ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ

Date:

ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ. ಸಿದ್ದರಾಮಯ್ಯ ಭಾವನೆ ಸತೀಶ್ ಜಾರಕಿಹೊಳಿ ಬಾಯಲ್ಲಿ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಮಾತ್ನಾಡಿದ ಅವರು, ಹಿಂದೂ ರಾಷ್ಟ್ರದ ಬಗ್ಗೆ ಮಾತ್ನಾಡಿದ್ದಕ್ಕೆ ಅಂಬೇಡ್ಕರ್ನ ವಿರೋಧಿಸಿದ್ರು. ಇದೇ ವಿಚಾರಕ್ಕೆ ಸಾವರ್ಕರ್ ಅವರನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಸನಾತನ ಧರ್ಮದ ಪರವಾಗಿ ಇರುವವರೆಲ್ಲರನ್ನೂ ದ್ವೇಷ ಮಾಡಿಕೊಂಡು ಬಂದಿದೆ, ಅದರಲ್ಲಿ ಸತೀಶ್ ಹೊಸ ಬೀಜ. ಕಾಂಗ್ರೆಸ್ ಯಾವತ್ತಿಗೂ ಹಿಂದೂ ವಿರೋಧಿ ಎಂದು ಟೀಕಿಸಿದ್ರು. ಈ ರೀತಿ ಹೇಳಿಕೆ ಕೊಡೋದಕ್ಕೆ ಕಾಂಗ್ರೆಸ್ನ ಅಭಿನಂದಿಸುತ್ತೇನೆ. ತಮ್ಮ ಒಳಗಿರುವ ಹಿಂದೂ ವಿರೋಧಿ ಭಾವನೆ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ. ಮುಸಲ್ಮಾನರ ಸರ್ಕಾರ ಆಗಿರುತ್ತದೆಯೇ ಹೊರತು ಎಲ್ಲರನ್ನೂ ಒಟ್ಟಿಗೆ, ಕರೆದುಕೊಂಡು ಹೋಗುವ ಜಾತ್ಯಾತೀತ ಸರ್ಕಾರ ಆಗಿರುವುದಿಲ್ಲ. ಇದಕ್ಕಾಗಿ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ, ಕಾಂಗ್ರೆಸ್ಗೆ, ನಾನು ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದ್ರು.

Share post:

Subscribe

spot_imgspot_img

Popular

More like this
Related

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.!

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.! ಬೆಂಗಳೂರು:...

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ ಬೆಂಗಳೂರು:...

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ ಬಂಧನ

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ...