ನಮ್ಮ ದೇಶ ಹಾಗೂ ಜಪಾನ್ ನಡುವೆ ಒಂದು ಒಳ್ಳೆಯ ಬಾಂಧವ್ಯವಿದೆ ಹಾಗೂ ಇದನ್ನು ನಮ್ಮ ಪ್ರಧಾನಿ ಮೋದಿ ಹಾಗೂ ಶಿನ್ಜೋ ಏಬ್ ರನ್ನು ನೋಡಿದ ಮೇಲಂತೂ ನಮಗೆ ಇನ್ನಷ್ಟು ಸ್ಪಷ್ಟವಾಗುತ್ತದೆ.ಹಾಗೇನೆ ಜಪಾನಿಗಳ ಬಗೆಗೆ ತಿಳಿಯದ ಅದೆಷ್ಟೋ ವಿಷ್ಯಗಳಿವೆ..ಅದರತ್ತ ಒಂದು ನೋಟ…
1.ಟೋಕಿಯೋ ಬೀದಿಗಳಲ್ಲಿ ಡಸ್ಟ್ ಬಿನ್ ಗಳೇ ಇಲ್ಲವಂತೆ,ಯಾಕಂದ್ರೆ ಇಲ್ಲಿನ ಜನರು ತಾವು ಎಸೆಯುವ ಬೇಡದ ವಸ್ತುಗಳನ್ನು ತಮ್ಮ ಜೊತೆಯಲ್ಲೇ ಕೊಂಡೊಯ್ಯುತ್ತಾರಂತೆ,ಅಂದರೆ ಅವರ ಸ್ವಂತ ಬ್ಯಾಗುಗಳಲ್ಲೇ ತಗೆದುಕೊಂಡು ಹೋಗಿ ಅವರವರ ಮನೆಯಲ್ಲೇ ಎಸೆಯುತ್ತಾರಂತೆ.
2.ನೀವು ನಿಮ್ಮ ಫೋನ್,ವ್ಯಾಲೆಟ್ ಮೊದಲಾದವುಗಳನ್ನು ಕಳೆದುಕೊಂಡು ಬಿಟ್ಟಲ್ಲಿ,ನಿಮಗೆ ಅವುಗಳು ಪಕ್ಕದಲ್ಲೇ ಇರೋ ಪೋಲೀಸ್ ಸ್ಟೇಷನ್ ನಲ್ಲಿ ಲಭ್ಯ..(koban)
3.ಜಪಾನಿಗಳು ತೀರಾ ಪ್ರಾಮಾಣಿಕ ಮನುಷ್ಯರು.ಕಳ್ಳತನ ಮಾಡುವುದನ್ನು ಅವರು ಕನಸು ಮನಸಿನಲ್ಲೂ ಯೋಚಿಸಲಾರರು. ಅಫೀಸ್ ಗಳಲ್ಲಿ ರಿಫ್ರೆಷ್ಮೆಂಟ್ ಗಳನ್ನು ಹಾಗೇನೇ ಸ್ಟಾಲ್ ಗಳಲ್ಲಿ ಇಟ್ಟಿರುತ್ತಾರೆ ಹಾಗೂ ಅದಕ್ಕೆ ಸಂಬಂಧ ಪಟ್ಟಿರೋ ದುಡ್ಡಿಗಾಗಿ ಒಂದು ಬಾಕ್ಸ್ ಇಡಲಾಗುತ್ತದೆ.ಈ ಬಾಕ್ಸ್ ಗಳಲ್ಲಿ ಆಹಾರ ತೆಗೆದುಕೊಂಡಿರೋರೆಲ್ಲಾ ಹಣವನ್ನು ಹಾಕುತ್ತಾರೆ,ಆದ್ರೆ ಯಾರೂ ಇದನ್ನು ಚೆಕ್ ಮಾಡುವುದೇ ಇಲ್ಲ ನೋಡಿ.
