ಮತದಾರರ ದತ್ತಾಂಶ ಕಳವು ಪ್ರಕರಣ ಸಂಬಂಧ ಪಟ್ಟಂತೆ , ಇಂದು ಬಿಬಿಎಂಪಿ ಕಚೇರಿ ಮುಂಭಾಗ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ . ಕೈ ನಾಯಕ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆನಡೆಯುತ್ತಿದೆ . ಬಿಬಿಎಂಪಿ ನಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಪ್ರತಿಭಟನೆ ನಡೆಸಿದ್ದು , ಘೋಷಣೆ ಕೂಗುತ್ತಿದ್ದಾರೆ . ಬಿಬಿಎಂಪಿ ಅಧಿಕಾರಿ ಕೂಡಲೆ ವಜಾಗೊಳಿಸುವಂತೆ ಕೈ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ . ಚೀಫ್ ಕಮಿಷಿನರ್ ತುಷಾರ್ ಗಿರಿನಾಥ್ ಪ್ರಕರಣದಲ್ಲಿ ಭಾಗಿಯಾಗಿದ್ದು , ಅವರನ್ನ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ .