ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ

Date:

ಹಲವು ತಿಂಗಳುಗಳ ಹೋರಾಟ ಹಾಗೂ ಸುದೀರ್ಘ ಬಿಡ್ಡಿಂಗ್ ವಿಧಾನಗಳನ್ನು ಪೂರೈಸಿದ ಮೇಲೆ ವೆರಿಜೋನ್ ಕಂಪನಿಯು, ಯಾಹೂನ ವ್ಯವಹಾರಗಳನ್ನು ತಾವು ಸಂಪೂರ್ಣವಾಗಿ $ 4.83 ಬಿಲಿಯನ್ ಗೆ ಖರೀದಿಸಿದ್ದೇವೆ ಎಂಬ ಒಂದು ಪ್ರಕಟಣೆಯನ್ನು ಹೊರತಂದಿತು. ಈ ಕಂಪನಿಯ ಖರೀದಿಯ ಮುಖ್ಯ ಉದ್ದೇಶವು YAHOO ಹಾಗೂ AOL (ಇದನ್ನು ವೆರಿಜೋನ್ ಕಳೆದ ವರುಷವೇ ಖರೀದಿಸಿತ್ತು)ಇವೆರಡೂ ಕಂಪನಿಯ ಏಕೀಕರಣಗೊಳಿಸುವುದಕ್ಕಾಗಿರಬಹುದು ಎಂದು ತೋರುತ್ತದೆ ಇದಿನ್ನೂ ಮುಖ್ಯವಾದ ಅರ್ಥದಲ್ಲಿ ಹೇಳುವುದಾದಲ್ಲಿ ಈಗ ಬೃಹತ್ತಾಗಿ ಬೆಳೆದು ನಿಂತಿರೋ ಫೇಸ್ ಬುಕ್ ಹಾಗೂ ಗೂಗಲ್ ಜೊತೆಗೆ ಪ್ರತಿಸ್ಪರ್ಧಿಯಾಗಲೂ ನಡೆಸುವ ಯೋಜನೆ ಆಗಿರಬಹುದು.ನಿಮಗೆ ಗೊತ್ತಿಲ್ಲದ ಇನ್ನೂ ಒಂದು ವಿಷ್ಯ ಏನಂದ್ರೆ AOL ಈ ಮೊದಲೇ TECH CRUNCH ನ್ನು ಖರೀದಿ ಮಾಡಿದೆ.
ಇನ್ನೊಂದು ರೀತಿಯಲ್ಲಿ ಯಾಹೂ C.E.O ಆಗಿರೋ ಮರಿಸ್ಸಾ ಮೇಯರ್,ಈ ಡೀಲ್ ನಿಂದ ಸಂತುಷ್ಟಳಾಗಿದ್ದಾಳೆಂದು ತೋರಿಬರುತ್ತದೆ.ಯಾಹೂವನ್ನು ಇಲ್ಲಿಯ ತನಕ ಬೆಳೆದು ನಿಲ್ಲಿಸಲು ಆಕೆ ಪಟ್ಟ ಶ್ರಮ ಎಲ್ಲಾ ವ್ಯರ್ಥವಾದದ್ದಲ್ಲದೆ,ಆಕೆಯ ಕೆಲಸವನ್ನೂ ಕಿತ್ತು ಕೊಂಡಿತು.ಕಂಪನಿಯ ಕೊನೆಯ C.E.O ಆಗಿ ಆಕೆ ತನ್ನ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಯಿಸಿದ್ದಾಳೆ.ಆಕೆ ಕಟ್ಟ ಕಡೆಯದಾಗಿ ತನ್ನ ನೆಚ್ಚಿನ ಕೆಲಸಗಾರರಿಗೆ ಬರೆದ ಪತ್ರವನ್ನು ನೀವೇ ಓದಿ….
ಪ್ರೀತಿಯ ಯಾಹೂಗಳೇ,
