ವಿವಿಧ ರೀತಿಯಲ್ಲಿ ಬಂದ್ ಆಚರಿಸಿದ ಪ್ರತಿಭಟನಾಕಾರರು.
ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಇಂದು ರಾಜ್ಯಾದ್ಯಂತ ಬಂದ್ ಘೋಷಿಸಿದ್ದು ಹಲವು ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಬಂದ್‍ಗೆ ವ್ಯಾಪಕ ಬೆಂಬಲ ಸೂಚಿಸಿರುವ ಕನ್ನಡ ಪರ ಸಂಘಟನೆಗಳು, ಇಂದು ಮುಂಜಾನೆಯಿಂದಲೇ ರಸ್ತೆ ತಡೆ ನಡೆಸಿ ಮೆರವಣಿಗೆ ನಡೆಸುತ್ತಿದ್ದಾರೆ.
ಈ ವೇಳೆ ಮಹದಾಯಿ ತೀರ್ಪಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇದರ ಕುರಿತು ಗಂಭೀರ ಚರ್ಚೆ ನಡೆಸುವ ಬದಲಿಗೆ ಸಧನಗಳಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕುಳಿತಿವೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಬೇರೆ ಬೇರೆ ಶೈಲಿಗಳಲ್ಲಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ವ್ಯಕ್ತಿಯೋಬ್ಬ ಪ್ರತಿಭಟನೆ ನಡೆಸಿದರು. ಅದೇ ರೀತಿಯಾಗಿ ಮೈಸೂರಿನ ಕನ್ನಡ ಪರ ಸಂಘಟನೆಗಳು ಕತ್ತೆ ಮೆರವಣಿಗೆ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆಗೆ ಸಾಕ್ಷಿಯಾದರು. ಹಾಗೆಯೇ ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರು ಅರೆಬೆತ್ತಲಾಗಿ ಮೆರವಣಿಗೆ ಮಾಡುವ ಮೂಲಕವಾಗಿ ಬಂದ್‍ಗೆ ಸಾಥ್ ನೀಡಿದ್ದಾರೆ. ಕೆಲವು ಕಡೆ ಜನರು ಉರುಳು ಸೇವೆ,ಮಾಡಿದರೆ ಇನ್ನೂ ಕೆಲವು ಭಾಗಗಳಲ್ಲಿ ರೈಲು ತಡೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕೆಲವರು ಶವ ಅಣಕುನ ಪ್ರದರ್ಶನ ಮಾಡದರೆ ಇನ್ನೂ ಕೆಲವರು ಮೆಜೆಸ್ಟಿಕ್‍ನಲ್ಲಿ ಕ್ರಿಕೇಟ್ ಆಡುವ ಮೂಲಕ ಪ್ರತಿಭಟಿಸುತ್ತಿದ್ದರು. ಇನ್ನು ಯೋಜ, ನಿದ್ದೆ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಅಣಕು ಪಗರದರ್ಶನ ಸಾಮಾನ್ಯವಾಗಿ ಕಂಡು ಬಂದಿತ್ತು. ಒಟ್ಟಾರೆಯಾಗಿ ಮಹದಾಯಿ ತೀರ್ಪು ವಿರೋಧಿಸಿ ಇಂದು ಕೈಗೊಂಡ ಬಂದ್ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎನ್ನಬಹುದು.
POPULAR STORIES :
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!