ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಭಯಾನಕ ಬೈಕ್ ವ್ಹೀಲಿಂಗ್ ಮಾಡುವ ಶೋಕ್ದರ್ ಗ್ಯಾಂಗ್ ಫುಲ್ ಆ್ಯಕ್ಟಿವ್ ಆಗಿದೆ. ಆರೋಪಿ ಚೋಟು, ಇನ್ಸ್’ಟಾಗ್ರಾಮ್ ನಲ್ಲಿ ತನ್ನದೇ ಫ್ಯಾನ್ ಫಾಲೋಯಿಂಗ್ ಹೊಂದಿದ್ದು, ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಹಾಡಹಗಲೇ ತನ್ನ ಗ್ಯಾಂಗ್ ನಲ್ಲಿ ಬೈಕ್ ವೀಲಿಂಗ್ ಮಾಡುತ್ತಿರುವ ಈ ಪುಂಡನ ಹುಚ್ಚಾಟ ಅಷ್ಟಿಷ್ಟಲ್ಲ. ಬೈಕ್ ವೀಲಿಂಗ್ ವೇಳೆ ಹೆಲ್ಮೆಟು ಹಾಕದೇ ಭಾರೀ ಶೂರನಂತೆ ವಿಡಿಯೋ ಮಾಡುವ ಈತ, ಆತನ ವಿಡಿಯೋ ನೋಡಿದರೆ ಮೈ ಝಲ್ ಅನ್ನುವುದು ಗ್ಯಾರಂಟಿ. ಇನ್ನೂ ವೀಲಿಂಗ್ ಮಾಡೋ ಬೈಕ್ ಗಳಿಗೆ ನಂಬರ್ ಪ್ಲೇಟ್ ಕೂಡ ಇಲ್ಲ ಎನ್ನುವುದು ತಿಳಿದು ಬಂದಿದೆ. ಅಲ್ಲದೇ ನಕಲಿ ಐಡಿ ಜೊತೆಗೆ ಫೇಕ್ ಐಡಿ ನೀಡಿ ಇನ್ಸ್’ಟಾಗ್ರಾಮ್ ಯೂಸ್ ಮಾಡ್ತಿರುವ ಈ ಆರೋಪಿಗಾಗಿ ನಗರದ 5 ಸಂಚಾರಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಚಿಕ್ಕಜಾಲ, ಹೆಬ್ಬಾಳ, ಸದಾಶಿವನಗರ ಬ್ಯಾಟರಾಯನಪುರ, ಹಾಗೂ ಕೆಂಗೇರಿ ಪೊಲೀಸರು, ಆರೋಪಿ ಪತ್ತೆಗೆ ತಲಾಷ್ ನಡೆಸುತ್ತಿದ್ದಾರೆ.
ಹಾಡಹಗಲೇ ಭಯಾನಕ ಬೈಕ್ ವ್ಹೀಲಿಂಗ್
Date: