ಪತಿಯೊಬ್ಬ ತನ್ನ ಪತ್ನಿಯ ಮೃತ ದೇಹ ಹೊತ್ತು ಸುಮಾರು 10 ಕಿ.ಮೀ ವರೆಗೆ ನಡೆದುಕೊಂಡೇ ಹೋದ ಅಮಾನವೀಯ ಘಟನೆ ಒಡಿಶಾದ ಅತ್ಯಂತ ಹಿಂದುಳಿದ ಹಾಗೂ ಬಡ ಪ್ರದೇಶವಾದ ಕಲ್ಲಹಂಡಿಯಲ್ಲಿ ನಡೆದಿದೆ.
ಕ್ಷಯಾ ರೋಗದಿಂದ ಬಳಲುತ್ತಿದ್ದ ಪತ್ನಿ ಸಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ತನ್ನ ಸ್ವಗ್ರಾಮವಿರುವುದು ಸುಮಾರು 50 ಕಿ.ಮೀ. ಆಗಿದ್ದರಿಂದ ಮೃತ ದೇಹ ಅಲ್ಲಿಯವರೆಗೂ ಸಾಗಿಸಲು ಕೈಯಲ್ಲಿ ಬಿಡಿಗಾಸುವಿರದ ಕಾರಣ, ಆಸ್ಪತ್ರೆಯವರಿಗೆ ಆಂಬುಲೆನ್ಸ್ ಸೇವೆ ಒದಗಿಸಿಕೊಡಿ ಎಂದು ಅಂಗಲಾಚಿದ್ದಾನೆ ಪತಿ ಮಾಜ್ಹಿ. ಆದರೆ ಆಸ್ಪತ್ರೆಯ ಸಿಬ್ಬಂಧಿಗಳು ತಿರಸ್ಕರಿಸಿದ್ದಾರೆ. ಬೇರೆ ದಾರಿ ಕಾಣದೇ ತನ್ನ ಪತ್ನಿಯ ಮೃತ ದೇಹವನ್ನು ಹೆಗಲ ಮೇಲೆ ಹಾಕಿಕೊಂಡು ತನ್ನ 12 ವರ್ಷದ ಮಗಳೊಂದಿಗೆ ಸುಮಾರು 10 ಕಿ.ಮೀ ವರೆಗೆ ನಡೆದುಕೊಂಡೆ ಸಾಗಿದ್ದಾನೆ ನೋಡಿ.
ದಯಾ ಮಾಜ್ಹಿ ಎಂಬ 42 ವರ್ಷದ ಈ ವ್ಯಕ್ತಿ ಕ್ಷಯಾ ರೋಗದಿಂದ ಬಳಲುತ್ತಿದ್ದ ತನ್ನ ಪತ್ನಿ 37 ವರ್ಷದ ಅಂಮಂಗ್ ಡೀ ಎಂಬಾಕೆಯನ್ನು ಕಲಹಂಡಿಯ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಳು. ತನ್ನ ಬಳಿಯಿದ್ದ ಅಲ್ಪ ಪ್ರಮಾಣದ ಹಣವನ್ನೆಲ್ಲಾ ಪತ್ನಿಯ ಚಿಕಿತ್ಸೆಗೆಂದು ಖರ್ಚು ಮಾಡಿದ್ದ ಮಾಜ್ಹಿ, ಮೃತ ದೇಹವನ್ನು ಸಾಗಿಸಲೂ ಒಂದು ಬಿಡಿಗಾಸು ಆತನ ಕೈಯಲ್ಲಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಆದರೆ ಆಸ್ಪತ್ರೆಯವರು ಆತನಿಗೆ ಸ್ಪಂದಿಸದ ಕಾರಣ ಬೇರೆ ದಾರಿ ಕಾಣದೇ ಮೃತ ದೇಹವವನ್ನು ಹೊತ್ತು ಸಾಗಿದ್ದಾನೆ. ಇದೇ ವೇಳೆ ದಾರಿ ಮಧ್ಯ ಸ್ಥಳೀಯ ಪತ್ರಿಕೆಯೊಂದು ಇದನ್ನು ಕಂಡು ಮಾಜ್ಹಿಯನ್ನು ಪ್ರಶ್ನಿಸಿದ್ದಾರೆ. ಆತ ನಡೆದ ವಿಷಯವನ್ನೆಲ್ಲಾ ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾನೆ. ಕೂಡಲೇ ಪತ್ರಕರ್ತರು ಸ್ಥಳೀಯ ಸರ್ಕಾರಿ ಆಸ್ಪತ್ರೆಯೊಂದರ ನೆರವಿನಿಂದ ಆಂಬುಲೆನ್ಸ್ ಸೇವೆ ಒದಗಿಸಿಕೊಟ್ಟಿದ್ದಾರೆ.
ಬಡವರಿಗೆ ಪ್ರಯೋಜನವಾಗಲಿ ಎಂದು ಕಳೆದ ಫೆಬ್ರವರಿಯಲ್ಲಿ ಅಲ್ಲಿನ ಸರ್ಕಾರ ಮಹಾ ಪ್ರಯಾಣವೆಂಬ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯ ಮೂಲಕ ಬಡ ಜನರಿಗೆ ಸಹಕಾರಿಯಾಗಲು ಉಚಿತ ಶವಗಳನ್ನು ರವಾನಿಸುವ ಕಾರ್ಯವನ್ನು ಕೈಗೊಂಡಿತ್ತು. ಆದರೆ ಈ ವಿಚಾರ ತಿಳಿದಿದ್ದರೂ ಸಹ ಮಾಜ್ಹಿ ವಿಚಾರದಲ್ಲಿ ಅಲ್ಲಿನ ಸರ್ಕಾರಿ ಆಸ್ಪತ್ರೆ ನಡೆದುಕೊಂಡ ಪರಿ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇನ್ನು ಸ್ಥಳೀಯ ಸಂಸದ ಕಲಿಕೇಶ್ ಸಿಂಗ್ ಡಿಯೋ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
https://youtu.be/TJ84KMHMYqg
POPULAR STORIES :
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???