ತಮಿಳುನಾಡಿಗೆ ನೀರು ಬಿಡಲ್ಲ: ಸಿಎಂ ಸ್ಪಷ್ಟನೆ.

Date:

ರಾಜ್ಯದಲ್ಲಿ ಕುಡಿಯಲೂ ನೀರಿಲ್ಲದಿರುವಾಗ ತಮಿಳನಾಡು ಕೃಷಿಗಾಗಿ ನೀರು ಕೇಳುತ್ತಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ತಮಿಳು ನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದೆಂದು ಅವರು ತಿಳಿಸಿದರು. ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ನದಿ ತುಂಬಿ ಹರಿದ್ದಾಗಲೆಲ್ಲಾ ತಮಿಳುನಾಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿದ್ದೇವೆ, ಆದರೆ ಈಗ ನಮ್ಮ ರಾಜ್ಯಕ್ಕೆ ಕುಡಿಯಲೂ ಸಹ ನೀರಿಲ್ಲ ಅಂತಹದ್ದರಲ್ಲಿ ತಮಿಳು ನಾಡಿಗೆ ನಾವು ಹೇಗೆ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಕೆಆರ್‍ಎಸ್‍ನಲ್ಲಿ ನೀರಿನ ಅಭಾವ ಎದುರಾಗಿದೆ ಆದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಈ ಕುರಿತು ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ತಮಿಳುನಾಡು ಕರ್ನಾಟಕ ನೀರು ಬಿಡುವಂತೆ ಒತ್ತಾಯಿಸಿ ನಿನ್ನೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ತಮಿಳುನಾಡಿಗೆ 50 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಕಾವೇರಿ ನ್ಯಾಯಾಧೀಕರಣ ತೀರ್ಪಿನಂತೆ ತಮಿಳುನಾಡಿನ ಪಾಲು ನೀರು ಬಿಡದಿದ್ದರೆ ಇಲ್ಲಿನ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗುತ್ತಾರೆ, ಈಗಾಗಲೇ ಸಾಕಷ್ಟು ಬೆಳೆ ಹಾಳಾಗಿರೋದ್ರಿಂದ ಅದರ ನಷ್ಟವನ್ನು ಕರ್ನಾಟಕ ಸರ್ಕಾರ ಭರಿಸಿಕೊಡಬೇಕು ಎಂದು ಮನವಿ ಮಾಡಿದ್ದರು. ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ತೀರಾ ಹದಗೆಟ್ಟಿದ್ದು ಕುಡಿಯಲು ಹಾಗೂ ವಿದ್ಯತ್ ಉತ್ಪಾದನೆ ಹೊರತುಪಡಿಸಿ ಇನ್ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸಬಾರದೆಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿರುವ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಾಂಬ ಬೆಳೆಗಾಗಿ ಕಾವೇರಿ ನೀರು ಕೇಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಹೀಗಾಗಿ ಮೈಸೂರು, ಮಂಡ್ಯ ಭಾಗಗಳಲ್ಲಿನ ರೈತರಿಗೆ ಕುತೂಹಲ ಕೆರಳಿಸಿತ್ತು. ಆದರೆ ಇಂದು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದಿರುವ ಸಿದ್ದರಾಮಯ್ಯನವರು, ಕೋರ್ಟ್‍ಗೆ ಈ ಕುರಿತು ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

POPULAR  STORIES :

ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!

ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...