4.ದೆಹಲಿಯ ಮೆಟ್ರೋ ಟೋಕಿಯೋ ಮೆಟ್ರೋ ತದ್ರೂಪವೇ ಸರಿ! ಅದ್ರೆ ಟೋಕಿಯೋದ ಜನಸಂಖ್ಯೆ ಯ ಪ್ರಭಾವ ಮೆಟ್ರೋ ಮೇಲೆ ಯಾವ ಕೆಟ್ಟ ಪರಿಣಾಮವನ್ನೂ ಬೀರದೆ ಅದನ್ನು ಸುವ್ಯವಸ್ಥಿತವಾಗಿ ಸಂಚರಿಸುವಂತೆ ಮಾಡಿದೆ.
5.ಜಪಾನಿಗಳ ಕ್ಯೂ ಸಿಸ್ಟಂ ಅದ್ಭುತವಾಗಿದೆ ನೋಡಿ! ಅದು ಮೆಟ್ರೋ ಆಗಿರಲಿ,ಮಾಲ್ ಆಗಿರಲೀ,ಎಸ್ಕಲೇಟರ್ ಹಾಗೂ ಯಾವುದೇ ಸಿಗ್ನಲ್ಸ್ ಆಗಿರಲೀ,ಜನ ತಾವಾಗಿಯೇ ಲೈನ್ ನಲ್ಲಿ ನಿಂತು ಪರಸ್ಪರರನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ.
6.ಜಪಾನ್ ನ ಜನರು ಎಸ್ಕಲೇಟರ್ ನಲ್ಲಿ ಎಡ ಬದಿಗೆ ನಿಂತುಕೊಂಡು ಬೇಗನೇ ಹೋಗ ಬೇಕಾದ ವ್ಯಕ್ತಿಗಳಿಗೆ ತಾವಾಗಿಯೇ ದಾರಿ ಮಾಡಿಕೊಡುತ್ತಾರೆ,ಈ ರೀತಿಯಾಗಿ ಮಾಡಲು ಅವರಿಗೆ ಯಾರೂ ಒತ್ತಡ ಹಾಕುವುದಿಲ್ಲ ಬದಲಾಗಿ ತಾವೇ ಸ್ವಾಭಾವಿಕವಾಗಿ ನಿಂತು ಉಳಿದವರಿಗೆ ದಾರಿ ಮಾಡಿಕೊಡುತ್ತಾರೆ.ವಾವ್! ಹಿಂಗಿರ್ಬೇಕು!ಅಮೇಜಿಂಗ್ ಜನ ಅಲ್ಲವೇ???
7.ಜಪಾನಿಯರು ತಮ್ಮ ಬೈಸಿಕಲ್ ನ ಯಾವುದೇ ಲಾಕ್ ಇಲ್ಲದೇ ರಸ್ತೆಗಳಲ್ಲೆ ಪಾರ್ಕಿಂಗ್ ಮಾಡುತ್ತಾರಂತೆ.
8.ಕ್ರಿಸ್ಮಸ್ ಡಿನ್ನರ್ ಗೆ ಕೆ.ಎಫ್.ಸಿ ಫ಼್ರೈಡ್ ಚಿಕನ್ ತಿನ್ನೋದು ಇಲ್ಲಿನ ಸಂಪ್ರದಾಯವಂತೆ.
ಹಿಂದೆ 1970 ರಲ್ಲಿ ಒಂದು ಬಾರಿ ಕ್ರಿಸಮಸ್ ದಿನ ಜಪಾನ್ ಗೆ ಬಂದಿದ್ದ ಅಮೇರಿಕನ್ನರಿಗೆ ತಿನ್ನಲು ಎಲ್ಲೂ ಫ಼್ರೈಡ್ ಚಿಕನ್ ಸಿಗಲಿಲ್ಲವಂತೆ,ಇದನ್ನು ಮನಗಂಡ ಕೆ.ಎಫ್.ಸಿ ಸಂಸ್ಥೆಯು ಮೊತ್ತಮೊದಲು ತನ್ನ ಶಾಖೆಯನ್ನು ಟೋಕಿಯೋದಲ್ಲಿ ತೆರೆಯಿತಂತೆ.ಅಲ್ಲಿಂದ ಮತ್ತೆ ಅವರಿಗೆ ಅದೇ ಸಂಪ್ರದಾಯವಾಯಿತಂತೆ.ಕ್ರಿಸ್ಮಸ್ ಜಪಾನಿನಲ್ಲಿ ನ್ಯಾಷನಲ್ ರಜಾ ದಿನವಲ್ಲವಂತೆ.
9. 5 ಹಾಗು 50 ಯೆನ್ ನಾಣ್ಯ ಗಳ ನಡುವೆ ಒಂದು ಹೋಲ್ ಇರುತ್ತದೆ.5 ಯೆನ್ ಅಂದರೆ ಜಪಾನಿಸ್ ಭಾಷೆಯಲ್ಲಿ “ಗೋ ಎನ್” ಎಂದರ್ಥ(ಗೋ ಎಂದರೆ ಗೌರವ,ಎನ್ ಎಂದರೆ ಒಳ್ಳೆಯ ಸಂಬಂಧ)ಅಂದರೆ ಇದು ಒಂದು ಗೌರವ ಯುತವಾದ ಸಂಬಂಧ ವನ್ನು ಸೂಚಿಸುವಂತದ್ದು ಹಾಗೂ ಅದೃಷ್ಟ ಸೂಚಿಸುವಂಥದ್ದೂ ಆಗಿರುವುದರಿಂದ(honourably good luck) ಇದನ್ನು ದೇವಸ್ಥಾನದಲ್ಲಿ ಎಸೆದು ಬಿಡುತ್ತಾರಂತೆ ಯಾಕಂದರೆ ಅವರ ನಂಬಿಕೆ ಯಂತೆ ಅವರಿಗೆ ಅದೃಷ್ಟ,ಸ್ನೇಹ ಹಾಗು ಪ್ರೀತಿ ತರೋ ಹೊಸ ಜನರ ಭೇಟಿ ಅಗುತ್ತದಂತೆ, ಇನ್ನು 50 ಯೆನ್ ಅಂದರೆ “ಗೋ ಜೂ” ಎಂದರ್ಥ.( ಜೂ ಎಂದರೆ 5 ಲೇಯರ್ಸ್ ಅಥವಾ 5 ಪಟ್ಟು ಅಧಿಕ) ಅದೃಷ್ಟ 5 ಪಟ್ಟು ಅಧಿಕ ವಾಗುತ್ತದಂತೆ.
ಜಪಾನಿಗಳ ನಂಬಿಕೆಯಂತೆ ಅವರುಗಳು New year ದಿನದಂದು ಅನೇಕ ರಂಧ್ರಗಳಿರುವ ಲೋಟಸ್ ರೂಟ್ ಗಳನ್ನು ತಿನ್ನುತ್ತಾರಂತೆ ಇದರಿಂದ ಅವರಿಗೆ ತಮ್ಮ ಮುಂದಿನ ಭವಿಷ್ಯದಲ್ಲಿ ಯಾವುದೇ ಅಡೆ ತಡೆ ಗಳು ಬರಲಾರದು ಎಂಬ ನಂಬಿಕೆಯಿದೆ.ಆ ರಂಧ್ರಗಳಿಗೂ ಈ ನಾಣ್ಯಕ್ಕೂ ಅದೇ ಸಂಬಂಧವಂತೆ.
10.ಜಪಾನ್ ನಲ್ಲಿ ತಯಾರಾಗೋ ಎಲ್ಲಾ ಆಹಾರ ಪದಾರ್ಥಗಳೂ ತುಂಬಾ ರುಚಿಕರವಾದ ಸ್ವಾದ ವನ್ನು ನೀಡುತ್ತದಂತೆ ,ಮೆಕ್ ಡೊನಾಲ್ಡ್ ಕೂಡ ಆ ಸ್ವಾದಕ್ಕೆ ಅಚ್ಚರಿ ಪಟ್ಟಿದೆಯಂತೆ.
- ಸ್ವರ್ಣಲತ ಭಟ್
POPULAR STORIES :
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..