ಭಾರತದಲ್ಲಿ ಬಹುದೊಡ್ಡ ಸಮಸ್ಯೆ ಅಂದ್ರೆ ಅದು ನೀರಿನ ಸಮಸ್ಯೆ. ಅದೆಷ್ಟೊ ಬಯಲು ಸೀಮೆ ಪ್ರದೇಶಗಳಲ್ಲಿ ಕುಡಿಯಲೂ ಸಹ ನೀರಿಲ್ಲದೇ ಮೈಲಿಗಟ್ಟಲೆ ಸಂಚರಿಸಿ ಅಲ್ಲಿಂದ ನೀರು ತರುವುದು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೋಬ್ಬ ಯುವಕ ಗಾಳಿಯ ಮೂಲಕ ನೀರು ಪಡೆಯುವುದನ್ನು ಕಂಡು ಹಿಡಿದಿದ್ದಾನೆ. ಅದೇನಾದ್ರೂ ಹೆಚ್ಚು ಪ್ರಚುರಗೊಂಡರೆ ನೀರಿಗಾಗಿ ಅಲೆದಾಡೊ ಪ್ರಸಂಗ ಇರೋದೆ ಇಲ್ಲ ನೋಡಿ.
ಹೌದು. ಹೈದ್ರಾಬಾದ್ ಮೂಲದ 22ರ ಹರೆಯದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್‍ನ ಇಂಜಿನಿಯರಿಂಗ್ ವಿದ್ಯಾರ್ಥಿ ಜಾವೆದ್ ಪಟೇಲ್ ನೀರಿನ ಯಂತ್ರದ ಸಹಾಯದಿಂದ ಗಾಳಿಯಲ್ಲಿ ನೀರು ಉತ್ಪತ್ತಿ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಇದು ಏಷ್ಯಾದಲ್ಲೇ ಮೊಟ್ಟ ಮೊದಲ 3ಡಿ ಪ್ರಿಂಟೆಡ್ ನೀರು ಉಪಕರಣವಾಗಿದೆ. ಈ ಉಪಕರಣದ ಸಹಾಯದಿಂದ ಗಾಳಿಯಿಂದ ಶುದ್ದ ಕುಡಿಯುವ ನೀರು ಉತ್ಪತ್ತಿ ಮಾಡಬಹುದಾಗಿದೆ. ತನ್ನ ಹತ್ತನೇ ವಯಸ್ಸಿನಲ್ಲೇ ಎಲೆಕ್ಟ್ರಾನಿಕ್ ಕೆಲಸಗಳನ್ನು ಮಾಡುತ್ತಿದ್ದ ಜಾವೆದ್, ಶಾಲಾ ಕಾಲೇಜು ಅವಧಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಹಲವಾರು ಎಲೆಕ್ಟ್ರಾನಿಕ್ ಹಾಗೂ ರೋಬೋಟಿಕ್ ಯಂತ್ರಗಳನ್ನು ಕಂಡುಹಿಡಿದು ಪ್ರದರ್ಶನ ಮಾಡಿದ್ದಾನೆ. ಅಲ್ಲದೇ ಅದಕ್ಕೆ ಹಲವಾರು ಪ್ರಶಸ್ತಿಗಳನ್ನೂ ಸಹ ತನ್ನ ಪಾಲಾಗಿಸಿಕೊಂಡಿದ್ದಾನೆ. ಜಾವೆದ್ ಎಲೆಕ್ಟ್ರಾನಿಕ್ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಳನ್ನು ಮಾಡುತ್ತಿದ್ದು ಅದಕ್ಕಾಗಿ ತಾನೇ ಸ್ವತಃ ಪ್ರಯೋಗಾಲಯ ಹಾಗು ವೆಬ್‍ಸೈಟ್‍ಗಳನ್ನು ತೆರೆದಿದ್ದಾನೆ.
POPULAR STORIES :
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