ವಾರಣಾಸಿ ನಿವಾಸಿಯಾದ ಈ ವೃದ್ದ ಸನ್ಯಾಸಿಯ ವಯಸ್ಸನ್ನು ಕೇಳುದ್ರೆ ನಿವು ಬೆಚ್ಚಿ ಬೀಲೋದಂತೂ ಗ್ಯಾರೆಂಟಿ… ಮನುಷ್ಯನ ಆಯಸ್ಸು 100 ವರ್ಷ ಅಂತ ಹೇಳ್ತಾರೆ ಆದ್ರೆ ಈ ವೃದ್ದನ ವಯಸ್ಸು ಕೇಳಿದ್ರೆ ನೀವೇ ಆಶ್ಚರ್ಯವಾಗ್ತೀರ..! ಗಿನ್ನೀಸ್ ದಾಖಲೆಗೆ ಶಿಫಾರಸ್ಸುಗೊಂಡಿರೋ ಈ ಅಜ್ಜನ ವಯಸ್ಸು ಬರೋಬ್ಬರಿ 120 ವರ್ಷ..! ಆಶ್ಚರ್ಯವಾದ್ರೂ ಸತ್ಯ. ಈ ದೀರ್ಘಾಯುಷಿ ಸನ್ಯಾಸಿಯ ಆಯುಷ್ಯದ ಗುಟ್ಟು ಏನು ಗೊತ್ತಾ…? ಯೋಗ..
ಹೌದು.. ಸುಮಾರು 120 ವರ್ಷಗಳ ಕಾಲ ಜೀವಿಸಿರುವ ವಾರಣಾಸಿಯ ಸ್ವಾಮಿ ಶಿವಾನಂದ್ ಅಲ್ಲಿನ ದೇವಾಸ್ಥಾನವೊಂದರ ಅರ್ಚಕರಾಗಿದ್ದು, ಅವರು ಪ್ರತಿನಿತ್ಯವೂ ಯೋಗ ವ್ಯಾಯಾಮಗಳನ್ನು ಮಾಡುತ್ತಾರಂತೆ. ನನ್ನ ವಯಸ್ಸು 120 ವರ್ಷವೆಂದು ಹೇಳಿಕೊಂಡಿರುವ ಈ ಸನ್ಯಾಸಿ ಆಗಸ್ಟ್ 8, 1896 ರಲ್ಲಿ ಜನಿಸಿದ್ದಾರೆ.
120 ವರ್ಷವಾದ್ರೂ ಇನ್ನೂ ಸಧೃಡವಾಗಿರುವ ಶಿವಾನಂದ್ ಪ್ರತಿದಿನ ಕೆಲವು ಗಂಟೆಗಳ ಕಾಲ ಯೋಗವನ್ನು ಮಾಡುತ್ತಾರಂತೆ. ವ್ಯಾಯಾಮ, ಶಿಸ್ತು ಹಾಗೂ ಬ್ರಹ್ಮಚರ್ಯದ ಪಾಲನೆಯೇ ನನ್ನ ದೀರ್ಘಾಯುಷ್ಯದ ಗುಟ್ಟು ಎಂದು ಹೇಳಿಕೊಂಡಿದ್ದಾರೆ. ಬರಿ ಚಾಪೆಯಲ್ಲಿ ಮಲಗುವ ಇವರು ತಲೆದಿಂಬು ಬಿಟ್ಟರೆ ಬೇರೇನು ಬಳಸುವುದಿಲ್ಲ. ಸದ್ಯಕ್ಕೆ ದೀರ್ಘಾಯುಷಿ ಶಿವಾನಂದ್ ಅವರ ಹೆಸರು ವಿಶ್ವ ದಾಖಲೆಗೆ ಸೇರ್ಪಡೆಗೊಳ್ಳಲಿದೆ. ಈ ಹಿಂದೆ ಜಪಾನ್ ದೆಶದ ಜಿರೋಮನ್ ಕಿಮುರಾ ಎನ್ನುವವವರು ಅತೀ ದೀರ್ಘಾವಧಿ ಜೀವಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2013ರಲ್ಲಿ ಸಾವನ್ನಪ್ಪಿದಾದ ಅವರ ವಯಸ್ಸು 116 ವರ್ಷ 54 ದಿನಗಳಾಗಿತ್ತು.
POPULAR STORIES :
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?