ಬೆಂಗಳೂರು : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರಾದ್ರೂ ಸದ್ಯಕ್ಕೆ ಅವರಿಗೆ ಬಿಡುಗಡೆ ಭಾಗ್ಯವಿಲ್ಲ. ಮೊತ್ತೊಂದು ಪೋಕ್ಸೋ ಕೇಸ್ನಲ್ಲಿ ಜಾಮೀನು ಪಡೆಯಬೇಕಿದೆ. 2022ರ ಸೆಪ್ಟಂಬರ್ 1ರಂದು ಅಪ್ರಾಪ್ತ ಬಾಲಕಿ ಮೇಲೆ ದಾಖಲಾಗಿದ್ದ ಒಂದು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ಅರೆಸ್ಟ್ ಮಾಡಲಾಗಿತ್ತು. 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
7 ಷರತ್ತುಗಳನ್ನ ವಿಧಿಸಿ ಜಾಮೀನು ಮಂಜೂರು
• ಚಿತ್ರದುರ್ಗ ಪ್ರವೇಶ ನಿರ್ಬಂಧ, ಮಠಕ್ಕೆ ತೆರಳುವಂತಿಲ್ಲ
• ಇಬ್ಬರ ಶ್ಯೂರಿಟಿ, 2 ಬಾಂಡ್ ನೀಡಲು ಕೋರ್ಟ್ ಸೂಚನೆ
• ತಪ್ಪದೇ ವಿಡಿಯೋ ಕಾನ್ಫರೆನ್ಸ್ನಲ್ಲಿ ವಿಚಾರಣೆಗೆ ಹಾಜರಾಗಬೇಕು
• ಹೈಕೋರ್ಟ್ ಏಕಸದಸ್ಯ ಪೀಠದಿಂದ ಷರತ್ತುಬದ್ಧ ಜಾಮೀನು
• ಇಬ್ಬರು ಅಪ್ರಾಪ್ತರು ನೀಡಿದ್ದ ಪ್ರಕರಣದಲ್ಲಿ ಜಾಮೀನು
• ಈ ಕೇಸ್ನಲ್ಲಿ ಎರಡು ಪ್ರತ್ಯೇಕ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು
• ಜಾಮೀನು ಅರ್ಜಿ ನಿರಾಕರಿಸಿದ್ದ ಅಧೀನ ನ್ಯಾಯಾಲಯ
• ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಶಿವಮೂರ್ತಿ
• ಜಾಮೀನು ಮಂಜೂರಾದ್ರೂ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ
• ಮೊತ್ತೊಂದು ಪೋಕ್ಸೋ ಕೇಸ್ನಲ್ಲಿ ಪಡೆಯಬೇಕಿದೆ ಜಾಮೀನು
ಮುರುಘಾಶರಣರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
Date: