ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಒಂದು ಶುಭ ಸುದ್ದಿ. ಇನ್ಮುಂದೆ ನಿಮ್ಮದು ಕಡಿಮೆ ಅಂಕ, ಸರ್ಕಾರಿ ಹುದ್ದೆಗೆ ಅಪ್ಲಿಕೇಶನ್ ಹಾಕಲು ಸಾಧ್ಯವಾಗೋದಿಲ್ಲ ಅನ್ಕೋಬೇಡಿ, ನೀವು ಜಸ್ಟ್ ಪಾಸ್ ಆದ್ರೂ ಸಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು..!
ಹೌದು. ರಾಜ್ಯದ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳ ಹುದ್ದೆಗಳಿಗೆ ಪ್ರಥಮ ಶ್ರೇಣಿ ಯಲ್ಲಿ ಪಾಸ್ ಆದವರಷ್ಟೇ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದೇ ಜಸ್ಟ್ ಪಾಸಾದವರು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದು..!
ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಹಿಂದೆ ಶೇ.60 ಅಂಕ ಕಡ್ಡಾಯ ಎಂಬ ನಿಯಮವಿತ್ತು. ಆದರೆ ನಿಗಮವು ಈ ನಿಯಮವನ್ನು ಸಡಿಲಗೊಳಿಸಿ ಶೇ.35 ಅಂಕ ಪಡೆದವರೂ ಸಹ ಅರ್ಜಿ ಸಲ್ಲಿಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು 1:3ರ ಬದಲಿಗೆ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲು ತೀರ್ಮಾನಿಸಿದೆ. ಇದಕ್ಕಾಗಿ ನಿಗಮದ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಡಳಿತ ಮತ್ತು ಸಿಬ್ಬಂಧಿ ಇಲಾಖೆ ಮತ್ತು ಕೆಪಿಎಸ್‍ಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನೊಂದು ತಿಂಗಳ ಒಳಗಾಗಿ ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸರ್ಕಾರ ಮತ್ತು ನಿಗಮ ಮಂಡಳಿಗಳಲ್ಲಿನ ಪದವಿ ಅರ್ಹತೆಯ ಹುದ್ದೆಗಳಿಗೆ ಶೇ.60 ರಷ್ಟು ಪಡೆದವರಿಗಷ್ಟೇ ಅಲ್ಲದೇ ಉತ್ತೀರ್ಣರಾದವರೂ ಅರ್ಜಿ ಸಲ್ಲಿಸಲು ಅರ್ಹರು. ಇದರಿಂದ ಬಡ ಮತ್ತು ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಿದ್ದಾರೆ.
POPULAR STORIES :
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!
ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!