ಮಹದಾಯಿ ವಿವಾದದ ಬಗ್ಗೆ ನಿಮಗೆ ಗೊತ್ತಾ..?

Date:

ಕರ್ನಾಟಕದಾದ್ಯಂತ ತೀವ್ರ ಕಿಚ್ಚು ಹಚ್ಚಿರುವ ಕಳಸಾ ಬಂಡೂರಿ ವಿವಾದವನ್ನು ಕಾವೇರಿ ವಿವಾದಕ್ಕೆ ಹೋಲಿಕೆ ಮಾಡಬಹುದು. ಮಹದಾಯಿ ನದಿಯನ್ನು ಮಲ್ಲಪ್ರಭ ನದಿಗೆ ಸಂಪರ್ಕಿಸುವ ಮೂಲಕ ಬೆಳಗಾವಿ, ಹುಬ್ಬಳ್ಳಿ, ಗದಗ ಮೊದಲಾದ ಉತ್ತರ ಕರ್ನಾಟಕ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕರ್ನಾಟಕದ ಪ್ರಯತ್ನವಾಗಿದೆ. ಆದರೆ, ಗೋವಾ ಸರಕಾರ ಇದನ್ನು ವಿರೋಧಿಸುತ್ತಾ ಬಂದಿರುವುದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.
ಮಹದಾಯಿ ನದಿ ಕುರಿತು…
ಕಾವೇರಿ ನದಿ ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಹೆಚ್ಚು ಹರಿದು ಸಮುದ್ರ ಸೇರುವಂತೆ, ಮಹದಾಯಿ ನದಿ ನಮ್ಮ ರಾಜ್ಯದಲ್ಲಿ ಹುಟ್ಟಿ ಗೋವಾದಲ್ಲಿ ಹೆಚ್ಚು ಹರಿದು ಅರಬ್ಬೀ ಸಮುದ್ರ ಸೇರಿಕೊಳ್ಳುತ್ತದೆ. ಗೋವಾದಲ್ಲಿ ಮಾಂಡವಿ ನದಿ ಎಂದು ಖ್ಯಾತವಾಗಿರುವ ಮಹದಾಯಿ ನದಿ ಬೆಳಗಾವಿಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಭೀಮ್’ಗಢ್ ಎಂಬಲ್ಲಿ ಹುಟ್ಟುತ್ತದೆ. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ದಾಟಿ ಗೋವಾ ರಾಜ್ಯವನ್ನು ತಲುಪುತ್ತದೆ. ಕರ್ನಾಟಕದಲ್ಲಿ ಈ ನದಿ 30 ಕಿಮೀ ಪ್ರವಹಿಸುತ್ತದೆ. ಗೋವಾದಲ್ಲಿ 52 ಕಿಮೀ ಪ್ರವಹಿಸಿ ಅಲ್ಲಿಂದ ಸಮುದ್ರ ಸೇರುತ್ತದೆ. ಮಹದಾಯಿ ನದಿಗೆ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದ ಭಾಗದಿಂದಲೇ. ಕಳಸಾ, ಬಂಡೂರಿ ಸೇರಿದಂತೆ ಹಲವು ತೊರೆ ಅಥವಾ ಉಪನದಿಗಳಿಂದ ನೀರು ಮಹದಾಯಿ ನದಿ ಸೇರಿಕೊಳ್ಳುತ್ತದೆ. ಒಟ್ಟು 200 ಟಿಎಂಸಿ ಅಡಿಯಷ್ಟು ನೀರು ಈ ನದಿಯಲ್ಲಿ ಸಂಗ್ರಹವಾಗುತ್ತದೆ. ಆದರೆ, ಬಹುತೇಕ ನೀರು ಸಮುದ್ರ ಸೇರುತ್ತದೆ.

ಕಳಸಾ ಬಂಡೂರಿ ಯೋಜನೆ ಏನು..?
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರದ ಸ್ಥಿತಿ ಇದೆ. 1980ರಲ್ಲಿ ನವಲಗುಂದ ಮತ್ತು ನರಗುಂದದ ರೈತರು ನೀರಿನ ಅಭಾವಕ್ಕೆ ಬೇಸತ್ತು ದೊಡ್ಡ ಪ್ರತಿಭಟನೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಲು ರಚಿಸಿದ್ದ “ಬೊಮ್ಮಾಯಿ ಸಮಿತಿ”, ಮಹದಾಯಿ ಮತ್ತು ಮಲ್ಲಪ್ರಭ ನದಿ ಜೋಡಣೆಗೆ ಶಿಫಾರಸು ಮಾಡಿತು. ಅದರಂತೆ ಮಹದಾಯಿ ನದಿಯನ್ನ ಸೇರಿಕೊಳ್ಳುವ ಕಳಸಾ, ಬಂಡೂರಿ, ಹಳತಾರ್, ಚೋರ್ಲಾ, ಪೋಟ್ಲಾ, ಕೋರ್ಲಾ ಮತ್ತು ಗುರ್ಕಿ ತೊರೆಗಳಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಕೆಲ ಭಾಗದ ನೀರನ್ನು ಮಲ್ಲಪ್ರಭಕ್ಕೆ ಹರಿಸುವುದು ಈ ಯೋಜನೆಯ ಉದ್ದೇಶ.

ಬೊಮ್ಮಾಯಿ ಅವಧಿಯಲ್ಲಿ ಕಾರ್ಯರೂಪಕ್ಕೆ ಯತ್ನ:
ಎಸ್.ಆರ್.ಬೊಮ್ಮಾಯಿ 1989ರಲ್ಲಿ ಮುಖ್ಯಮಂತ್ರಿಯಾದಾಗ ಈ ಸಮಿತಿಯ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ಸರಕಾರ ಮುಂದಾಯಿತು. ಕಳಸಾ ಉಪನದಿಗೆ ಅಣೆಕಟ್ಟು ಕಟ್ಟಿ ಆ ಮೂಲಕ ಕರ್ನಾಟಕಕ್ಕೆ 45 ಟಿಎಂಸಿ ಅಡಿಗಳಷ್ಟು ನೀರನ್ನು ಕರ್ನಾಟಕದ ಭಾಗಗಳಿಗೆ ಹರಿಸುವ ಉದ್ದೇಶವಿತ್ತು. ಜೊತೆಗೆ ಕಳಸಾ ಬಳಿ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿ ಕರ್ನಾಟಕ ಮತ್ತು ಗೋವಾ ಎರಡೂ ವಿದ್ಯುತ್ ಹಂಚಿಕೊಳ್ಳುವುದು ಯೋಜನೆಯ ಒಂದು ಭಾಗವಾಯಿತು.
ಆದರೆ, ಬೊಮ್ಮಾಯಿ ಸರಕಾರ ಪತನಗೊಂಡ ಬಳಿಕ ಯೋಜನೆ ಮುರುಟಿಕೊಂಡು ಬಿದ್ದಿತು. ಆರಂಭದಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದ ಗೋವಾ ಸರಕಾರ ಈಗ ವಿರೋಧಿಸಲು ಆರಂಭಿಸಿತು. ಆದರೆ, ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ಇನ್ಸ್’ಟಿಟ್ಯೂಟ್ (ಎನ್’ಇಇಐ) ಸಂಸ್ಥೆಯು ಈ ಯೋಜನೆಗೆ ಹಸಿರು ನಿಶಾನೆ ತೋರಿದ ಬಳಿಕ ಕರ್ನಾಟಕ ಸರಕಾರ ಮತ್ತೆ ಯೋಜನೆಗೆ ಜೀವ ತುಂಬತೊಡಗಿತು.

ಕೃಷ್ಣ ಅವಧಿಯಲ್ಲೂ ಯತ್ನ:
ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಆಗಿನ ನೀರಾವರಿ ಸಚಿವ ಹೆಚ್.ಕೆ.ಪಾಟೀಲ್ ಈ ಯೋಜನೆಗೆ ಕಳಸಾ-ಬಂಡೂರಿ ನಾಲೆ ಯೋಜನೆ ಎಂದು ಹೆಸರು ಬದಲಿಸಿದರು. ಅದರಂತೆ, ಮಹದಾಯಿ ನದಿಯಿಂದ 9 ಟಿಎಂಸಿ ಅಡಿ ನೀರನ್ನು ಮಲ್ಲಪ್ರಭ ನದಿಗೆ ಹರಿಯಿಸುವ ಉದ್ದೇಶವಿತ್ತು. ಈ ಯೋಜನೆಗೆ ಕೇಂದ್ರದ ವಾಜಪೇಯಿ ಸರಕಾರ ಹಾಗೂ ಕೇಂದ್ರೀಯ ಜಲ ಆಯೋಗ ಒಪ್ಪಿಗೆ ನೀಡಿತಾದರೂ ಗೋವಾ ಸರಕಾರದಿಂದ ಆಕ್ಷೇಪ ವ್ಯಕ್ತವಾದ ಬಳಿಕ ಕೈಚೆಲ್ಲಿ ಸುಮ್ಮನಾಯಿತು. ಹೀಗಾಗಿ, ಕಳಸಾ ಬಂಡೂರಿ ನಾಲೆ ಯೋಜನೆ ಹಾಗೆಯೇ ಸ್ಥಗಿತಗೊಂಡಿತು. ಈಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರೇ ಆಗಿನ ಗೋವಾ ಮುಖ್ಯಮಂತ್ರಿಯಾಗಿದ್ದವರು. ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬರದೇ ಇರಲು ಅವರೇ ಪ್ರಮುಖ ಕಾರಣವೆಂದರೆ ತಪ್ಪಾಗುವುದಿಲ್ಲ.
ಕುಮಾರಸ್ವಾಮಿಯಿಂದ ಯೋಜನೆಗೆ ಪುನಶ್ಚೇತನ:
2006ರಲ್ಲಿ ಆಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಯೋಜನೆಗೆ ಮತ್ತೆ ಜೀವ ತುಂಬಿದರು. ಆ ವರ್ಷದ ಸೆಪ್ಟಂಬರ್ 22ರಂದು ಬೆಳಗಾವಿನ ಖಾನಾಪುರದ ಕನಕುಂಬಿಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಗೋವಾ ಸರಕಾರ ಕೋರ್ಟ್’ಗೆ ಮನವಿ ಮಾಡಿ ಕಾಮಗಾರಿಗೆ ತಡೆ ತಂದಿತು.

ಗೋವಾದ ಕ್ಯಾತೆ ಏನು..?
ಮಹದಾಯಿ ನದಿ ಗೋವಾದ ಪ್ರಮುಖ ಎರಡು ನದಿಗಳಲ್ಲೊಂದು. ಮಹದಾಯಿಯ ನೀರಿನ ಸಂಗ್ರಹಕ್ಕೆ ಕಾರಣವಾಗುವ ತೊರೆಗಳಿಗೆ ತಡೆ ಹಾಕಿದರೆ ಗೋವಾ ಪಾಲಿಗೆ ಸಿಗುವ ನೀರು ಕಡಿಮೆಯಾಗುತ್ತದೆ. ಮಹದಾಯಿ ನದಿ ನೀರಿನ ಹರಿವು ಕಡಿಮೆಯಾದರೆ ಗೋವಾದ ಸುಂದರ ಮತ್ತು ಆರೋಗ್ಯಯುತ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಧಕ್ಕೆ ಬೀಳುತ್ತದೆ ಎಂಬುದು ಗೋವಾದ ಆತಂಕವಾಗಿದೆ. ಹೀಗಾಗಿ, ಕಳಸಾ ಬಂಡೂರಿ ಯೋಜನೆಯನ್ನು ಗಟ್ಟಿಯಾಗಿ ವಿರೋಧಿಸುತ್ತಾ ಬಂದಿದೆ.
ನ್ಯಾಯಾಧೀಕರಣ ಸ್ಥಾಪನೆ:
2009ರಲ್ಲಿ ಮಹದಾಯಿ ನೀರು ವಿವಾದ ನ್ಯಾಯಾಧಿಕರಣವನ್ನು ಸ್ಥಾಪಿಸಲಾಯಿತು. ಕಳಸಾ ಬಂಡೂರಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಗೋವಾ ಮಾಡಿಕೊಂಡಿದ್ದ ತಡೆ ಮನವಿಯನ್ನು ನ್ಯಾಯಾಧಿಕರಣವು ತಿರಸ್ಕರಿಸಿತ್ತು. ಆದರೆ, ಕಳೆದ ವರ್ಷ ಗೋವಾದ ಮೇಲ್ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಕರಣವು ಕಳಸಾ ಕಾಮಗಾರಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿತು. ಅಂತಿಮ ಆದೇಶ ಬರುವವರೆಗೂ ಮಹದಾಯಿ ನದಿ ನೀರನ್ನು ಕಳಸಾ ನಾಲೆಗೆ ತಿರುಗಿಸಬಾರದು ಎಂದು ನ್ಯಾಯಾಧೀಕರಣ ಕರ್ನಾಟಕಕ್ಕೆ ಸೂಚಿಸಿತು 7.65 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ ಎಂದ ಮಹದಾಯಿ ನ್ಯಾಯಾಧೀಕರಣ.
ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ತೀರ್ಪು ಇಂದು ಹೊರಬಿದ್ದಿದ್ದು, ಕನಾಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸರುವ ನ್ಯಾ. ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಕರ್ನಾಟಕಕ್ಕೆ 7.65 ಟಿಎಂಸಿ ಅಡಿ ನೀರು ಬಳಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಧಿಕರಣ, ಈ ತೀರ್ಪಿನಿಂದ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.

  • ವಿಶ್ವನಾಥ್ ಶೇರಿಕಾರ್
    .

POPULAR  STORIES :

ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !

ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!

ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

Share post:

Subscribe

spot_imgspot_img

Popular

More like this
Related

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...