ಬೆತ್ತದಿಂದ ನಾಯಿಯ ಬಾಲವನ್ನು ನೇರ ಮಾಡಲು ಹೋದರೆ ಅದು ಸಾಧ್ಯವಾಗುತ್ತದೆಯೇ..? ಅದು ಎಂದೂ ಸಾಧ್ಯವಿಲ್ಲ. ನಾಯಿಯ ಬಾಲ ಯಾವತ್ತದ್ದರೂ ಡೊಂಕೆ. ಅದೇ ರೀತಿ ಪಾಕಿಸ್ತಾನದ ಬುದ್ದಿಯೂ ಅಷ್ಟೆ. ಅದನ್ನು ಎಷ್ಟೇ ಬದಲಾಯಿಸಲು ಪ್ರಯತ್ನಿಸಿದರೂ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ದಿಯನ್ನು ಬಿಡೊಲ್ಲ ನೋಡಿ. ಯಾಕೆಂದ್ರೆ ಗುರುವಾರ ಇಸ್ಲಾಮಾಬಾದ್‍ನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ ಭಾರತದ ಗೃಹ ಮಂತ್ರಿ ಸತ್ಕರಿಸಿದ ರೀತಿ ಹಾಗಿತ್ತು ನೋಡಿ.
ಇಸ್ಲಾಮಾಬಾದ್‍ನ ಪ್ರತಿಷ್ಠಿತ ಸೆರೆನಾ ಹೊಟೇಲ್‍ನಲ್ಲಿ ಆಯೋಜಿಸಿದ್ದ ಸಮ್ಮೇಳನಕ್ಕೆ ರಾಜ್‍ನಾಥ್ ಸಿಂಗ್ ಕೂಡ ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ರಾಷ್ಟ್ರದ ಗಣ್ಯರನ್ನು ಬರ ಮಾಡಿಕೊಳ್ಳುತ್ತಿದ್ದ ನಿಸಾರಾಲಿಖಾನ್ ರಾಜ್‍ನಾಥ್ ಸಿಂಗ್ ಅವರನ್ನು ಕಾಟಾಚಾರದಿಂದ ಕೈ ಕುಲುಕಿ ಬರಮಾಡಿಕೊಂಡಿದ್ದಾರೆ. ಅಲ್ಲದೇ ಯಾವುದೇ ಮಾತನ್ನೂ ಆಡದೇ ಸುಮ್ಮನೇ ಕೈ ಕುಲುಕಿಕೊಂಡಿದ್ದಾರೆ ಅಷ್ಟೇ.
ಇದಲ್ಲದೇ ಸಾರ್ಕ್ ಸಭೆಯ ಭಾಷಣದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ರಾಜ್‍ನಾಥ್ ಸಿಂಗ್, ಬುರ್ಹಾನ್ ವಾನಿ ಹತ್ಯೆಯನ್ನು ಕರಾಳ ದಿನ ಎಂದು ಆಚರಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು, ಈ ವಿಷಯ ಪಾಕಿಸ್ತಾನಕ್ಕೆ ಈ ಮೊದಲೇ ತಿಳಿದಿತ್ತೇನೋ.. ಸಮ್ಮೇಳದ ವರಧಿ ಮಾಡಲು ಪಿಟಿವಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಅದರಲ್ಲಿ ರಾಜ್‍ನಾಥ್‍ಸಿಂಗ್ ಹಾಗು ಇತರೆ ಸಹಚರರ ಭಾಷಣವನ್ನು ಪ್ರಚಾರ ಮಾಡದಂತೆ ನಿರ್ಭಂಧ ವಿಧಿಸಿತ್ತು. ಅಲ್ಲದೇ ಸಮ್ಮೇಳದ ವಿಡಿಯೊ ಚಿತ್ರೀಕರಣವನ್ನೂ ಭಾರತದ ಮಾಧ್ಯಮಗಳಿಗೆ ನೀಡಿರಲಿಲ್ಲ.
ಇನ್ನು ಸಾರ್ಕ್ ಸಭೆಯ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಪಾಕ್ ಸಚಿವ ನಿಸಾರ್ ಅಲಿ ಖಾನ್ ಆಯೋಜಿಸಿದ್ದ ಭೋಜನ ಕೂಟದಲ್ಲೂ ಭಾಗಿಯಾಗದೇ ನೇರ ದೆಹಲಿಗೆ ಮರಳಿದ್ದಾರೆ. ಅಲ್ಲದೇ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಗಧಿ ಮಾಡಲಾದ ಪತ್ರಿಕಾಗೋಷ್ಠಿಯನ್ನೂ ಸಹ ರದ್ದು ಮಾಡಿದ್ದಾರೆ. ಪಾಕ್ ಭಾಷಣಕ್ಕೆ ಯಾವುದೇ ನಿರ್ಭಂಧ ಹೇರಿಲ್ಲ ಎಂದು ಮೂಲಗಳು ಹೇಳಿದ್ದರೂ, ಪಾಕ್ ಭಾರತದೊಂದಿಗೆ ನರಿ ಬುದ್ದಿ ತೋರಿಸುತ್ತಿರುವುದು ಎಂದೂ ನಿಲ್ಲೋಲ್ಲ ಅನ್ನೋದು ಇದು ಸೂಕ್ತ ನಿದರ್ಶನ.
POPULAR STORIES :
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?