54 ವರುಷದ ಕ್ಯಾನ್ಸರ್ ಪೇಷಂಟ್ ಆಗಿದ್ದ ವ್ಯಕ್ತಿ ರಿಯೋ ಒಲಿಂಪಿಕ್ ಗೋಲ್ಡ್ ಮೆಡಲ್ ವಿನ್ನರ್

Date:

ಅರ್ಜೆಂಟೈನಾದ ಸಾಂಟಿಗೋ ಲೆಂಜ್ ಎಂಬ 54 ವರುಷದ ವ್ಯಕ್ತಿಯು ಅಂದು ತನ್ನ ಕಣ್ಣಿನಿಂದ ಧಾರಾಕಾರವಾಗಿ ಸುರಿಯುತ್ತಿರೋ ಕಣ್ಣೀರನ್ನು ತಡೆಯದಾದ, ಹೌದು! ಆದರೆ ಅದು ಬೇಸರದ ಕಣ್ಣೀರಲ್ಲ, ಅತನ ಪಾಲಿನ ಆನಂದ ಭಾಷ್ಪ! ಇದಕ್ಕೆ ಕಾರಣ…. ಈತ ರಿಯೋ ಒಲಿಂಪಿಕ್ 2016ರ ಇದೇ ಮಂಗಳವಾರದಂದು ನಡೆದ ನಾಕ್ರಾ 17 ಮಿ‍ಕ್ಸ್ಡ್ ಕ್ಯಾಟಾಮಾರನ್ ಕ್ಲಾಸ್ ನ ಗೋಲ್ಡ್ ಮೆಡಲ್ ನ್ನು ತನ್ನದಾಗಿಸಿಕೊಂಡ ಸಂಭ್ರಮದ ಕ್ಷಣಗಳವು.ನಾಕ್ರಾ 17 ಎಂಬುದು ಒಲಿಂಪಿಕ್ಸ್ ನಲ್ಲಿ ಬಳಸಲಾಗುವ ಅತ್ಯಧಿಕ ಸಾಮರ್ಥ್ಯವಿರೋ ಒಂದು ಸ್ಪೀಡ್ ಬೋಟ್ ವ್ಯವಸ್ಥೆಯಾಗಿದೆ.ಈ ಸಾಂಟಿಗೋ ಲೇಂಜ್ ಈ ರೇಸ್ ನಲ್ಲಿ ತನ್ನ ಜೊತೆಗಾರ್ತಿಯಾದ ಸೆಸಿಲಿಯ ಕರಾಂಜ ಸರೋಲಿಯ ಜೊತೆಗೂಡಿ ಭಾಗವಹಿಸಿ ಚಿನ್ನದ ಪದಕಕ್ಕೆ ಹಕ್ಕುದಾರನಾಗಿರುವುದರ ಜೊತೆಗೆ ಈ ಒಲಿಂಪಿಕ್ನಲ್ಲಿ ಇದುವರೆಗೆ ನಡೆದ ವಯಸ್ಕರ ಕಾಂಪಿಟೀಷನ್ ನಲ್ಲಿ ಗೋಲ್ಡ್ ಮೆಡಲ್ ದಕ್ಕಿಸಿಕೊಂಡ ಮೊದಲಿಗ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ.
ಲೇಂಜ್ ಒಬ್ಬ ಶ್ವಾಸ ಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯಾಗಿದ್ದು,ಹಿಂದಿನ ವರುಷವೇ ಈತನ ಕಾಯಿಲೆಯನ್ನು ಪತ್ತೆ ಹಚ್ಚಲಾಗಿದ್ದು,ಈತನ ಎಡ ಶ್ವಾಸ ಕೋಶವನ್ನು ತೆಗೆದು ಹಾಕಲಾಗಿದೆ.
ಮೆಡಲ್ ದೊರಕುತ್ತಿದ್ದಂತೆ ಲೇಂಜ್ ವೇದಿಕೆಯಿಂದ ಒಂದೇ ಸಮನಾಗಿ ಧುಮುಕಿ ತನ್ನ ಮಗನ ಬಳಿಗೆ ಧಾವಿಸಿಹೋಗಿ ಭಾವಾವೇಶದಿಂದ ಆತನನ್ನು ತಬ್ಬಿ ಕೊಂಡನು.ಈತನ ಮಗನೂ ಈ ಹಿಂದೆ ಎರಡು ಬಾರಿ ಟೋರ್ನೋಡೋ ಕ್ಯಾಟಮಾರನ್ ಕ್ಲಾಸ್ ನಲ್ಲಿ ಬ್ರೋಂಜ್ ಮೆಡಲ್ ಗೆದ್ದಿದ್ದನು.ಲೇಂಜ್ ಹಾಗೂ ಸರೋಲಿ ಯವರು,ಆಸ್ಟ್ರೇಲಿಯಾದ ಜಾಸನ್ ವಾಟರ್ ಹೌಸ್ ಹಾಗೂ ಲಿಸಾ ದಾರ್ಮಾನಿಯನ್ ನವರನ್ನು ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಸೋಲಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿದ್ರು.

download
ನೋಡಿದ್ರಾ???ಅಯ್ಯೋ ವಯಸ್ಸಾಯ್ತಪ್ಪ!ನಮ್ಮಿಂದ ಇನ್ನೇನು ಮಾಡೋಕ್ ಸಾಧ್ಯ? ಅನ್ನೋವ್ರಿಗೊಂದು ಕಿವಿ ಮಾತು.ಸಾಧಿಸುವ ಮನಸ್ಸೊಂದು ಇದ್ದಲ್ಲಿ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ..ಎಂಬುದನ್ನು ನಾವು ಇಂಥವರಿಂದಲೇ ಕಲಿಯಬೇಕು.ಸಾಧನೆಗೂ ವಯಸ್ಸಿಗೂ ಹೋಲಿಕೆ ಮಾಡಬೇಡಿ.ಲೇಂಜ್ ಯು ಆರ್ ರಿಯಲಿ ಗ್ರೇಟ್!

39517036_-_17_08_2016_-_brazil_rio_2016_olympic_games_1

  • ಸ್ವರ್ಣಲತ ಭಟ್

POPULAR  STORIES :

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!

ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!

ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!

ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!

ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.

Share post:

Subscribe

spot_imgspot_img

Popular

More like this
Related

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...