ಶ್ರೀರಂಗಪಟ್ಟಣದಲ್ಲಿ ಕೋಮು ಸಂಘರ್ಷ ತಾರಕಕ್ಕೇರಿದೆ. ಡಿಸೆಂಬರ್ 4ರಂದು ನಡೆದ ಸಂಕೀರ್ತನಾ ಯಾತ್ರೆ ವೇಳೆ ಹಸಿರು ಬಾವುಟ ಕಿತ್ತು ಕೇಸರಿ ಬಾವುಟ ಹಾಕಿದ್ದ ಪ್ರಕರಣ ಸಂಬಂಧ ಪಾಂಡವಪುರ ಗ್ರಾಮದ ಯುವಕನನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ರು.
ಮಧ್ಯರಾತ್ರಿ ಯುವಕನನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ರು. ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಯುವಕನ ಬಂಧನದಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದ್ರು. ಬಳಿಕ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿಗೆ ತೆರಳಿ ಪ್ರತಿಭಟನೆ ನಡೆಸಿ ಮಸೀದಿಗೆ ನುಗ್ಗಲು ಯತ್ನಿಸಿದ್ರು.
ಈ ವೇಳೆ ಹಿಂದೂ ಕಾರ್ಯಕರ್ತರನ್ನ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದು, ಸ್ಥಳಕ್ಕೆ SP ಯತೀಶ್ ಭೇಟಿ ನೀಡಿ ಕಾರ್ಯಕರ್ತರ ಮನವೊಲಿಸಿದ್ದಾರೆ. SP ಮನವೊಲಿಕೆ ಬಳಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.