ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ವರನಟ ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ಧಾರೆ. ಕಂಠೀರವ ಸ್ಟೂಡಿಯೋದಲ್ಲಿರುವ ರಾಜ್‌ಕುಮಾರ್ ಮತ್ತು ಪಾರ್ವತಮ್ಮ, ಪುನೀತ್ ಸಮಾಧಿ ಸ್ಥಳದ ಅಭಿವೃದ್ಧಿ ವಿಚಾರದ ಸಂಬಂಧ ಚರ್ಚಿಸಲು ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನಿತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಭೇಟಿಯಾಗಿದ್ಧಾರೆ. ಒಂದೇ ಸ್ಥಳದಲ್ಲಿ ಮೂರು ಜನರ ಸಮಾಧಿ ಇದೆ ಇದ್ರ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ಧಾರೆ. ಸಿಎಂ ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ಸಹ ವೀಕ್ಷಣೆ ಮಾಡಿದ್ಧಾರೆ. PWD ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ PwD ಇಲಾಖೆಯಿಂದ ಯೋಜನೆಯ ರೂಪರೇಷ ತಯಾರದ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡೋಣ ಎಂದು ತಿಳಿಸಿದ್ಧಾರೆ.
ಸಿಎಂ ಅವ್ರನ್ನ ಭೇಟಿಯಾದ ರಾಜ್ ಕುಟುಂಬ
Date: