ಪ್ರಸಕ್ತ ವರ್ಷದಲ್ಲಿ ಭಾರತೀಯ ಗ್ರಾಹಕರಿಗೆ ಬಂಪರ್ ಆಫರ್‍ಗಳ ಸುರಿಮಳೆಯನ್ನೇ ಟೆಲಿಕಾಂ ಸಂಸ್ಥೆಗಳು ನೀಡುತ್ತಾ ಬಂದಿದೆ. ಇದೀಗ ಮಾರುಕಟ್ಟೆಯಲ್ಲಿ ರಿಲಯಾನ್ಸ್ ಜಿಯೋ 4ಜಿ ಪೈಪೋಟಿಯನ್ನು ಎದುರಿಸಲು ಏರ್‍ಟೆಲ್ ಕಂಪನಿ ಗ್ರಾಹಕರಿಗೆ ಭಾರೀ ಪ್ರಮಾಣದ ರಿಯಾಯಿತಿ ನೀಡಲು ಸಿದ್ದವಾಗಿದೆ. ಇನ್ಮುಂದೆ ಏರ್‍ಟೆಲ್ 4ಜಿ ಸೇವೆ ಬಾರೀ ಅಗ್ಗದ ಪ್ರಮಾಣದಲ್ಲಿ ದೊರೆಯಲಿದೆ. ಗ್ರಾಹಕರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಭಾರತೀ ಏರ್‍ಟೆಲ್ ಸಂಸ್ಥೆ ತನ್ನ 3ಜಿ ಹಾಗೂ 4ಜಿ ಸೇವೆಯ ದರವನ್ನು ಶೇ. 80ರಷ್ಟು ಕಡಿತಗೊಳಿಸಲು ತೀರ್ಮಾನಿಸಿದೆ. ಕೇವಲ 51ರೂ.ಗೆ 1ಜಿಬಿ ಡಾಟಾ ಸೇವೆಯನ್ನು ನೀಡುವ ಮೂಲಕ ಜಿಯೋ 4ಜಿ ಜೊತೆ ಪೈಪೋಟಿಗಿಳಿದಿದೆ.
ಏರ್‍ಟೆಲ್ ಚಂದಾದಾರರು 1498ರೂ ರಿಚಾರ್ಜ್ ಮಾಡಿಕೊಂಡರೆ 30 ದಿನಗಳ ಅವಧಿಗೆ 1ಜಿಬಿ 3ಜಿ ಹಾಗೂ 4ಜಿ ಸೇವೆಯನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಪಡೆದ 1ಜಿಬಿ ಡೇಟಾ ಮುಕ್ತಾಯಗೊಂಡ ನಂತರ ಮುಂದಿನ ಪ್ರತಿ 1ಜಿಬಿ ಡೇಟಾ ಸೇವೆಯನ್ನು 12 ತಿಂಗಳವರೆಗೂ ಕೇವಲ 51ರೂಪಾಯಿಯ ದರದಲ್ಲಿ ಪಡೆಯಬಹುದಾಗಿದೆ. ಈ ಹಿಂದೆ ಏರ್‍ಟೆಲ್ 4ಜಿ ಸೇವಾ ದರ 259ರೂಗೆ 1ಜಿಬಿ ಡೇಟಾ ಸೇವೆಯನ್ನು ನೀಡುತ್ತಿತ್ತು. ಇದೀಗ 12 ತಿಂಗಳವರೆಗೆ ಅನಿಮಿಯಮಿತವಾಗಿ 3ಜಿ ಹಾಗೂ 4ಜಿ ಸೇವೆಯನ್ನು ಆನಂದಿಸಬಹುದಾಗಿದೆ.
POPULAR STORIES :
18 ವರ್ಷ ತುಂಬುದ್ರೆ 37 ಸಾವಿರ ಆಫರ್…!
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!