬೆಂಬಲ ಕೊಡಿ ಎಂದು ಹೇಳಿದ್ದೇವೆ. ಕುಮಾರಸ್ವಾಮಿಗೆ ಮಾಹಿತಿ ಕೊಡ್ತೇವೆ. ದೇವೇಗೌಡರೇ ನಮ್ಮನ್ನ ಕಳಿಸಿದ್ದು. ಕುಮಾರಸ್ವಾಮಿ ನಮ್ಮ ಪಕ್ಷದ ನಾಯಕರು. ಅವರ ಗಮನಕ್ಕೆ ತಂದೇ ನಾವು ಬಂದಿದ್ದು ಎಂದರು.
ಆದೇಶ ಮೇರೆಗೆ ಸಿದ್ದು ಭೇಟಿ ಮಾಡಿದ್ದೇವೆ
Date: