ಉತ್ತರ ಭಾರತದಲ್ಲಿ ಮಹಾಮಳೆಯ ನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹಲವಾರು ಪ್ರದೇಶಗಳು ಈಗಾಗಗೇ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಅನುಭವಿಸಿದೆ. ಈ ಅವಘಡದ ಜೊತೆಗೆ ಮತ್ತೊಂದು ದೊಡ್ಡ ಅವಘಡ ಸಂಭವಿಸಿದ್ದು, ಸ್ಥಳೀಯ ಜನರ ಹರ ಸಾಹಸದಿಂದ ಕೊಚ್ಚಿ ಹೋಗುತ್ತಿದ್ದ ಶಾಲಾ ಬಸ್ ನಿಂದ ಎಲ್ಲಾ 50 ಮಕ್ಕಳನ್ನು ರಕ್ಷಿಸಿದ ಘಟನೆ ರಾಜಸ್ಥಾನದ ಬಿಲ್ವಾದಲ್ಲಿ ನಡೆದಿದೆ. ಇಲ್ಲಿನ ಆಚಾರ್ಯ ವಿದ್ಯಾ ಸಾಗರ್ ಶಾಲೆಗೆ ಸೇರಿದ್ದ ಶಾಲಾ ವಾಹನದಲ್ಲಿ 50 ಮಕ್ಕಳನ್ನು ಕರೆದುಕೊಂಡು ಹೋಗುತ್ತಿತ್ತು. ದಾರಿಯ ಮಧ್ಯ ಒಂದು ಕಿರಿದಾದ ಸೇತುವೆ ದಾಟಬೇಕಿತ್ತು. ಆದರೆ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಆ ಸೇತುವೆ ಸಂಪೂರ್ಣ ಮುಳುಗಿ ಹೋಗಿತ್ತು. ಅದರ ಮಧ್ಯಯೇ ಬಸ್ ಸಂಚರಿಸುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಬಸ್ ನದಿಗೆ ಬಿದ್ದಿದೆ. ನದಿಯಲ್ಲಿ ಬಸ್ ಮುಳುಗುತ್ತಿರುವುದನ್ನು ಕಂಡ ಸ್ಥಳಿಯ ಜನತೆ ಕೂಡಲೇ ಅದರಲ್ಲಿದ್ದ 50 ಮಕ್ಕಳನ್ನು ರಕ್ಷಿಸಿದ್ದಾರೆ. ಬಸ್ ಮುಳುಗುತ್ತಿರುವ ಹಾಗೂ ಅದರಲ್ಲಿದ್ದ ಮಕ್ಕಳನ್ನು ರಕ್ಷಿಸಲು ಸಾರ್ವಜನಿಕರು ಮುಂದಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.youtube.com/watch?v=etY9su8Us4o
POPULAR STORIES :
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!