ದೇಶದಲ್ಲಿ ಅತ್ಯಾಚಾರದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಮಾಯಕ ಯುವತಿಯರ ಮೇಲೆ ಕಾಮಾಂಧ ಪಾಪಿಗಳು ಅವರ ಭವಿಷ್ಯವನ್ನೆ ಬಲಿ ಪಡೆದು ಎಲ್ಲೂ ಮುಖ ಎತ್ತದ ಹಾಗೆ ಮಾಡಿಬಿಡುತ್ತಾರೆ. ಅಲ್ಲದೇ ಸಮಾಜವೂ ಆ ಹೆಣ್ಣನ್ನು ನಂತರ ಕಾಣುವ ರೀತಿ ಬೇರೆಯೇ…! ಆದ್ರೆ ಇಲ್ಲೋಂದು ಜಿಲ್ಲೆಯಲ್ಲಿ ಅತ್ಯಾಚಾರ ಎಸಗಿದ ಯುವಕರಿಗೆ ದೊಡ್ಡ ಶಿಕ್ಷೆ ಕೊಡ್ತಾರೆ ಪಂಚಾಯ್ತಿ ಮುಖಂಡರು…! ಆ ಶಿಕ್ಷೆ ಕೇಳುದ್ರೆ ನೀವು ಕೂಡ ಧಂಗಾಗೋದು ಗ್ಯಾರೆಂಟಿ… ಅದ್ಯಾವ ಶಿಕ್ಷೆ ಅಂತೀರಾ.. ಈ ಸ್ಟೋರಿ ಓದಿ.
ಬಿಹಾರದ ಗಯಾ ಜಿಲ್ಲೆಯ ಬಸೆಟಾ ಗ್ರಾಮದಲ್ಲಿನ ಆಕಾಶ್ ಎಂಬಾತ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡ್ತಾ ಇದ್ದ ಅಪ್ರಾಪ್ತ ದಲಿತ ಯುವತಿಯ ಮೇಲೆ ಸತತ ಆರು ತಿಂಗಳಿಂದ ಅತ್ಯಾಚಾರ ಎಸಗುತ್ತಿದ್ದ. ಅದಕ್ಕೆ ಅಲ್ಲಿನ ಪಂಚಾಯ್ತಿ ಕೊಟ್ಟ ಅತೀ ದೊಡ್ಡ ಶಿಕ್ಷೆ ಏನಂತ ಗೊತ್ತಾ…? 51 ಬಸ್ಕಿ ಹಾಗೂ ಬರೋಬ್ಬರಿ 1000ರೂ. ದಂಡ…! ನೋಡಿ ಸ್ವಾಮಿ ಒಂದು ಹೆಣ್ಣಿನ ಮಾನದ ಬೆಲೆ ಎಷ್ಟು ಅಂತಾ… ಕೇಳುತ್ತಲೇ ಕರುಳೇ ಕಿತ್ತು ಬರೋ ಹಾಗೆ ಬಾವುಸ್ತಾ ಇದೆ.
ಪ್ರತಿ ದಿನ ಆ ಹುಡುಗಿ ಶಾಲೆಯಿಂದ ಮನೆಗೆ ವಾಪಾಸ್ಸಾಗುತ್ತಿದ್ದಾಗ ಆಕೆಯನ್ನು ಕರೆದುಕೊಂಡು ಬಲವಂತವಾಗಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಪ್ರತೀ ದಿನವೂ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಅದು ಕೊನೆಗೆ ಹುಡುಗಿಯ ಮನೆಗೆ ಗೊತ್ತಾಗಿದ್ದು 6 ತಿಂಗಳ ಬಳಿಕ ಅದೂ ಆಕೆ ಗರ್ಭಿಣಿಯಾದಾಗ. ಇದರಿಂದ ಅಘಾತಕ್ಕೊಳಗಾದ ಬಾಲಕಿಯ ಪೋಷಕರು ಕೂಡಲೇ ಹುಡುಗನ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ತನ್ನ ಮಗ ಮಾಡಿದ ತಪ್ಪಿಗೆ ನಾವು ಕ್ಷಮೆ ಕೇಳುತ್ತೇವೆ ಆಕೆಯನ್ನು ತನ್ನ ಮಗನಿಗೆ ಕೊಟ್ಟು ಮದುವೆ ಮಾಡಿಸುತ್ತೇವೆ ಎಂದಾಗ ಬಾಲಕಿಯ ಪೋಷಕರು ಅದಕ್ಕೆ ಸಮ್ಮತಿಸದೇ ನೇರ ಪಂಚಾಯ್ತಿ ಕಟ್ಟೆಗೆ ವಿಷಯ ಮುಟ್ಟಿಸಿದ್ದಾರೆ. ಎರಡೂ ಕಡೆಯ ವಾದವನ್ನು ಗಮನಿಸಿದ ಪಂಚಾಯ್ತಿ ಸದಸ್ಯರು, ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿರುವುದನ್ನು ಧೃಡಪಡಿಸಿಕೊಂಡು ಬಾಲಕನಿಗೆ 51 ಬಸ್ಕಿ ಹೊಡಿ ಹಾಗೂ 1000 ದಂಡವನ್ನು ಕಟ್ಟು ಎಂದು ತೀರ್ಮಾನ ತೆಗೆದುಕೊಂಡರು.
ಪಂಚಾಯ್ತಿ ನೀಡಿದ್ದ ನ್ಯಾಯದಿಂದ ಇನ್ನೂ ಅಘಾತಕ್ಕೊಳಗಾದ ಪೋಷಕರು ನೇರ ಪೊಲೀಸ್ ಮೆಟ್ಟಿಲೇರಿದ್ದಾರೆ. ತನ್ನ ಮಗಳ ಮೇಲಾದ ಅನ್ಯಾಯದ ವಿಷಯವನ್ನೆಲ್ಲವನ್ನು ಪೊಲೀಸರ ಬಳಿ ತಿಳಿಸಿದ್ದಾರೆ. ಅವರಿಬ್ಬರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ ಅತ್ಯಾಚಾರವೆಗಿರುವುದು ಧೃಡವಾಗಿದೆ. ಇದೀಗ ಆರೋಪಿಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಲಾಗಿದೆ.
POPULAR STORIES :
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!