ಮೈಸೂರು ನಗರದಲ್ಲಿ KREDL ಅಧಿಕಾರಿ DK.ದಿನೇಶ್ ಕುಮಾರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡಿ.ಕೆ.ದಿನೇಶ್ ಕುಮಾರ್ ಬೆಂಗಳೂರಿನ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಯೋಜನಾ ನಿರ್ದೇಶಕರಾಗಿದ್ದು, ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯದ ನಿವಾಸಿ ಆಗಿದ್ರು. ದಿನೇಶ್ ಕುಮಾರ್ ಪತ್ನಿ ಹಾಗೂ ಪುತ್ರ ಅಸ್ವಸ್ಥಗೊಂಡಿದ್ದು, ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮೊನ್ನೆ ಮಲಗಿ ನಿನ್ನೆ ಏಳುವಷ್ಟರಲ್ಲಿ ದಿನೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ರು. ಅದನ್ನು ನೋಡಿ ನಾವು ಮೂರ್ಛೆ ಹೋದೆವು ಎಂದು ದಿನೇಶ್ ಕುಮಾರ್ ಪತ್ನಿ ಹೇಳಿಕೆ ನೀಡಿದ್ದಾರೆ. ಆದ್ರೆ, ದಿನೇಶ್ ಮೃತಪಟ್ಟು ಒಂದೂವರೆ ದಿನ ಆಗಿದೆ ಎಂದು ವೈದ್ಯರು ತಿಳಿಸಿದ್ದು, ಪತ್ನಿ, ಪುತ್ರ ಹಾಗೂ ಕೆಲಸದವರನ್ನ ವಿಚಾರಣೆ ಮಾಡುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಗೆ ದಿನೇಶ್ ಕುಮಾರ್ ಕುಟುಂಬಸ್ಥರು ದೂರು ನೀಡಿದ್ದಾರೆ.
KREDL ಅಧಿಕಾರಿ ನಿಗೂಢ ಸಾವು …!
Date: