ಇಂದಿನ ಉದ್ಯಮ ವ್ಯವಸ್ಥೆಯೇ ಹಾಗೇ ಅಲ್ವಾ ದೇಶ ವಿದೇಶದ ಹಲವಾರು ಕಂಪನಿಗಳು ತಮ್ಮ ಸಂಸ್ಥೆಯ ಪ್ರಚಾರ ಗಿಟ್ಟಿಸಿಕೊಳ್ಳಲು, ಜನರನ್ನ ತಮ್ಮತ್ತ ಸೆಳೆದುಕೊಳ್ಳಲು ಏನೆಲ್ಲಾ ಸರ್ಕಸ್ ಮಾಡ್ತಾವೇ.. ಅದರಲ್ಲಿ ಕೆಲವು ಕಂಪನಿಗಳಂತೂ ಕಂಪನಿ ಪ್ರಚಾರಕ್ಕಾಗಿ ಎಲ್ಲಿ ನೋಡಿದರಲ್ಲಿ ಆ್ಯಡ್ ಬೋರ್ಡ್‍ಗಳನ್ನ ಹಾಕಿಕೊಂಡಿರುತ್ತಾವೆ. ದೊಡ್ಡ ದೊಡ್ಡ ನಗರಗಳಲ್ಲಿ ತಲೆ ಎತ್ತಿ ಸುತ್ತಲೂ ನೋಡುತ್ತಿದ್ದರೆ ಬರೀ ಆ್ಯಡ್ ಗಳ ಹಾವಳಿಯೇ ಹೆಚ್ಚು. ನಾಮುಂದು ತಾಮುಂದು ಅಂತ ಪೈಪೋಟಿಯನ್ನ ನೀಡುತ್ತಾ ಅದಕ್ಕಾಗಿಯೇ ಕೋಟಿ ಕೋಟಿ ಹಣ ಸುರಿಯುತ್ತಾರೆ. ಅಂತಹ ಲಿಸ್ಟ್ ಗಳಲ್ಲಿ ಈಗ ಬಾರೀ ಸುದ್ದಿ ಮಾಡಿರುವುದು ಏರ್‍ಸೆಲ್ ಕಂಪನಿ.
ನೀವೆಲ್ಲಾ ಆ್ಯಡ್ ಬೋರ್ಡ್‍ಗಳಲ್ಲಿ ಏನನ್ನ ನೋಡಿರ್ತೀರಾ..? ಸಾಮಾನ್ಯವಾಗಿ ಒಂದು ಕಂಪನಿಗೆ ಸಂಬಂಧಪಟ್ಟಂತೆ ಕೆಲವು ಆಫರ್‍ಗಳನ್ನೋ ಅಥವಾ ತಮ್ಮ ಕಂಪನಿಯ ಜಾಹೀರಾತುಗಳನ್ನು ಪೋಸ್ಟರ್ ಮೂಲಕ ಅಂಟಿಸಿರ್ತಾರೆ… ಆದರೆ ಏರ್‍ಸೆಲ್ ಕಂಪನಿಯವರು ಅದಕ್ಕಿಂತ ಸ್ವಲ್ಪ ಮುಂದುವರೆದು, ತಮ್ಮ ಆ್ಯಡ್ ಬೋರ್ಡ್‍ಗಳಲ್ಲಿ ಸುಮಾರು 3 ಲಕ್ಷ ಮೌಲ್ಯದ ಲೈವ್ ಬೋಟ್‍ಗಳನ್ನ ನೇತು ಹಾಕಿದ್ದಾರೆ ಸ್ವಾಮೀ…
ತಮ್ಮ ಪ್ರತಿಯೊಂದು ಆ್ಯಡ್ ಬೋರ್ಡ್‍ಗಳಲ್ಲೂ ಲೈವ್ ಬೋಟ್‍ಗಳನ್ನು ನೇತುಹಾಕಿರುವ ಈ ಏರ್‍ಸೆಲ್ ಸಂಸ್ಥೆ ಮಾನ್ಸೂನ್ ವೇಳೆಯಲ್ಲಿ ಮಳೆ ಹೆಚ್ಚಾದಾಗ ಅದರ ಉಪಯೋಗ ಪಡೆಯಬಹುದಂತೆ…! ಇದು ಸಾಮಾನ್ಯ ಜನರು ತಿಳಿದ ಹಾಗೆ.. ಆದರೆ ವಿಷಯ ಏನಪ್ಪಾ ಅಂದ್ರೆ ಮಾನ್ಸೂನ್‍ನಲ್ಲೂ ಏರ್‍ಸೆಲ್ ನೆಟ್‍ವರ್ಕ್ ಎಲ್ಲರಿಗೂ ಸರಾಗವಾಗಿ ದೊರೆಯತ್ತಂತೆ…! ಕಂಪನಿಯ ಉದ್ದೇಶವೇನೋ ಚೆನ್ನಾಗಿತ್ತು ಆದ್ರೆ ಇದು ಇಂಡಿಯಾದಲ್ಲಿ ವರ್ಕ್ ಆಗುತ್ತಾ..?
ಇದು ನಾವ್ ಕೇಳ್ತಾ ಇರೋ ಪ್ರಶ್ನೆ ಅಲ್ಲ ಜನರು ಆ ಆ್ಯಡ್ ನೋಡಿ ತಮ್ಮ ತಮ್ಮಲ್ಲೇ ಹಾಕೊಳ್ತಾ ಇರೋ ಪ್ರಶ್ನೆ.
ಮುಂಬೈನಲ್ಲಿ ರಾತ್ರೋ ರಾತ್ರಿ ಯಾರೋ ಪುಣ್ಯಾತ್ಮರು ನೇತು ಹಾಕಿದ್ದ ಬೋಟನ್ನೇ ಕದ್ದು ಕೊಂಡೊಯ್ದಿದ್ದಾರೆ. ನೆಲದ ಮೇಲೆ ಬಿದ್ದ 10ರೂ.ವನ್ನೆ ಬಿಡದ ಇಂದಿನ ಕಾಲಘಟ್ಟದಲ್ಲಿ 3 ಲಕ್ಷ ಮೌಲ್ಯದ ವಸ್ತುವನ್ನು ಬಿಟ್ಟಾರೇ…!
ಗುವಹಾಟಿಯಲ್ಲೂ ಇದೇ ರೀತಿ ಆಗಿದೆಯಂತೆ ಪೊಲೀಸ್ ಕಂಪ್ಲೇಂಟ್ ಕೊಡಲಾಗಿದೆಯಂತೆ.. ಈ ಕತರ್ನಾಕ್ ಐಡಿಯಾಗೆ ಏನನ್ನಬೇಕೋ…?
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!