ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ವಿಷ ಸರ್ಪಗಳು ಹೆಚ್ಚಾಗಿದ್ದು, ಸಿಲಿಕಾನ್ ಸಿಟಿ ಮಂದಿಯಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿರುವ ಕಾರಣ ಭೂಮಿಯೊಳಗೆ ನೆಲಸೋಕಾಗದೆ ಮನೆಗಳಿಗೆ ವಿಷ ಸರ್ಪಗಳು ನುಗ್ಗುತ್ತಿವೆ.
ಈ ಸಂಬಂಧ ಇತ್ತೀಚೆಗೆ ಬಿಬಿಎಂಪಿ ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅದರಂತೆ ನಿನ್ನೆ ನಗರದ ಓಲ್ಡ್ ಮದ್ರಾಸ್ ರಸ್ತೆಯ RMZ ಇಂಫಾನಿಟಿ ಕಂಪನಿಯ ಕಾಂಪೌಂಡ್ ಒಳಗೆ ಬೃಹತ್ ನಾಗರಹಾವು ನುಗ್ಗಿ ಬೋನ್ ಒಳಗಡೆ ಅವಿತು ಕುಳಿತಿತ್ತು. ನಾಗರಹಾವು ನೋಡಿ ಗಾಬರಿಗೊಂಡ RMZ ಸಿಬ್ಬಂದಿಯು, ಕೂಡಲೇ ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮೋಹನ್ ಅವರು ನಾಗರ ಹಾವನ್ನ ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.