ಅಮ್ನಿಯೋಟಿಕ್ ಚೀಲದೊಳಗೆ ಮಗುವಿನ ಜನನ…!

Date:

ಇದೊಂದು ಅದ್ಭುತ ಹಾಗೂ ನಂಬಲಿಕ್ಕೂ ಅಸಾಧ್ಯವಾದ ಒಂದು ಘಟನೆ.. ಅಷ್ಟೇ ಅಲ್ಲ ಒಂದು ಸುಂದರ ಅವಿಸ್ಮರಣಿಯ ಅಂದ್ರೂ ತಪ್ಪಾಗೊಲ್ಲ. ಮಗುವೊಂದು ತನಗೆ ಧಕ್ಕೆಯಾಗದ ರಕ್ಷಾ ಕವಚ ಅಂದರೆ ಅಮ್ನಿಯೋಟಿಕ್ ಚೀಲದ ಸಮೇತವಾಗಿ ತಾಯಿಯ ಗರ್ಭದಿಂದ ಹೊರ ಬಂದಿದೆ ನೋಡಿ… ವೈದ್ಯರ ಪ್ರಕಾರ ಅದನ್ನು ಭ್ರೂಣಾವರಣ ಎಂದು ಕರೆಯಲಾಗುತ್ತಿದ್ದು, ಅಂದಾಜು ಪಡಿಸಿ ಹೇಳುವುದಾದರೆ ಸುಮಾರು 80 ಸಾವಿರ ಜನನದಲ್ಲಿ ಒಂದು ಜನನ ಹೀಗೆ ನಡೆಯಬಹುದು ಎನ್ನುತ್ತಾರೆ. ಇದೊಂದು ಅತೀ ವಿರಳ ಹಾಗೂ ಅಸಾಮಾನ್ಯವೇ ಹೌದು.
ಇಂತಹ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾದದ್ದು ಸ್ಪೇನ್‍ನ ಆಸ್ಪತ್ರೆಯೋದರಲ್ಲಿ. ಕಳೆದ ಎರಡು ವಾರಗಳ ಹಿಂದೆ ನಡೆದ ಈ ಘಟನೆಯು ಮಗುವಿನ ದೇಹವು ಸಂಪೂರ್ಣವಾಗಿ ಪೊರೆಯಿಂದ ಆವೃತವಾಗಿರುವ ಮಗುವಿನ ಜನನದ ದೃಶ್ಯ ಇದೀಗ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ. ಇದಾದ ಕೆಲವೇ ನಿಮಿಷದಲ್ಲಿ ಇದರ ಅವಳಿ ಮಗು ಸಾಮಾನ್ಯವಾಗಿಯೇ ಜನಿಸಿದೆ.
ಆಸ್ಪತ್ರೆಯಲ್ಲಿ ಗುರಿತಿಸಲ್ಪಟ್ಟ ಈ ಬಗೆಯ ಮಗುವೊಂದು ತನ್ನ ದೇಹವು ಸಂಪೂರ್ಣವಾಗಿ ಪೊರೆಯ ಒಳಗೆ ಆವರಿಕೊಂಡಿತ್ತು. ಬಿಗಿಯಾಗಿ ವಿಸ್ತರಿಸ್ಪಟ್ಟಿದ್ದ ಆ ಚೀಲದೊಳಗೆ ಕೆಲವೊಮ್ಮೆ ಮಗುವಿನ ಚಲನಾವಲನಗಳನ್ನೆಲ್ಲಾ ಗೋಚರಿಸುತ್ತಿತ್ತು. ಅದರಲ್ಲೂ ಸ್ಪಷ್ಟವಾಗಿ ಮಗುವಿನ ನೀಲಿ ಹೊಕ್ಕಳು ಬಳ್ಳಿಯ ಸಮೇತವಾಗಿ ಗೋಚರಿಸುತ್ತಿದ್ದ, ಮಗು ತನ್ನ ಉಸಿರಾಟಕ್ಕಾಗಿ ಆಮ್ಲಜನಕವನ್ನು ಪಡೆಯುತ್ತಿದ್ದದ್ದು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.
ಸ್ವಲ್ಪ ಸಮಯದ ನಂತರ ಮಗುವಿನ ಚಲನಾಲನ ಹೆಚ್ಚಾದಂತೆ, ಪೊರೆಯಿಂದ ಹೊರ ತರುವಲ್ಲಿ ವೈದ್ಯರು ಯಶಸ್ವಿಯಾದರು. ಕೊನೆಗೆ ಸಾಮಾನ್ಯ ಸ್ಥಿತಿಗೆ ತಲುಪಿದ ಕೂಡಲೇ ತನ್ನ ಸಹೋದರನ ಜೊತೆ ಒಂದಾಗಿ ನಿದ್ರೆಗೆ ಜಾರಿತು. ಸಾಮಾನ್ಯವಾಗಿ ಗರ್ಭದಾರಣೆಯ ಸಂದರ್ಭದಲ್ಲಿ ಅಥವಾ ಸಿಸೇರಿಯನ್ ವೇಳೆಯಲ್ಲಿ ಎಲ್ಲಾ ಮಗುವೂ ಕೂಡ ಅಮ್ನಿಯೋಟಿಕ್ ಪದರದಿಂದ ಬೇರ್ಪಟ್ಟು ಹೊರ ಬರುತ್ತದೆ. ಆದರೆ ಈ ಮಗುವಿನ ಜನನ ಮಾತ್ರ ಅದಕ್ಕೆ ವಿರುದ್ದವಾಗಿತ್ತು ಅಷ್ಟೇ..
ಕಳೆದ ಹಿಂದಿನ ವರ್ಷದಲ್ಲಿ ಅದೂ ಕೂಡ ಸ್ಪೇನ್‍ನಲ್ಲಿ ಇದೇ ರೀತಿಯ ನಿದರ್ಶನವೊಂದು ಬೆಳಕಿಗೆ ಬಂದಿತ್ತು. ಆ ವಿಡಿಯೋದ ಸಹಾಯದಿಂದ ವೈದ್ಯರು ಶಸ್ತ್ರ ಚಿಕಿತ್ಸೆಯ ಕತ್ರಿಗಳಿಂದ ಚೀಲಕ್ಕೆ ಒಂದು ಸಣ್ಣ ರಂಧ್ರವನ್ನು ಮಾಡಿ ಮಗು ಚೀಲದಿಂದ ಹೊರ ಬರುವಂತೆ ಮಾಡಿದ್ದಾರೆ. ಇದೀಗ ಆ ಅವಳಿಗಳು ಆರೋಗ್ಯದಿಂದಿದ್ದಾವೆ.

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ

ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...