ಈ ಬಾರಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಸಾಲು ಸಾಲು ರಜೆಯಿಂದಾಗಿ ಫುಲ್ ಖುಷಿಯಲ್ಲಿ ಕುಟುಂಬರಸ್ಥರ ಜೊತೆ ಕಾಲ ಕಳೆಯುತ್ತಿದ್ದರೆ, ಇತ್ತ ರಾಜ್ಯದ ಪೊಲೀಸರಿಗೆ ಮಾತ್ರ ಆ ಭಾಗ್ಯ ಕರುಣಿಸಿಲ್ಲ ನೋಡಿ..!
ಕಳೆದ ಜುಲೈ 25 ರಿಂದ ಆರಂಭವಾದ ಬಸ್ ಮುಷ್ಕರ, ಜುಲೈ 30ಕ್ಕೆ ಕರ್ನಾಟಕ ಬಂದ್, ಸೆಪ್ಟೆಂಬರ್ 2 ರಂದು ಕಾರ್ಮಿಕರ ಬಂದ್, ಗಣೇಶ ಚತುರ್ಥಿ, ಇದೀಗ ಸೆ. 9ಕ್ಕೆ ಕರ್ನಾಟಕ ಬಂದ್‍ನಿಂದಾಗಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಎಲ್ಲರೂ ರಜೆಯ ಬ್ಯುಸಿಯಲ್ಲಿದ್ದರೆ, ಇವರುಗಳು ಮಾತ್ರ ಡ್ಯೂಟಿಯಲ್ಲಿ ಬ್ಯುಸಿಯಲ್ಲಿದ್ದಾರೆ ನೋಡಿ…!
ಇಷ್ಟೇ ಅಲ್ಲ ಮುಂದೆ ಇವರಿಗೆ ಕೆಲಸಗಳ ಒತ್ತಡಗಳು ರಾಶಿಗಟ್ಟಲೆ ಬಂದು ಅವರ ಹೆಗಲ ಮೇಲೇರಿದೆ ನೋಡಿ.. ಶುಕ್ರವಾರದ ಬಂದ್, ಗಣೇಶ ವಿಸರ್ಜನೆಗಳು, ಬಕ್ರೀದ್‍ಗಳಿಗೆ ಇವರೆಲ್ಲರೂ ಬಂದೊಬಸ್ತ್ ನೀಡಬೇಕು. ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ಇವರ ಕರ್ತವ್ಯವಾಗಿದೆ. ಸಾಲು ಸಾಲು ಕೆಲಸದ ಒತ್ತಡಗಳಿಂದ ಪಾಪ ಈ ಪೊಲೀಸರಿಗಂತೂ ವಿಶ್ರಾತಿಯೇ ಇಲ್ಲದಂತಾಗಿದೆ.
ಜುಲೈ 25 ರಂದು ಮೂರು ದಿನಗಳ ಕಾಲ ಸರ್ಕಾರಿ ಬಸ್ ನೌಕರರ ಮುಷ್ಕರವಿತ್ತು, ಅದು ಮುಗೀತು ಅನ್ನೋವಷ್ಟರಲ್ಲಿ ಮಹಾದಾಯಿ ನದಿ ನೀರಿನ ತೀರ್ಪು ವಿರೋಧಿಸಿ ನಡೆದ ಕರ್ನಾಟಕ ಬಂದ್, ಆನಂತರ ಬಿಬಿಎಂಪಿಯಿಂದ ಎರಡು ದಿನಗಳ ಬೃಹತ್ ಪ್ರತಿಭಟನೆ, ಭಾರತ್ ಬಂದ್, ಗಣೇಶ ಚತುರ್ಥಿ, ಮುಂದೆ ಸೆ. 9 ಕರ್ನಾಟಕ ಬಂದ್, ಸೆ. 12 ಬಕ್ರೀದ್ ಹೀಗೆ ಪೊಲೀಸರಿಗೆ ಅಪರಾಧ ಪ್ರಕರಣಗಳ ಜೊತೆಗೆ ಈ ಎಕ್ಸ್‍ಟ್ರಾ ವೇಳಾ ಪಟ್ಟಿಯೂ ಕೂಡ ಈಗಾಗಲೇ ಸಿದ್ಧಪಡಿಸಲಾಗಿದೆ ನೋಡಿ.. ಎಲ್ಲರೂ ರಜೆಯ ಮಜದಲ್ಲಿ ತೊಡಗಿದ್ದರೆ ಇತ್ತ ಪೊಲೀಸರಿಗೆ ಮಾತ್ರ ಆ ಭಾಗ್ಯ ಕರುಣಿಸಲೇ ಇಲ್ಲ…!
POPULAR STORIES :
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?