ಇವರು ಒಬ್ಬ ಸಂಪ್ರದಾಯ ಬದ್ದ ಮುಸ್ಲಿಂ ಕುಟುಂಬ. ಆದರೂ ಹಿಂದೂ ಧರ್ಮ ಆರಾಧಕರು. ಹಿಂದೂಗಳ ಪಾಲಿನ ಪರಮ ದೈವ ಶ್ರೀ ಕೃಷ್ಣನ ಆರಾಧನೆಯನ್ನು ಸುಮಾರು 30 ವರ್ಷಗಳಿಂದ ಪಾಲಿಸುತ್ತಾ ಬರುತ್ತಿದ್ದಾರೆ. ಶ್ರೀ ಕೃಷ್ಣನ ಆರಾಧನೆಯಿಂದ ನಮಗೆ ಸಂತೃಪ್ತಿ ತಂದಿದೆ ಎನ್ನುತ್ತಾರೆ ಉತ್ತರ ಪ್ರದೇಶದ ಕಾನ್ಪುರ ನಿವಾಸಿ ಡಾ.ಅಹ್ಮದ್.
ವಸುದೈವ ಕುಟುಂಬಕಂ ಎಂಬ ಶ್ರೀ ಕೃಷ್ಣನ ತತ್ವದಿಂದ ಪ್ರಭಾವಿತರಾದ ಈ ಮುಸ್ಲಿಂ ಕುಟುಂಬವು ಕಳೆದ 29 ವರ್ಷಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಚಾಚೂ ತಪ್ಪದೇ ಪಾಲುಸ್ತಾ ಬಂದಿದ್ದಾರೆ.
ನನಗೆ ಮತಾಂಧತೆಯಲ್ಲಿ ನಂಬಿಕೆ ಇಲ್ಲ. ಆದ್ದ ಕಾರಣ ನಾನು ನಮ್ಮ ಕುಟುಂಬ ಸದಸ್ಯರೊಡನೆ ಸೇರಿ ಸಂತೋಷದಿಂದ ಕೃಷ್ಣನನ್ನು ಆರಾಧಿಸುತ್ತಾ ಬರುತ್ತಿದ್ದೇವೆ. ಈ ಕಾರ್ಯಕ್ಕೆ ಸ್ನೇಹಿತರು, ಬಂಧುಗಳು ಹಾಗೂ ನೆರೆಹೊರೆಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರಲ್ಲದೇ, ಅವರೂ ಸಹ ಈ ಸಂತೋಷದಲ್ಲಿ ಕೈ ಜೋಡಿಸುತ್ತಾರೆ ಎಂದು ತಿಳಿಸಿದರು. ಈ ಬಾರಿ ನಾವು 30ನೇ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದೇವೆ. ಕೃಷ್ಣ ಪರಮಾತ್ಮ ಸಂತೋಷ ಸಮೃದ್ದಿಯ ಜೊತೆಗೆ ಸಮಸ್ತರಿಗೂ ಪ್ರೀತಿ, ಶಾಂತಿ, ಹಾಗೂ ಭ್ರಾತೃತ್ವ ಭಾವನೆಯನ್ನು ಕರುಣಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.
ಮಂದಿರ, ಮಸೀದಿ, ಗುರುದ್ವಾರಗಳು ದೇವರನ್ನು ವಿಂಗಡಿಸಿ ಬಿಟ್ಟಿವೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ಶ್ರೀ ಕೃಷ್ಣನ ಮೇಲೆ ಅಪಾರ ಶ್ರದ್ದೆ, ಭಕ್ತಿ ಇದೆ. ನಮ್ಮ ಕುಟುಂಬದ ಸಂತೋಷ ನೆಮ್ಮದಿಯ ಜೊತೆಗೆ ನೆರೆಹೊರೆಯವರ ಪ್ರೀತಿ, ಶಾಂತಿ ಹಾಗೂ ಸೌಹಾರ್ಧತೆ ನೆಲೆಸಲಿ ಎನ್ನುವ ಸಂದೇಶ ಸಾರುವುದಕ್ಕಾಗಿ ಜನ್ಮಾಷ್ಟಮಿ ಆಚರಿಸುತ್ತೇವೆ ಎಂದರು.
ಮಥುರಾದ ಸ್ಥಳೀಯ ಮುಸ್ಲಿಂಗಳೂ ಕೂಡ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ನಾವು ಮತ್ತು ಹಿಂದೂ ಭಾಂಧವರು ಸಹೋಧರರಂತೆ ಇರುತ್ತೇವೆ. ಕೋಮು ಗಲಭೆಗೆ ಕಾರಣರಾಗುವವರು ರಾಜಕಾರಣಿಗಳು ಎಂದಿರುವ ಅವರು ದೇಶದ ಯಾವುದೇ ಭಾಗದಲ್ಲೂ ಕೋಮು ಗಲಭೆ ನಡೆದರೂ ನಮ್ಮ ಸಂಬಂಧದ ನಡುವೆ ಯಾವುದೇ ಒಡಕು ಉಂಟಾಗುವುದಿಲ್ಲ ಎನ್ನುತ್ತಾರೆ ಅಹ್ಮದ್
POPULAR STORIES :
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..