ಸತತ ಒಂಬತ್ತು ಗಂಟೆಗಳ ಕಾಲ ಸಮುದ್ರದ ಅಬ್ಬರದ ನಡುವೆಯೂ ಜೀವ ಕಾಪಾಡಿಕೊಳ್ಳಲು ಸಾವಿನೊಂದಿಗೆ ಸೆಣಸಾಡಿ ಗೆದ್ದು ಬಂದರು ನೋಡಿ ಈ ಏಳು ಜನ ಮೀನುಗಾರರು. ದೊಡ್ಡ ದೊಡ್ಡ ಅಲೆಯನ್ನೂ ಲೆಕ್ಕಿಸದೇ ರಾತ್ರಿಯೆಲ್ಲಾ ಈಜಿ ಕೊನೆಗೆ ಇನ್ನೋಂದು ಬೋಟ್‍ನ ಸಹಾಯದಿಂದ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಾವಿನ ಕುರ್ವೆ ಬಂದರಿನಲ್ಲಿ ಮೀನುಗಾರರು ತೆರಳಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು ಅದರಲ್ಲಿದ್ದ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು ಒಬ್ಬ ನಾಪತ್ತೆಯಾಗಿದ್ದಾನೆ.
ಬುದವಾರ ಮಧ್ಯಹ್ನ 2 ಗಂಟೆಯ ಸುಮಾರಿಗೆ ಮೀನು ಹಿಡಿಯಲೆಂದು ಸಮುದ್ರಕ್ಕೆ ಇಳಿದ ಈ ಎಂಟು ಮಂದಿ ಮಳೆ ಮತ್ತು ಹವಾಮಾನ ವೈಪರಿತ್ಯದಿಂದ ಅರಬ್ಬಿ ಸಮುದ್ರದಲ್ಲಿ ಸಂಜೆ 4ರ ಸುಮಾರಿಗೆ ದೋನಿ ಮಗುಚಿ ಬಿತ್ತು. ಈ ವೇಳೆ ಎಂಟೂ ಮಂದಿ ಸಮುದ್ರಕ್ಕೆ ಹಾರಿದ್ದು ಏಳು ಮಂದಿ ತಮ್ಮ ಜೀವ ಕಾಪಾಡಿಕೊಳ್ಳು ಹೋರಾಟ ಆರಂಭಿಸಿದ್ದರು. ರಾತ್ರಿ 1:30ರ ವರೆಗೂ ಸಮುದ್ರದಲ್ಲೇ ಈಜುತ್ತಾ ಸಹಾಯಕ್ಕಾಗಿ ಕೂಗ ತೊಡಗಿದ್ದಾರೆ. ಇದೇ ವೇಳೆ ಅವರನ್ನು ಕಾಪಾಡಲು ಮಸ್ತಾ ದೀಪ ಎಂಬ ಹಡಗು ಸ್ಥಳಕ್ಕೆ ದಾವಿಸಿ ಏಳು ಮಂದಿಯನ್ನು ತಮ್ಮ ದೋಣಿಯಲ್ಲಿ ಹತ್ತಿಸಿಕೊಂಡು ಜೀವ ಕಾಪಾಡಿದ್ದಾರೆ. ನಂತರ ಅವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಂಡೂ ನಾಗಪ್ಪ ಖಾರ್ವಿ (42) ಕೃಷ್ಣಾ ಚಂದ್ರಕಾಂತ ಖಾರ್ವಿ(36) ನಾಗೇಶ ಬಾಬು ಖಾರ್ವಿ(33) ರಾಮದಾಸ ಮಾಸ್ತಿ ಖಾರ್ವಿ(35) ಮಾದೇವ ಕೃಷ್ಣ ಖಾರ್ವಿ(25) ಸುಬ್ರಾಯ ಕೃಷ್ಣ ಖಾರ್ವಿ(32) ಅಜಿತ್ ಗೋವಿಂದ ಖಾರ್ವಿ(26) ಎಂಬುವವರೇ ಜವರಾಯನನ್ನು ಗೆದ್ದು ಬಂದವರು.
ಇವರೆಲ್ಲರೂ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆದು ಈಗ ಮನೆಗೆ ವಾಪಾಸ್ಸಾಗಿದ್ದಾರೆ. ಆದರೆ ಮಂಜುನಾಥ್ ಬಾಬು ಖಾರ್ವಿ(35) ಎಂಬುವವರು ದೋಣಿಯಿಂದ ಬಿದ್ದ ತಕ್ಷಣವೇ ಅಸ್ವಸ್ಥರಾಗಿದ್ದಾರೆ. ಆದರೂ ಈಜುವ ಸಾಹಸ ಮಾಡಿದ್ದಾರೆ. ಏಳು ಮಂದಿ ಅವರನ್ನು ಸಾಕಷ್ಟು ದೂರದವರೆಗೆ ಎತ್ತುಕೊಂಡು ಬಂದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅನಿವಾರ್ಯತೆಯಾಗಿ ಅವರನ್ನು ಸಮುದ್ರದಲ್ಲೇ ಕೈಬಿಟ್ಟಿದ್ದಾರೆ. ನಾಪತ್ತೆಯಾಗಿರುವ ಅವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
POPULAR STORIES :
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?