ಇನ್ಮುಂದೆ ಪಾಕ್‍ನಲ್ಲಿ ಭಾರತೀಯ ಪ್ರಸಾರ ಚಾನಲ್‍ಗಳನ್ನು ನೋಡುವ ಹಾಗಿಲ್ಲ..! ಭಾರತೀಯ ಪ್ರಸಾರ ಮಾಧ್ಯಮಗಳಿಗೆ ಲ್ಯಾಂಡಿಕ್ ಹಕ್ಕು ಇಲ್ಲದೇ ಇರೋದ್ರಿಂದ ಪಾಕಿಸ್ತಾನ ಭಾರತೀಯ ಟಿವಿ ಚಾನಲ್‍ಗಳ ಪ್ರಸಾರವನ್ನು ನಿಷೇಧಿಸಿದೆ. ಇದೀಗ ಪಾಕ್‍ನಲ್ಲಿ ಹೊಸ ಡಿಟಿಹೆಚ್ ಸೇವೆ ಆರಂಭವಾಗಿದ್ದು, ಪಾಕ್‍ನ ಹೊಸ ನಿಯಮವನ್ನು ಪಾಲಿಸದ ಎಲ್ಲಾ ಕೇಬಲ್ ಆಪರೇಟರ್‍ಗಳ ವಿರದ್ದ ಕಠಿಣ ಕ್ರಮಕ್ಕೆ ಪಾಕ್‍ನ ವಿದ್ಯುನ್ಮಾನ ನಿಯಂತ್ರಣಾ ಪ್ರಾಧಿಕಾರ ಮುಂದಾಗಲಿದೆ. ಪಾಕ್‍ನಲ್ಲಿ ಈ ಕ್ಷಣದಿಂದಲೇ ಭಾರತೀಯ ಡಿಟಿಹೆಚ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿರುವ ಪ್ರಾಧಿಕಾರ, ಭಾರತೀಯ ಮೂಲದ ಯಾವ ಪ್ರಸಾರ ಮಾಧ್ಯಮಕ್ಕೂ ಲ್ಯಾಂಡಿಂಕ್ ಹಕ್ಕು ಇಲ್ಲದೇ ಇರೋದ್ರಿಂದ ಈ ನೀತಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಕಾನೂನು ಅಗತ್ಯಗಳೆಲ್ಲವನ್ನೂ ಪೂರೈಸಿಕೊಳ್ಳಲು ಕೇಬಲ್ ಆಪರೇಟರ್‍ಗಳು ಹಾಗೂ ಸ್ಯಾಟಲೈಟ್ ಚಾನಲ್‍ಗಳಿಗೆ ಈಗಾಗಲೇ ಪಾಕ್ ಕಾಲಾವಕಾಶ ನೀಡಿದ್ದು, ಅದರೊಳಗೆ ಭಾರತೀಯ ವಾಹಿನಿಗಳನ್ನು ಬಂದ್ ಮಾಡದೇ ಇದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಕೇಬಲ್ ನಿರ್ವಾಹಕರಿಗೆಲ್ಲಾ ಅಕ್ಟೋಬರ್ 15ರ ವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
POPULAR STORIES :
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.