ಹಲವು ದಿನಗಳ ಹಿಂದೆಯೆ ನಾವು ನಮ್ಮ ಯಾಹೂ ಕಂಪನಿಯ ಚಾಲ್ತಿಯ ವಹಿವಾಟನ್ನು ವೆರಿಝೋನಾ ಖರೀದಿ ಮಾಡುತ್ತದೆ ಎಂಬ ಪ್ರಕಟಣೆಯನ್ನು ನಿಮ್ಮ ಮುಂದಿಟ್ಟಿದ್ದು,ಈ ನಿಟ್ಟಿನಲ್ಲಿ ಇದೊಂದು ಸುದೀರ್ಘ ಕಠಿಣ ಪ್ರಕ್ರಿಯೆಯಾಗಿದ್ದು,ಅನೇಕ ತಿಂಗಳುಗಳೇ ಕಳೆದು ಹೋಗಿ,ಕೊನೇಗೆ ನಮ್ಮ ಕಂಪನಿಗೆ ಉತ್ತಮ ಲಾಭಾಂಶ ದೊರಕುವುದರೊಂದಿಗೆ ಕೊನೆಗೊಂಡಿದೆ.ಇವತ್ತಿನ ಈ ಪ್ರಕಟಣೆಯು,ಯಾಹೂವಿನ ಚಾಲ್ತಿಯ ವಹಿವಾಟನ್ನು ನಮ್ಮ ಏಷ್ಯಾದ ಶೇರು ಆಸ್ತಿಯ ಹಕ್ಕಿನಿಂದ ಬೇರ್ಪಡಿಸುವತ್ತ ಮೊದಲ ಹೆಜ್ಜೆಯಷ್ಟೇ ಅಲ್ಲ ಬದಲಾಗಿ ಯಾಹೂ ಅತೀ ವೇಗದಲ್ಲಿ ಪುನರ್ನಿರ್ಮಾಣದ ಹಾದಿಯತ್ತ ಸಾಗಲು ನೀಡಿದ ಒಂದು ಅದ್ಭುತ ಅವಕಾಶವಾಗಿದೆ.ಯಾಹೂವಿನಲ್ಲಿ ಆಸಕ್ತಿ ತೋರಿಸಿದ ಹಲವು ಕಂಪನಿಗಳಲ್ಲಿ ನಾವು ಅಪೇಕ್ಷಿಸಿದ ಬೆಲೆಗೆ ವೆರಿಝೋನ್ ಉತ್ತಮವಾಗಿ ಸ್ಪಂದಿಸಿದ್ದು ಹಾಗೂ ಇದು ಇವುಗಳ ವಿಲೀನವು ನಮ್ಮ ಬಳಕೆದಾರರು,ಜಾಹೀರಾತುದಾರರು ಅಲ್ಲದೆ ಕಂಪನಿಯ ಪಾಲುದಾರರಿಗೆ ಒಂದು ಉತ್ತಮ ರೀತಿಯಲ್ಲಿ ತೃಪ್ತಿ ಪಡಿಸಿದೆ ಎಂಬ ವಿಶ್ವಾಸ ನಮಗಿದೆ.
ಇವತ್ತಿನ ತನಕದ ಯಾಹೂ ನಡೆದು ಬಂದ ಹಾದಿಯ ಬಗ್ಗೆ ನಿಮಗೆ ತಿಳಿಸಲು ಇದು ನಮಗೆ ಸಿಕ್ಕಿರೋ ಒಂದು ಅಮೂಲ್ಯ ಅವಕಾಶ
ನಮ್ಮ ಯಾಹೂ ಸಂಪೂರ್ಣ ಜಗತ್ತನ್ನೇ ಬದಲಾಯಿಸಿದ ಒಂದು ಕಂಪನಿಯಾಗಿದೆ.ಯಾಹೂವಿಗೂ ಮೊದಲು ಇಂಟರ್ನೆಟ್ ಎಂಬುದೊಂದು ಕೇವಲ ಸರಕಾರದ ಸಂಶೋಧನೆಯ ಒಂದು ವಸ್ತುವಾಗಿತ್ತಷ್ಟೆ.ಇದನ್ನು ನವೀಕರಿಸಿ ಸುಂದರ ಮಾನವೀಯ ರೂಪು ನೀಡಿದ ಸಂಸ್ಥೆ ನಮ್ಮ ಯಾಹೂ, ಹಾಗೂ ಈಮೇಲ್,ವೆಬ್,ಸರ್ಚ್,ರಿಯಲ್ ಟೈಮ್ ಮೀಡಿಯಾ ಹಾಗೂ ಇನ್ನೂ ಅನೇಕ ವಿಷ್ಯಗಳನ್ನು ಪ್ರಸಿದ್ದಿ ಪಡಿಸಿರೋ ಹೆಗ್ಗಳಿಕೆ ನಮ್ಮ ಯಾಹೂದು.
ಯಾಹೂ ನ ವೈಶಿಷ್ಟ್ಯತೆಯು ಯಾಹೂನ ಧ್ಯೇಯವಾಗಿರೋ ಅನೇಕ ಬಿಲಿಯನ್ ಗೂ ಮೀರಿ ಸಾಗಿರೋ ಬಳಕೆದಾರರಿಗೆ ಇಲ್ಲಿನ ತಯಾರಾಗೋ ವಸ್ತುಗಳ ಮೂಲಕ ಉತ್ತಮ ಸೇವೆ ನೀಡುವುದಲ್ಲದೆ,ಸಂಪೂರ್ಣ ಪ್ರಪಂಚವನ್ನೇ ಉತ್ತಮವಾದ ಹಾದಿಯಲ್ಲಿ ಸಾಗಿಸುವುದಾಗಿತ್ತು.ಹಲವು ವರುಷಗಳಿಂದಲೂ ನಮ್ಮಲ್ಲಿರೋ ಆ ಹುಮ್ಮಸ್ಸು,ಆ ಪರಿಪೂರ್ಣತೆ,ಆ ನಿಷ್ಠೆ,ಆ ಪ್ರಾಮಾಣಿಕತೆ ಹಾಗೂ ಹಿಡಿದ ಕೆಲಸವನ್ನು ನಾವೆಲ್ಲರೂ ಒಮ್ಮತವಾಗಿ ಸಾಧಿಸಲು ತೋರಿದ ಹೋರಾಟದ ಸಂಪೂರ್ಣ ಚಿತ್ರಣ ನಿಮ್ಮ ಮುಂದಿದೆ ಅಲ್ಲವೇ?ಈ ಕಂಪನಿಯ ಸಮಗ್ರ ಬದಲಾವಣೆಗೆ ನಾವದೆಷ್ಟು ಪ್ರಯತ್ನ ಪಟ್ಟಿದ್ದೇವೆ ಹಾಗೂ ಅದರಲ್ಲಿ ಅಪ್ರತಿಮ ಅಭಿವೃದ್ದಿಯನ್ನು ಮಾಡಿ ತೋರಿಸಿದ್ದೇವೆ.ಕಂಪನಿಯ ಆರ್ಥಿಕ ಪರಿಸ್ಥಿತಿಗೆ ಸಂಬಂದಿಸಿದ ರಚನಾತ್ಮಕ ಬೆಳವಣಿಗೆಗೆ ಧಕ್ಕೆ ತಂದೊಡ್ಡುತ್ತಿದ್ದ ಅನೇಕ ಸಂದಿಗ್ಧ ಪರಿಸ್ಥಿಥಿಯನ್ನು ನಾವು ನಿವಾರಿಸಿದ್ದಲ್ಲದೆ,ಒಂದು ಸುದೃಡ ಸುಂದರ ಯಾಹೂ ನ ವೇಗವಾಗಿ ಆಧುನೀಕರಣಗೊಳಿಸಿದೆವು.ನಾವು ಸುಮಾರು 600 ಮಿಲಿಯ ತಿಂಗಳ ಬಳಕೆದಾರರಿಗಾಗಿ ನಮ್ಮ ಮೊಬೈಲ್ ಸೇವೆಯನ್ನು ಮೂರು ಪಟ್ಟು ವಿಸ್ತರಿಸಿದ್ದಲ್ಲದೆ,ನಾವು 2011 ರಲ್ಲಿ ಮಾವೆನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿ ಅದನ್ನು ಶೂನ್ಯದಿಂದ 2015 ರಲ್ಲಿನ GAAP ರೆವೆನ್ಯೂವಿನ $ 1.65 ತನಕ ಅದನ್ನು ಕಟ್ಟಿ ಬೆಳೆಸಿದ್ದೇವೆ.ನಾವು ನಮ್ಮ ಗ್ರಾಹಕರ ಉತ್ಪನ್ನದ ಪ್ರತೀ ಅಂಶಗಳಿಗೆ ಮಾರುಕಟ್ಟೆ ಕಲ್ಪಿಸಿಕೊಟ್ಟು ಆ ಮೂಲಕ ಅಭಿವೃದ್ದಿ ಪಡಿಸಿದ್ದಲ್ಲದೆ,ಜೆಮಿನಿ ಹಾಗೂ ಬ್ರೈಟ್ ರೋಲ್ ಜೊತೆಯಲ್ಲಿ ನಮ್ಮ ಜಾಹಿರಾತುದಾರರ ವಸ್ತುಗಳನ್ನು ಉತ್ತಮ ಜಾಹೀರಾತುಗಳ ಮೂಲಕ ಅಭಿವೃದ್ದಿ ಪಡಿಸಿದ್ದೇವೆ.ನಾವು ಮಾಡಿರೋ ಸಾಧನೆಯನ್ನು ತೋರಲು ಈ ಅಂಶಗಳೇ ಸಾಕು…ಅದಲ್ಲದೇ ನಾವು ಇಲ್ಲಿಯವರೆಗೆ ತಲಪಲು ನಾವು ಅದೆಷ್ಟು ಕಷ್ಟ ಪಟ್ಟಿದೆವೋ ಇದು ನಮಗೆಲ್ಲಾರಿಗೂ ಗೊತ್ತು.
ಆ ಪರಿಶ್ರಮ ಹಾಗೂ ಆ ಸಾಧನೆಯ ಕಾರಣದಿಂದ ನಮ್ಮ ಯಾಹೂವಿಗೆ ಮುಂದಿನ ಭವಿಷ್ಯದ ಅಧ್ಯಾಯದಲ್ಲಿ ಅದ್ಭುತ ಅವಕಾಶಗಳು ಸಿಗಬಹುದು.
ಈ ವಿಕ್ರಯವು ಕಂಪನಿಯ ಪಾಲುದಾರರಿಗೆ ಅವರ ಮೊತ್ತವನ್ನು ದೊರಕಿಸಿಕೊಡುವ ಹಾದಿಯಲ್ಲಿ ಇಟ್ಟ ಒಂದು ಯೋಜಿತ ಹೆಜ್ಜೆಯಷ್ಟೇ ಅಲ್ಲ,ಯಾಹೂವಿನ ಕೆಲಸವನ್ನು ಮೊಬೈಲ್,ವೀಡಿಯೋ,ಜಾಹೀರಾತು ಹಾಗೂ ಸಮಾಜದ ಕೆಲಸಗಳಲ್ಲಿ ವೇಗವಾಗಿ ಮುಂದುವರಿಯಲು ಯಾಹೂಗೆ ನೀಡಿರೋ ಒಂದು ಉತ್ತಮ ಅವಕಾಶವೂ ಆಗಿದೆ.ಜಗತ್ತಿನಲ್ಲಿ ಅತೀ ದೊಡ್ದ ವಯರ್ ಲೆಸ್ ಹಾಗೂ ಕೇಬಲ್ ಕಂಪನಿಗಳಲ್ಲೊಂದಾದ ವೆರಿಝೋನ್ ಹಲವು ತರದ ಸೇವೆ ಗಳಿಗೆ ಅವಕಾಶ ಕೊಡುತ್ತದೆ.ಮೊಬೈಲ್ ಹಾಗೂ ವೀಡಿಯೋ ಏಡ್ ಟೆಕ್ ಶೇರಿಂಗ್ ಪ್ರಾಮುಖ್ಯತೆ,AOL ಬಗೆಗಿನ ಸೂಕ್ಷ್ಮ ಮಾಹಿತಿ ಯ ಕಡೆ ಎಲ್ಲರ ಗಮನ ಕೇಂದ್ರೀಕರಿಸುವಂತೆ ಮಾಡುವುದಲ್ಲದೆ,ವೆರಿಝೋನ್ ಒಂದು ಸಂಪೂರ್ಣ ಮಾಹಿತಿಯನ್ನು ಜಗತ್ತಿಗೆ ನೀಡುತ್ತದೆ.ವೆರಿಝೋನ್ ನ ಮುಖ್ಯ ಧ್ಯೇಯ ಮೊಬೈಲ್ ಮಾಧ್ಯಮದಲ್ಲಿ 2020 ಕ್ಕಾಗುವಾಗ ಗ್ಲೋಬಲ್ ಆಡಿಯನ್ಸ್ ನ್ನು 2 ಬಿಲಿಯನ್ ಬಳಕೆದಾರರ ತನಕ ಹಾಗೂ ಕಂಪನಿಯ ರೆವೆನ್ಯೂವನ್ನು $ 20 ಬಿಲಿಯನ್ ತನಕ ವಿಸ್ತರಿಸುವುದಾಗಿದೆ.ಯಾಹೂ ಉತ್ಪನ್ನಗಳು ಹಾಗೂ ಬ್ರಾಂಡ್ ಗಳು ಅವರ ಈ ಉದ್ದೇಶದಲ್ಲಿ ಪ್ರಮುಖ ಪಾತ್ರವಹಿಸುವುದು.AOL ಹಾಗೂ VERIZON ಜೊತೆ ವಿಲೀನವಾಗಿರುವುದು ಅವರ ಸಾಧನೆಗೆ ತುಂಬಾ ಸಹಕಾರಿಯಾದ ಹಾದಿಯಾಗಿದೆ.ಮಾವೆನ್ಸ್ ಕಂಪನಿಯ ವಿಶ್ಯದಲ್ಲಿ ನಾವು ನಡೆಸಿದ ಹೋರಾಟ ಹಾಗೂ ಇಲ್ಲಿಯ ತನಕ ತಲಪಲು ಪಟ್ಟ ಶ್ರಮ ನಿಜಕ್ಕೂ ಊಹಿಸಲೂ ಆಗದಷ್ಟು ಆಸಾಧ್ಯವಾಗಿದ್ದು‍ದಾಗಿತ್ತು.ನಮ್ಮ ಕಂಪನಿಯ ಕಾರ್ಯಕ್ಶಮತೆಯ ವಿಧಾನವು ಕೆಲವೊಂದು ಅನಿಶ್ಚಿತತೆಯನ್ನು ಸೃಷ್ಟಿ ಮಾಡಿತ್ತು,ಆದ್ರೆ ನಮ್ಮ ನಿಷ್ಟಾವಂತ.ಪ್ರಾಮಾಣಿಕ ಕೆಲಸಗಾರರು ನಮ್ಮ ಹೆಜ್ಜೆಯಲ್ಲಿ ಹೆಜ್ಜೆ ಯಿಟ್ಟು ನಮ್ಮ ಜೊತೆ ಸಹಕರಿಸಿ ಎಲ್ಲಾ ಸವಾಲುಗಳನ್ನೂ ಎದುರಿಸಿದ್ದಾರೆ.