ಬ್ರೆಜಿಲ್‍ನಲ್ಲೀಗ ಎಲ್ಲೆಲ್ಲೂ ರಿಯೋ ಒಲಿಂಪಿಕ್ ಹಬ್ಬ. ಈ ಹಬ್ಬಕ್ಕೆ ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿ ಬಂದು ಬೀಡು ಬಿಟ್ಟದ್ದಾರೆ.. ಸುಮಾರು 17 ದಿನಗಳ ಕಾಲ ನಡಿಯೋ ರಿಯೋ ಒಲಂಪಿಕ್ ಹಬ್ಬಕ್ಕೆ ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಅಥ್ಲೀಟ್‍ಗಳು ಭಾಗವಹಿಸಿದ್ದಾರೆ… ಅದನ್ನು ಕಾಣಲು ಬಂದ ಸಾವಿರಾರು ಪ್ರವಾಸಿಗರಿಗಂತೂ 20 ದಿನಗಳ ಕಾಲ ರಸದೌತಣವೇ ಸಿಗಲಿದೆ… ಅದೇ ರೀತಿಯಾಗಿ ಅಲ್ಲಿನ ದರೋಡಕೋರರು ಹಾಗೂ ಕಳ್ಳರಿಗೂ ಕೂಡ…!
ಹೌದು… ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲೀಗ ಪ್ರವಾಸಿಗರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಅಲ್ಲಿ ಕಳ್ಳರ ಕಾಟವೂ ಕೂಡ ಹಚ್ಚುತ್ತಲೇ ಇದೆ.. ಒಲಿಂಪಿಕ್ ಸ್ಪರ್ಧೆ ಶರುವಾಗಿ ಇನ್ನು ಐದು ದಿನವೂ ಕಳೆದಿಲ್ಲ, ಅದಾಗಲೇ ಪ್ರವಾಸಿಗರಿಗೆ ಪುಂಡ ಪೋಕರಿಗಳ ಕಾಟ ಹೆಚ್ಚಾಗಿದೆ. ಹೇಗಪ್ಪಾ ಇವರುಗಳಿಂದ ಬಚಾವಾಗೊದು ಎಂಬ ಚಿಂತೆಯಲ್ಲಿ ಪ್ರವಾಸಿಗರು ತೊಳಲಾಡುತ್ತಿದ್ದಾರೆ..
ನಾಚಿಗೆಗೆಟ್ಟ ಜನರು ತಮ್ಮ ದೇಶದ ಅಥಿತಿಗಳೂ ಎಂದು ಭಾವಿಸದೇ ಅವರ ಮೇಲೆ ಹೆರಗುತ್ತಿದ್ದಾರೆ.. ಕೈಯಲ್ಲಿ ಸಿಕ್ಕಿದ್ದನೆಲ್ಲಾ ದೋಚಿಕೊಂಡು ಹೋಗುತ್ತಿದ್ದಾರೆ.. ಇದರಿಂದ ಭಯಭೀತರಾಗಿರುವ ಪ್ರವಾಸಿಗರು, ತನ್ನ ನಿವಾಸದಿಂದ ಹೊರ ಬರಲೂ ಭಯ ಪಡುತ್ತಿದ್ದಾರೆ..
ಗುಂಪಿನಲ್ಲಿ ಅಥವಾ ಒಂಟಿಯಾಗಿ ಬರುವ ಕಳ್ಳರು ಮುಲಾಜಿಲ್ಲದೇ ಪ್ರವಾಸಿಗರ ಮೊಬೈಲ್ ಪರ್ಸ್, ಹೆಡ್‍ಫೋನ್, ಬ್ಯಾಗ್, ಒಡವೆಗಳನ್ನು ದೋಚುತ್ತಿದ್ದಾರೆ. ಅದು ಹಾಡು ಹಗಲೇ ಈ ಕೃತ್ಯ ಮಾಡುತ್ತಿದ್ದು ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗೊಲ್ಲಾ..
ಅಮಾಯಕ ಜನರ ಬಳಿ ಇದ್ದ ಯಾವುದೇ ವಸ್ತುವಾದರೂ ಬಿಡದೇ ಅಮಾನವೀಯವಾಗಿ ದರೋಡೆ ಮಾಡುತ್ತಿರುವ ಇಲ್ಲಿನ ಜನರು ಅದನ್ನು ವಾಪಾಸ್ಸು ಕೇಳಿದರೆ ಗಂಡು ಹೆಣ್ಣು ಎಂದು ನೋಡದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ… ರೋಡಿನಲ್ಲೆ ಅವರನ್ನು ಹಿಡಿದು ಥಳಿಸುವ ಮನಕಲುಕು ಚಿತ್ರಗಳು ಅಲ್ಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ..
https://www.youtube.com/watch?v=SeAsF35HeNI
ಇದೋದು ನಾಚಿಕೆಗೇಡಿನ ಕೆಲಸವಲ್ಲದೇ ಬೇರೇನು…? ವಿಶ್ವದಲ್ಲೆ ಅತೀ ಅಪಾಯಕಾರಿ ಸ್ಥಳವೆನಿಸಿರುವ ರಿಯೋ ನಗರದಲ್ಲಿ ಈ ಬಾರಿ ಒಲಿಂಪಿಕ್ ಹಬ್ಬ. ಅದಕ್ಕಾಗಿ ಅಲ್ಲಿನ ಸರ್ಕಾರ ಸುಮಾರು 85 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂಧಿಗಳನ್ನು ನಿಯೋಜಿಸಿದೆ.. ಆದ್ರೆ ಅವ್ರೆಲ್ಲಾ ಏನ್ಮಾಡ್ತಾ ಇದಾರೆ.. ಹಾಡು ಹಗಲೇ ಈ ರೀತಿ ಪ್ರವಾಸಿಗರ ಮೇಲೆ ಹಲ್ಲೆ ನಡೆಯುತ್ತಿದ್ರೆ.. ಹಿಂಸೆ ನಡೆಯುತ್ತಿದ್ರೆ.. ಅದನ್ನು ಗಂಭೀರವಾಗಿ ಪರಿಗಣಿಸದೇ ಉದಾಸೀನ ತೋರುತ್ತಿರುವ ಅಲ್ಲಿನ ಸರ್ಕಾರಕ್ಕೆ ಏನನ್ನಬೇಕೋ ಗೊತ್ತಾಗ್ತಾ ಇಲ್ಲ.
POPULAR STORIES :
ಬೆಂಗ್ಳೂರಲ್ಲಿ ಲೇಡಿ ಡಾನ್ ಯಶಸ್ವಿನಿ ಹವಾ: ವಂಚಕಿಯೊಬ್ಬಳಿಗೆ ಥಳಿತ.
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!