ಮೊದಲಾರ್ಧ ವರುಶದಲ್ಲಿ ನಾವು ಯೋಜನೆಯನ್ನು ಕಾರ್ಯರೂಪಕ್ಕೆ ತಂದೆವು,ಉತ್ಪಾದನೆಯ ಹಿಂದಿರೋ ಜನರ ಅಪೇಕ್ಷೆಗಳನ್ನು ಅಳೆಯುವುದು ಕೆಲವೊಮ್ಮೆ ಅಸಾಧ್ಯದ ಮಾತು.ಆದ್ರೆ ನಮ್ಮ ತಂಡವು ಒಟ್ಟಾಗಿ ಒಂದು ಅದ್ಭುತ ಪ್ರೋಡಕ್ಟ್ಸ್ ಗಳನ್ನು ತಯಾರಿಸಿದ್ದಲ್ಲದೆ,ತಂತ್ರಜ್ಜ್ನಾನದಲ್ಲೂ ಉತ್ತಮ ಬೆಳವಣಿಗೆಯನ್ನು ಸೃಷ್ಟಿಸಿ,ಪ್ರಪಂಚದಲ್ಲಿ ಪ್ರತ್ಯೊಬ್ಬನೂ ಇಷ್ಟ ಪಡೋ ಒಂದು ಅದ್ಭುತ ಕಂಪನಿಯನ್ನಾಗಿ ಮಾರ್ಪಾಟು ಮಾಡಿತು.ಬಿಲಿಯನ್ ಜನರ ಜೀವನ ಶೈಲಿಯನ್ನೇ ಬದಲಾಯಿಸಿತು.ನಮ್ಮ ಈ ಅಮೋಘ ಸಾಧನೆಗೆ ನಾನು ನಿಜಕ್ಕೂ ಹೆಮ್ಮೆ ಪಡುತ್ತೇನೆ ಹಾಗೂ ನಮ್ಮ ತಂಡದ ಬಗ್ಗೆನೂ ನನಗೆ ಹೆಮ್ಮೆಯಿದೆ.ನಾನು ನನ್ನ ಬಗ್ಗೆ ಹೇಳುವುದಾದಲ್ಲಿ ವೈಯಕ್ತಿಕವಾಗಿ ನಾನು ಕಂಪನಿಯಲ್ಲಿ ಉಳಿಯಬಯಸುತ್ತೇನೆ.ನಾನು ಯಾಹೂ ವನ್ನು ಪ್ರೀತಿಸುತ್ತೇನೆ.ಹಾಗೂ ನಿಮ್ಮೆಲ್ಲರಲ್ಲಿ ಅತಿಯಾದ ನಂಬಿಕೆಯನ್ನಿಟ್ಟಿದ್ದೇನೆ.ಯಾಹೂವಿನ ಮುಂದಿನ ಭವಿಶ್ಯದ ಪುಟಗಳನ್ನು ನೋಡುವುದು ನನಗೆ ತೀರಾ ಮುಖ್ಯವಾದ ವಿಷಯ.
2017 ರ ಮೊದಲ ಕ್ವಾರ್ಟರ್ ಗೆ ಈ ಒಪ್ಪಂದದ ಅವಧಿ ಮುಗಿಯುವ ತನಕ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ನಾವೆಲ್ಲರೂ ಒಂದೇ ತಂಡವಾಗಿ ಇಲ್ಲಿಯ ತನಕ ಕೆಲಸ ಮಾಡಿದ್ದೇವೆ.ಇನ್ನುಳಿದ ವರುಷಗಳಲ್ಲೂ ಮಾಡಬೇಕು.ಮೊದಲ ಅರ್ಧ ವರುಶವನ್ನು ನಾವು ಒಳ್ಳೆಯ ರೀತಿಯಲ್ಲಿ ಯಶಸ್ಸನ್ನು ಸಾಧಿಸುತ್ತಾ ಹೆಮ್ಮೆಯಿಂದ ಕಳೆದಿದ್ದೇವೆ.ಯಾಹೂ ಕೊನೆಯ ಕ್ವಾರ್ಟರ್ ಗಳಲ್ಲಿ ಅದನ್ನೊಂದು ಸ್ವತಂತ್ರ ಕಂಪನಿಗಳ ಸಾಲಲ್ಲಿ ನಿಲ್ಲಿಸುವ ಹೊಣೆ ನಮ್ಮದಾಗಿದೆ.
ಜಗತ್ತನ್ನೇ ಬದಲಾಯಿಸಿದ ಕಂಪನಿ ಯಾಹೂ.ನಾವು ಮುಂದಿನ ಬೆಳವಣಿಗೆಗಾಗಿ Verizon ಹಾಗೂ AOL ಗಳ ಏಕೀಕರಣದೊಂದಿಗೆ ಮುಂದುವರಿಯೋಣ.
ಧನ್ಯವಾದಗಳು,
ಮರಿಸ್ಸಾ

ಯಾಹೂ ಕಳೆದುಕೊಂಡ ಅವಕಾಶಗಳು :

1998 : 1998 ರಲ್ಲಿ ಗೂಗಲ್ ನ್ನು $ 1ಮಿಲಿಯನ್ ಗೆ ಖರೀದಿಸಲು ನಿರಾಕರಿಸಿತ್ತು,
2002 : ಆನಂತರ ತನ್ನ ತಪ್ಪಿನ ಅರಿವಾಗಿ, 2002 ರಲ್ಲಿ $3 ಬಿಲಿಯನ್ ಗೆ ಆಫರ್ ನೀಡಿತು.ಆದ್ರೆ ಅಷ್ಟರಲ್ಲಾಗಲೇ ಗೂಗಲ್ ಸ್ಮಾರ್ಟ್ ಆಗಿತ್ತು, ಬದಲಾಗಿ ಅದು $ 5 ಬಿಲಿಯನ್ ಗೆ ಬೇಡಿಕೆ ಇಟ್ಟಿತು. ಮತ್ತೊಮ್ಮೆ ಯಾಹೂ ನಿರಾಕರಿಸಿತು.
2008 : 2008 ರಲ್ಲಿ ಮತ್ತೆ ಮೈಕ್ರೋಸಾಫ್ಟ್ $40 ಬಿಲಿಯನ್ ಕ್ಕೆ ಯಾಹೂವನ್ನು ಖರೀದಿಸಲು ತಯಾರಾಗಿತ್ತು ಆದ್ರೆ ಯಾಹೂ ತಯಾರಿರಲಿಲ್ಲ.
2016 : ಆದ್ರೆ ಈಗ ನೋಡಿ ಇದರ ದುರಾದೃಷ್ಟವೆಂಬಂತೆ ಇದು ವೆರಿಝೋನ್ ಗೆ $4.8 ಬಿಲಿಯನ್ ಗೆ ಮಾರಲ್ಪಟ್ಟಿತು.
ಈ ಡೀಲ್ ಬಗ್ಗೆ ನೀವೇನಂತೀರಾ?

  • ಸ್ವರ್ಣಲತ ಭಟ್

POPULAR  STORIES :

ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !

ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!

ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

 

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...